Lakshmi Baramma Serial: ವೈಷ್ಣವ್ ಅಪ್ಪುಗೆಯಲ್ಲಿ ಲಕ್ಷ್ಮೀ; ಮುತ್ತಿಗಾಗಿ ಬೇಡಿಕೆ ಇಟ್ಟವನ ಪಾಡು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ವೈಷ್ಣವ್ ಅಪ್ಪುಗೆಯಲ್ಲಿ ಲಕ್ಷ್ಮೀ; ಮುತ್ತಿಗಾಗಿ ಬೇಡಿಕೆ ಇಟ್ಟವನ ಪಾಡು ನೋಡಿ

Lakshmi Baramma Serial: ವೈಷ್ಣವ್ ಅಪ್ಪುಗೆಯಲ್ಲಿ ಲಕ್ಷ್ಮೀ; ಮುತ್ತಿಗಾಗಿ ಬೇಡಿಕೆ ಇಟ್ಟವನ ಪಾಡು ನೋಡಿ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಎಲ್ಲ ಸಮಸ್ಯೆಗಳು ಬಹೆಹರಿದು ಈಗ ಲಕ್ಷ್ಮೀ ಮತ್ತು ವೈಷ್ಣವ್ ಒಂದಾಗ್ತಾರೆ ಎನ್ನುವ ಪ್ರಸಂಗ ಎದುರಾಗಿದೆ. ವೈಷ್ಣವ್ ಕೂಡ ಲಕ್ಷ್ಮೀಯನ್ನು ಮನಸಾರೆ ಒಪ್ಪಿಕೊಂಡಿದ್ದಾನೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಒಂದಾಗಿದ್ದಾರೆ. ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಬಗೆಹರಿದು ಈಗ ಮತ್ತೆ ಇವರಿಬ್ಬರಲ್ಲಿ ಪ್ರೇಮ ಅರಳುತ್ತಿದೆ. ವೈಷ್ಣವ್ ತುಂಬಾ ದಿನಗಳಿಂದ ಅವನದೇ ಆದ ತೊಂದರೆಯಲ್ಲಿದ್ದ. ಕೀರ್ತಿ ಹಾಗೂ ಲಕ್ಷ್ಮೀ ಯಾರು ತನ್ನವರು ಎಂಬ ಗೊಂದಲದಲ್ಲೇ ಬದುಕುತ್ತಿದ್ದ ಆದರೆ ಈಗ ಅವನಿಗೆ ಎಲ್ಲದರಿಂದ ಮುಕ್ತಿ ಸಿಕ್ಕಿದೆ. ಇನ್ನು ಲಕ್ಷ್ಮೀ ಕೂಡ ಮದುವೆಯಾಗಿ ಬಂದಾಗಿನಿಂದ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಲೇ ಇದ್ದಳು. ಈಗ ಲಕ್ಷ್ಮೀ ಏನೋ ಕೆಲಸ ಮಾಡುತ್ತಾ ರೂಮಿನಲ್ಲಿ ಇರುವ ಸಂದರ್ಭದಲ್ಲಿ ವೈಷ್ಣವ್ ಬಂದಿದ್ದಾನೆ.

ವೈಷ್ಣವ್ ಕೇಳಿದ ಪ್ರಶ್ನೆಗೆ ನಾಟಕದ ಉತ್ತರ

ವೈಷ್ಣವ್ ಹಿಂದಿನಿಂದ ಬಂದು ಲಕ್ಷ್ಮೀಯನ್ನು ಅಪ್ಪಿಕೊಂಡಿದ್ದಾನೆ. ಅವನು ಅಪ್ಪಿಕೊಂಡು ಲಕ್ಷ್ಮೀ ಬಳಿ ಸರಸ ಆರಂಭಿಸಿದ್ದಾನೆ. ನನಗೆ ನೀವು ಏನೋ ಕೊಡ್ತೀನಿ ಅಂತ ಹೇಳಿದ್ರೀ ಆದ್ರೆ ಕೊಟ್ಟೇ ಇಲ್ಲ ಎಂದು ಕಿಚಾಯಿಸುತ್ತಿದ್ದಾನೆ. ಆದರೆ ಲಕ್ಷ್ಮೀ ಮುಖದಲ್ಲಿ ಅವನಿಗೆ ತುಂಬಾ ಗಾಬರಿ ಕಾಣುತ್ತದೆ. “ಯಾಕೆ ಲಕ್ಷ್ಮೀ ನೀವು ನನ್ನಿಂದ ಯಾವುದಾದರೂ ಒಂದು ವಿಚಾರವನ್ನು ಮುಚ್ಚಿಡುತ್ತಾ ಇದ್ದೀರಾ? ಯಾಕೆ ಈ ರೀತಿ ಮಾಡ್ತಾ ಇದ್ದೀರಿ?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಅವಳು ಏನೂ ಆಗಿಲ್ಲ ಎನ್ನುವ ರೀತಿ ನಾಟಕ ಮಾಡ್ತಾಳೆ.

ಶಿವ ಪೂಜೆಯಲ್ಲಿ ಕರಡಿಯಾಗಿದ್ದ ಗಂಗಕ್ಕ
ಆ ನಂತರ ಅದೂ ಇದೂ ಮಾತಾಡುತ್ತಾ ನೇರವಾಗಿ ತನಗೆ ಮುತ್ತು ಬೇಕು ಎಂದು ಹೇಳದೇ "ಅವತ್ತು ಶಿವ ಪೂಜೆಯಲ್ಲಿ ಕರಡಿ ಬಂದ ಹಾಗೆ ಗಂಗಕ್ಕ ಬಂದಿದ್ರಲ್ವಾ ಆಗ ನಾವು ಏನೋ ಮಾಡ್ತಾ ಇದ್ವೀ ನೆನಪಾಯ್ತಾ?" ಎಂದು ಪ್ರಶ್ನೆ ಮಾಡುತ್ತಾನೆ. ಆದರೂ ಲಕ್ಷ್ಮೀ ಬೇಕು ಎಂದೇ ಏನೂ ಗೊತ್ತಾಗದ ರೀತಿ ನಾಟಕ ಮಾಡುತ್ತಾಳೆ. ಕೊನೆಗೆ ಒಂದು ಮುತ್ತು ಕೊಡುತ್ತಾಳೆ.

ಇನ್ನು ಮನೆಯಲ್ಲಿ ಸುಪ್ರಿತಾ ಕೀರ್ತಿ ಸತ್ಯ ಬಯಲು ಮಾಡ್ತೀನಿ ಎಂದು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿರುತ್ತದೆ. ಕಾವೇರಿ ಜೈಲಿನಲ್ಲಿ ಇದ್ದುಕೊಂಡೇ ವೈಷ್ಣವ್ ಮನೆಗೆ ಹೇಗೆ ಕೆಟ್ಟದ್ದನ್ನು ಮಾಡಬಹುದು ಎಂದು ನೋಡ್ತಿದ್ದಾಳೆ. ಚಿಂಗಾರಿ ಅಡುಗೆಯವಳಾಗಿ ಮನೆ ಸೇರಿದ್ದಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner