Lakshmi Baramma Serial: ಲಾಯರ್ ಮಾತನ್ನೂ ಮೀರಿದ ಹುಚ್ಚಾಟ ಕಾವೇರಿಯದು; ಕೊನೆಗೂ ಚಿಂಗಾರಿಗೆ ಸಿಕ್ಕಿದೆ ಗಿರಿಜಾ ಸುಳಿವು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಲಾಯರ್ ಮಾತನ್ನೂ ಮೀರಿದ ಹುಚ್ಚಾಟ ಕಾವೇರಿಯದು; ಕೊನೆಗೂ ಚಿಂಗಾರಿಗೆ ಸಿಕ್ಕಿದೆ ಗಿರಿಜಾ ಸುಳಿವು

Lakshmi Baramma Serial: ಲಾಯರ್ ಮಾತನ್ನೂ ಮೀರಿದ ಹುಚ್ಚಾಟ ಕಾವೇರಿಯದು; ಕೊನೆಗೂ ಚಿಂಗಾರಿಗೆ ಸಿಕ್ಕಿದೆ ಗಿರಿಜಾ ಸುಳಿವು

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಇನ್ನೂ ಸ್ವಲ್ಪ ದಿನ ಜೈಲಿನಲ್ಲೇ ಉಳಿಯುವ ಎಲ್ಲಾ ಸೂಚನೆಯೂ ಕಂಡುಬರುತ್ತಿದೆ. ಲಾಯರ್ ಹೇಳಿದ ಯಾವ ಮಾತನ್ನೂ ಕಾವೇರಿ ಈಗ ಕೇಳುವ ಹಂತದಲ್ಲಿಲ್ಲ. ಜೈಲಿನಲ್ಲಿ ಇರಲು ಅವಳಿಂದ ಸಾಧ್ಯವಾಗುತ್ತಿಲ್ಲ.

ಇಷ್ಟೆಲ್ಲ ಆದ್ರೂ ಕಾವೇರಿ ಸೊಕ್ಕು ಮಾತ್ರ ಕಮ್ಮಿಯಾಗಿಲ್ಲ
ಇಷ್ಟೆಲ್ಲ ಆದ್ರೂ ಕಾವೇರಿ ಸೊಕ್ಕು ಮಾತ್ರ ಕಮ್ಮಿಯಾಗಿಲ್ಲ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀಯನ್ನು ಕೊಲೆ ಮಾಡಲು ಯತ್ನಿಸಿ ಕಾವೇರಿ ಈಗ ಜೈಲಿಗೆ ಹೋಗಿದ್ದಾಳೆ. ಕೋರ್ಟ್‌ನಲ್ಲಿ ಅವಳು ಅಪರಾಧಿಯೋ ಅಥವಾ ನಿರಪರಾಧಿಯೋ ಎಂದು ಇನ್ನೂ ವಾದ ವಿವಾದಗಳು ಆಗುತ್ತಿದೆ. ಆದರೆ ಕಾವೇರಿಗೆ ಅಷ್ಟು ದಿನಗಳ ಕಾಲ ಜೈಲಿನಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವಳಿಗೆ ಅಲ್ಲಿ ಸರಿಯಾಗಿ ನಿದ್ರೆ ಇಲ್ಲ. ಊಟ ಮಾಡಲು ಆಗುತ್ತಿಲ್ಲ. ಹೀಗೆ ಹತ್ತಾರು ಸಮಸ್ಯೆ. ಐಷಾರಾಮಿ ಜೀವನ ನಡೆಸುತ್ತಿದ್ದ ಅವಳಿಗೆ ಈಗ ಜೈಲಿನಲ್ಲಿ ಒಂದು ಕ್ಷಣ ಕಳೆಯುವುದು ಕೂಡ ತುಂಬಾ ಕಠಿಣ ಎಂದು ಅನಿಸುತ್ತಿದೆ.

ಲಾಯರ್ ಹತ್ತಿರ ಕಾವೇರಿ ಬೇಡಿಕೆ

ಲಕ್ಷ್ಮೀ ಅಂದುಕೊಂಡದನ್ನು ಸಾಧಿಸುವ ಸಮಯ ಹತ್ತಿರ ಬರುತ್ತಿದೆ ಎಂದು ಅನಿಸುತ್ತಿದೆ. ಆದರೆ ಲಾಯರ್ ಹತ್ತಿರ ಕಾವೇರಿ ಹೇಳುತ್ತಾಳೆ. “ನನಗೆ ಅನಾರೋಗ್ಯ ಇದೆ ಎಂದು ಹೇಳಿ ಯಾವುದಾದರೂ ಆಸ್ಪತ್ರೆಗಾದರೂ ಸೇರಿಸಿ. ಅಲ್ಲಿ ನಾನು ಅಲ್ಲಿ ಬ್ರೆಡ್‌ ತಿಂದುಕೊಂಡಾದರೂ ಬದುಕುತ್ತೇನೆ. ಆದರೆ ಇಲ್ಲೇ ಇರುವಂತೆ ಆಗುವುದೊಂದು ಬೇಡ” ಎಂದು ಕೇಳಿಕೊಳ್ಳುತ್ತಿದ್ದಾಳೆ. “ಕಾವೇರಿ ಎಲ್ಲ ಹಣದಿಂದ ಆಗೋದಿಲ್ಲ. ನಮ್ಮ ವ್ಯವಸ್ಥೆ ಇನ್ನೂ ಅಷ್ಟೊಂದು ಹದಗೆಟ್ಟಿಲ್ಲ. ಸ್ವಲ್ಪ ಸಮಾಧಾನದಿಂದಿರಿ” ಎಂದು ಲಾಯರ್ ಹೇಳುತ್ತಿದ್ದಾರೆ.

ಅಮ್ಮನ ಮಾತು ನಂಬದ ವೈಷ್ಣವ್

ಯಾರು ಏನೇ ಅಂದ್ರೂ ಕಾವೇರಿಗೆ ಮಾತ್ರ ದುಃಖ ತಡೆಯಲು ಆಗುತ್ತಿಲ್ಲ. ಮಗ ವೈಷ್ಣವ್ ಕೂಡ ಈಗ ಅವಳ ಪರವಾಗಿ ಮಾತಾಡುತ್ತಿಲ್ಲ. ಅವಳಿಗೆ ಅದೊಂದು ಕೊರಗೇ ಆಗಿದೆ. ಇನ್ನು ವಿಧಿ ಪದೇ ಪದೇ ಲಕ್ಷ್ಮೀಯನ್ನು ಬೈಯ್ಯುತ್ತಿದ್ದಾಳೆ. “ನಿನಗೆ ಈಗ ಸಮಾಧಾನಾನಾ? ಎಲ್ಲ ನೀನು ಅಂದುಕೊಂಡಂತೆ ಆಗ್ತಾ ಇದ್ಯಾ” ಎನ್ನುವ ರೀತಿಯಲ್ಲಿ ಪ್ರಶ್ನೆ ಮಾಡುತ್ತಾಳೆ. ಆಗ ವೈಷ್ಣವ್ ಹೇಳುತ್ತಾನೆ “ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ” ಎಂದು.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಈ ಕಾವೇರಿಗೆ ಎಷ್ಟು ಧಿಮಾಕು ನೋಡಿ ಇಷ್ಟ್‌ ಆದ್ರೂ, ಜೀವದ್ ಬೆಲೆ ಗುರ್ತಿಲ್ಲಾ ಅವ್ಳಿಗೆ, ದುಡ್ಡು ದುಡ್ಡು ಅಂತ ಹೇಳ್ತಾಳೆ. ಅದು ಎಷ್ಟು ದುಡ್ಡು ಕೊಡ್ತಾಳೆ, ನೋಡಿದ್ರಾಯ್ತು ಹಾಕ್ರಿ ಒಳಗೆ ಕೂರಿಸ್ಬೇಕು. ಗಿರಿಜಾ ಬಂದು ಸಾಕ್ಷಿ ಹೇಳ್ಬೇಕು ಎಂದು ಲಕ್ಷ್ಮೀ ಕಾಮೆಂಟ್ ಮಾಡಿದ್ದಾರೆ.

Whats_app_banner