ಎರಡೇ ದಿನದಲ್ಲಿ ದಾಖಲೆಯ ಗಳಿಕೆ ಕಂಡ ಮೋಹನ್‌ ಲಾಲ್‌ ನಟನೆಯ L2: Empuraan ಸಿನಿಮಾ; ಮಾಲಿವುಡ್‌ನಲ್ಲೇ ಹೊಸ ರೆಕಾರ್ಡ್‌!
ಕನ್ನಡ ಸುದ್ದಿ  /  ಮನರಂಜನೆ  /  ಎರಡೇ ದಿನದಲ್ಲಿ ದಾಖಲೆಯ ಗಳಿಕೆ ಕಂಡ ಮೋಹನ್‌ ಲಾಲ್‌ ನಟನೆಯ L2: Empuraan ಸಿನಿಮಾ; ಮಾಲಿವುಡ್‌ನಲ್ಲೇ ಹೊಸ ರೆಕಾರ್ಡ್‌!

ಎರಡೇ ದಿನದಲ್ಲಿ ದಾಖಲೆಯ ಗಳಿಕೆ ಕಂಡ ಮೋಹನ್‌ ಲಾಲ್‌ ನಟನೆಯ L2: Empuraan ಸಿನಿಮಾ; ಮಾಲಿವುಡ್‌ನಲ್ಲೇ ಹೊಸ ರೆಕಾರ್ಡ್‌!

L2: ಎಂಪುರಾನ್ ಚಿತ್ರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ. ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಈ ಸಿನಿಮಾ ಶತಕೋಟಿ ಕ್ಲಬ್‌ ಸೇರಿದೆ. ಈ ಸಾಧನೆ ಮಾಡಿದ ಮೊಲದ ಮಲಯಾಳಂ ಸಿನಿಮಾ ಆಗಿ ಹೊರಹೊಮ್ಮಿದೆ ಎಂಪುರಾನ್‌.

ಎಂಪುರಾನ್‌ ಎರಡನೇ ದಿನದ ಕಲೆಕ್ಷನ್‌
ಎಂಪುರಾನ್‌ ಎರಡನೇ ದಿನದ ಕಲೆಕ್ಷನ್‌

L2: Empuraan Collection Day 2: ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟಿಸಿರುವ L2: ಎಂಪುರಾನ್ ಸಿನಿಮಾ ದಾಖಲೆ ದಾಖಲೆ ನಿರ್ಮಿಸುತ್ತಿದೆ. ಪೊಲಿಟಿಕಲ್‌ ಥ್ರಿಲ್ಲರ್‌ ಜಾನರ್‌ನ ಈ ಚಿತ್ರವನ್ನು ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿ, ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಮಾರ್ಚ್ 27ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2019ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಲೂಸಿಫರ್‌ ಚಿತ್ರದ ಸೀಕ್ವೆಲ್ ಇದಾಗಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ ಹೊಸ ಮೈಲುಗಲ್ಲನ್ನು ದಾಟಿ ದಾಖಲೆ ಸೃಷ್ಟಿಸಿದೆ.

100 ಕೋಟಿ ಕ್ಲಬ್‌ಗೆ ಸೇರ್ಪಡೆ..

L2: ಎಂಪುರಾನ್ ಚಿತ್ರವು ಎರಡು ದಿನಗಳಲ್ಲಿಯೇ ವಿಶ್ವಾದ್ಯಂತ 100 ಕೋಟಿ ಗಳಿಕೆಯ ದಾಟಿದೆ. ಈ ವಿಷಯವನ್ನು ಚಿತ್ರವನ್ನು ನಿರ್ಮಿಸಿರುವ ಆಶೀರ್ವಾದ್ ಸಿನಿಮಾಸ್ ಅಧಿಕೃತವಾಗಿ ಘೋಷಣೆ ಮಾಡಿದೆ. “48 ಗಂಟೆಗಳಲ್ಲಿಯೇ ಎಂಪುರಾನ್ ಚಿತ್ರವು ವಿಶ್ವಾದ್ಯಂತ 100 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಈ ಚಿತ್ರವು ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಆಡುಜೀವಿತಂ ದಾಖಲೆ ಪುಡಿ ಪುಡಿ

ಮಲಯಾಳಂ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ 100 ಕೋಟಿ ಮೈಲುಗಲ್ಲನ್ನು ತಲುಪಿದ ಚಿತ್ರವಾಗಿ L2: ಎಂಪುರಾನ್ ದಾಖಲೆ ಸೃಷ್ಟಿಸಿದೆ. ಪ್ರಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರ ನಿರ್ವಹಿಸಿರುವ ʻಆಡುಜೀವಿತಂʼ ಸಿನಿಮಾ ಒಂಬತ್ತು ದಿನಗಳಲ್ಲಿ 100 ಕೋಟಿಯ ಮೈಲಿಗಲ್ಲನ್ನು ತಲುಪಿ ಇದುವರೆಗೂ ಅಗ್ರಸ್ಥಾನದಲ್ಲಿತ್ತು. ಇದೀಗ ಅದನ್ನು ಎಂಪುರಾನ್ ಸಿನಿಮಾ ಮೀರಿಸಿದೆ. ಎರಡನೇ ದಿನದಲ್ಲಿಯೇ 100 ಕೋಟಿ ಕಲೆಕ್ಷನ್‌ಗಳನ್ನು ಗಳಿಸಿ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ

L2: ಎಂಪುರಾನ್ ಚಿತ್ರಕ್ಕೆ ಮೊದಲ ದಿನ ವಿಶ್ವಾದ್ಯಂತ 67 ಕೋಟಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಅತಿ ದೊಡ್ಡ ಓಪನಿಂಗ್ ಅನ್ನು ಪಡೆದುಕೊಂಡಿದೆ. ಆದಾಗ್ಯೂ, ಈ ಚಿತ್ರಕ್ಕೆ ಎರಡನೇ ದಿನ ಸುಮಾರು 40 ಕೋಟಿ ಕಲೆಕ್ಷನ್ ಆಗಿದೆ ಬಂದಿವೆ ಎಂದು ತಿಳಿದುಬಂದಿದ್ದು, ಒಟ್ಟಾರೆ 100 ಕೋಟಿಗೂ ಅಧಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿ, ಹೊಸ ರೆಕಾರ್ಡ್‌ ತನ್ನದಾಗಿಸಿಕೊಂಡಿದೆ. ಆದರೆ ಮೊದಲ ದಿನದ ಕಲೆಕ್ಷನ್‌ಗೆ ಹೋಲಿಸಿದರೆ ಎರಡನೇ ದಿನದ ಕಲೆಕ್ಷನ್‌ನಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಶನಿವಾರ ಮತ್ತು ಭಾನುವಾರಗಳಲ್ಲಿ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ.

L2: ಎಂಪುರಾನ್ ಚಿತ್ರವು ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ಸಿನಿಮಾವಾಗಿದೆ. ಈ ಚಿತ್ರಕ್ಕೆ ಸುಮಾರು 150 ಕೋಟಿ ಖರ್ಚು ಮಾಡಲಾಗಿದೆ. ಸಿನಿಮಾ ಪ್ರಚಾರಕ್ಕೂ ಚಿತ್ರತಂಡ ಭಾರಿ ಖರ್ಚು ಮಾಡಿದೆ. ಮೇಕಿಂಗ್‌ ವಿಚಾರದಲ್ಲಿ ರಿಚ್‌ ಆಗಿ ಮೂಡಿಬಂದಿರುವ ಈ ಸಿನಿಮಾವನ್ನು ಆಶೀರ್ವಾದ್ ಸಿನಿಮಾಸ್, ಶ್ರೀಗೋಕುಲಂ ಮೂವೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿವೆ. ಮೋಹನ್‌ಲಾಲ್, ಪೃಥ್ವಿರಾಜ್ ಜೊತೆಗೆ ತೊವಿನೋ ಥಾಮಸ್, ಅಭಿಮನ್ಯು ಸಿಂಗ್ ಮತ್ತು ಮಂಜು ವಾರಿಯರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.