ಸತತ ಸೋಲುಗಳಿಂದ ಕಂಗೆಟ್ಟ ವಿಜಯ್ ಆಂಟೋನಿ; ಸೆ.27ರಂದು ತೆರೆಕಂಡ ಹಿಟ್ಲರ್ ಸಿನಿಮಾ ಒಟಿಟಿ ಎಂಟ್ರಿ, ಯಾವ ಪ್ಲಾಟ್‌ಫಾರ್ಮ್?
ವಿಜಯ್ ಆಂಟೋನಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಇತ್ತೀಚೆಗೆ ತೆರೆ ಕಂಡ ಸಸ್ಪೆನ್ಸ್ ಥ್ರಿಲ್ಲರ್ ತಮಿಳು ಸಿನಿಮಾ ಹಿಟ್ಲರ್, ಒಟಿಟಿ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 25, ಶುಕ್ರವಾರದಿಂದ ತಮಿಳು ವರ್ಷನ್ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ತೆಲುಗು ವರ್ಷನ್ ನೇರವಾಗಿ ಒಟಿಟಿಯಲ್ಲೇ ರಿಲೀಸ್ ಆಗಲಿದೆ.
Suspense Thriller OTT: ವಿಜಯ್ ಆಂಟೋನಿ ನಾಯಕನಾಗಿ ನಟಿಸಿರುವ ಹಿಟ್ಲರ್ ಸಿನಿಮಾ ಇದೇ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದ್ದು, ಅಮೆಜಾನ್ ಪ್ರೈಮ್ ಇಂಡಿಯಾ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ.
ದೇವರ ಸಿನಿಮಾಗಾಗಿ ಹಿಂದೆ ಸರಿದ ಹಿಟ್ಲರ್ ತೆಲುಗು ವರ್ಷನ್
ಹಿಟ್ಲರ್ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರದಲ್ಲಿ ವಿಜಯ್ ಆಂಟೋನಿ ಜೋಡಿಯಾಗಿ ರಿಯಾ ಸುಮನ್ ನಟಿಸಿದ್ದಾರೆ. ಜೊತೆಗೆ ಗೌತಮ್ ವಾಸುದೇವ್ ಮೆನನ್, ಚರಣ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸ್ಟೂಡೆಂಟ್ ಧನ, ನಿರ್ದೇಶನ ಮಾಡಿದ್ದಾರೆ. ಹಿಟ್ಲರ್ ತಮಿಳು ಸಿನಿಮಾ ಸೆಪ್ಟೆಂಬರ್ 27 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಅದೇ ದಿನ ಈ ಸಿನಿಮಾ ತೆಲುಗು ಭಾಷೆಯಲ್ಲೂ ರಿಲೀಸ್ ಆಗಬೇಕಿತ್ತು. ಚಿತ್ರತಂಡ ಹೈದರಾಬಾದ್, ವಿಜಯವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಚರಿಸಿ ಪ್ರಮೋಷನ್ ಮಾಡಿದ್ದರು. ತೆಲುಗಿನಲ್ಲಿ ಟೀಸರ್, ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಆದರೆ ತೆಲುಗಿನಲ್ಲಿ ಅಂದುಕೊಂಡ ದಿನ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ.
ಸೆಪ್ಟೆಂಬರ್ 27 ರಂದು ಜ್ಯೂನಿಯರ್ ಎನ್‌ಟಿಆರ್ ಅಭಿನಯದ ದೇವರ ಸಿನಿಮಾ ದೇಶಾದ್ಯಂತ ತೆರೆ ಕಂಡಿತ್ತು. ಈ ಸಿನಿಮಾ ಕಾರಣ ತೆಲುಗಿನಲ್ಲಿ ಹಿಟ್ಲರ್ ಚಿತ್ರಕ್ಕೆ ಥಿಯೇಟರ್‌ಗಳು ದೊರೆಯುವುದು ಕಷ್ಟವಾಗಿತ್ತು. ಆದ್ದರಿಂದ ತೆಲುಗಿನಲ್ಲಿ ನಿಧಾನವಾಗಿ ರಿಲೀಸ್ ಮಾಡಲು ಬೇರೆ ದಿನಾಂಕ ಫಿಕ್ಸ್ ಮಾಡಲಾಗಿತ್ತು. ಆದರೆ ತಮಿಳಿನಲ್ಲಿ ಈ ಸಿನಿಮಾ ಫ್ಲಾಪ್ ಆದ್ದರಿಂದ ಮತ್ತೆ ತೆಲುಗಿನಲ್ಲಿ ರಿಲೀಸ್ ಮಾಡಲಿಲ್ಲ. ಇದೀಗ ತೆಲುಗು ಭಾಷೆಯಲ್ಲಿ ಹಿಟ್ಲರ್ ಸಿನಿಮಾ ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಕ್ಟೋಬರ್ 25, ಶುಕ್ರವಾರ ರಿಲೀಸ್ ಆಗುತ್ತಿದೆ.
ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ವಿಜಯ್ ಆಂಟೋನಿ
ಮಿನಿಸ್ಟರ್ ಮೈಖೆಲ್ (ಚರಣ್ ರಾಜ್)ಗೆ ಆಪ್ತರಾದವರು ಒಬ್ಬೊಬ್ಬರೇ ಹತ್ಯೆಯಾಗುತ್ತಿರುತ್ತಾರೆ. ಮೈಖೆಲ್‌ಗೆ ಸೇರಿದ ಕೋಟಿ ರೂ ಬ್ಲಾಕ್ ಮನಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಕದಿಯುತ್ತಾನೆ. ಈ ಕೇಸನ್ನು ಡೆಪ್ಯೂಟಿ ಪೊಲೀಸ್ ಕಮಿಷನರ್ (ಗೌತಮ್ ವಾಸುದೇವಮೆನನ್) ತನಿಖೆ ಮಾಡಲು ಆರಂಭಿಸುತ್ತಾರೆ. ಈ ತನಿಖೆಯಲ್ಲಿ ಸೆಲ್ವ (ವಿಜಯ್ ಆಂಟೋನಿ) ಈ ಎಲ್ಲಾ ಹತ್ಯೆಗೂ ಕಾರಣ ಎಂಬ ನಿಜಾಂಶ ಬೆಳಕಿಗೆ ಬರುತ್ತದೆ. ಒಂದು ಪುಟ್ಟ ಹಳ್ಳಿಯ ಸೆಲ್ವ, ಚೆನ್ನೈನಂತ ನಗರಕ್ಕೆ ಬಂದು ಮಿನಿಸ್ಟರ್‌ನನ್ನು ಏಕೆ ಟಾರ್ಗೆಟ್ ಮಾಡುತ್ತಾನೆ? ಆತ ಪ್ರೀತಿಸಿದ ಅಭಿ ಯಾರು ಎನ್ನುವುದು ಈ ಸಿನಿಮಾ ಕಥೆ.
ಈ ವರ್ಷ ತೆರೆ ಕಂಡ ವಿಜಯ್ ಆಂಟೋನಿ ಸಿನಿಮಾಗಳಲ್ಲಿ ಫ್ಲಾಪ್ ಆಗಿರುವುದು ಇದು ಮೂರನೇ ಸಿನಿಮಾ. ಹಿಟ್ಲರ್‌ಗೂ ಮುನ್ನ ತೆರೆ ಕಂಡ ರೋಮಿಯೋ ಹಾಗೂ ತುಫಾನ್ ಸಿನಿಮಾಗಳು ಕೂಡಾ ಬಾಕ್ಸ್ ಆಫೀಸಿನಲ್ಲಿ ಸೋಲುಂಡವು. ಸತತ ಸೋಲಿನಿಂದ ಕಂಗೆಟ್ಟಿರುವ ವಿಜಯ್ ಆಂಟೋನಿ ಇತ್ತೀಚೆಗೆ ಗಗನ್ ಮಾರ್ಗನ್ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಮರ್ಡರ್ ಮಿಸ್ಟರಿ ಥ್ರಿಲ್ಲರ್ ಜೋನರ್‌ನ ಈ ಚಿತ್ರವನ್ನು ಲಿಯೋ ಜಾನ್ ಪಾಲ್ ನಿರ್ದೇಶಿಸುತ್ತಿದ್ದಾರೆ. ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಇನ್ನು ಹಿಟ್ಲರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಿಯಾ ಸುಮನ್ ತೆಲುಗು ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದರು. ನಾನಿಗೆ ನಾಯಕಿಯಾಗಿ ಮಜ್ನು ಸಿನಿಮಾದಲ್ಲಿ ನಟಿಸಿದ ನಂತರ ಪೇಪರ್‌ಬಾಯ್, ಮೆನ್ ಟೂ, ಟಾಪ್ ಗೇರ್ ಮತ್ತು ಕಿಸ್ಮತ್ ಚಿತ್ರಗಳಲ್ಲಿ ನಟಿಸಿದ್ದಾರೆ.