Lakshmi Baramma Serial: ಕೀರ್ತಿ ಮನೆಯಲ್ಲಿದೆ ಸೀಕ್ರೇಟ್ ಕ್ಯಾಮರಾ; ಲಕ್ಷ್ಮೀ ಗುಟ್ಟು ಹೊರಬೀಳುವ ದಿನ ಬಂದೇಬಿಡ್ತು
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಯಾರು? ಅವಳು ಯಾಕೆ ಏನೂ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಾಳೆ ಎಂಬ ಅನುಮಾನ ಎಲ್ಲರಿಗೂ ಇತ್ತು. ಅದರ ಹಿಂದಿನ ಸೀಕ್ರೇಟ್ ಬಯಲಾಗುವ ಸಮಯ ಬಂದಂತಿದೆ.
Lakshmi Baramma Serial: ಕಾವೇರಿ ಜೈಲಿಗೆ ಹೋದ ಖುಷಿಯಲ್ಲಿ ಕೀರ್ತಿ ಅಮ್ಮ ಇರ್ತಾರೆ. ಸುಪ್ರಿತಾ ಕೂಡ ಕೀರ್ತಿ ಮನೆಗೆ ಹೋಗಿರ್ತಾರೆ. ಅಲ್ಲಿ ಸುಪ್ರಿತಾ, ಗಂಗಕ್ಕ ಮತ್ತು ಕೀರ್ತಿ ತಾಯಿ ಕೂತು ಮಾತಾಡ್ತಾ ಇರ್ತಾರೆ. ಅವರೆಲ್ಲ ಹಾಗೆ ಮಾತಾಡ್ತಾ ಇರುವ ಸಂದರ್ಭದಲ್ಲಿ ನಾವು ಇದೇ ಖುಷಿಗೆ ಪಾರ್ಟಿ ಮಾಡೋನ ಎಂದು ಕೀರ್ತಿ ಅಮ್ಮ ಹೇಳುತ್ತಾರೆ. ಇಂತಹ ಖುಷಿ ವಿಚಾರ ಇರುವಾಗ ನಾವಷ್ಟೇ ಪಾರ್ಟಿ ಮಾಡೋದು ಸರಿ ಅಲ್ಲ. ನಮ್ಮ ಜೊತೆ ಲಕ್ಷ್ಮೀ ಕೂಡ ಇದ್ರೆ ಚೆನ್ನಾಗಿರುತ್ತದೆ ಎಂದು ಸುಪ್ರಿತಾ ಹೇಳುತ್ತಾಳೆ. ಆಗ ಕೀರ್ತಿ ಅಮ್ಮ ಅದೂ ಹೌದು ನೀನು ಅವಳನ್ನು ಕರಿ ಎಂದು ಹೇಳುತ್ತಾ ಕೀರ್ತಿ ಮಲಗಿದ್ದಾಳಾ? ಅಥವಾ ಎದ್ದಿದ್ದಾಳಾ? ಎಂದು ನೋಡಿಕೊಂಡು ಬರಲು ಹೋಗುತ್ತಾಳೆ.
ಹಾಗೆ ಹೋಗಿ ನೋಡಿದಾಗ ಅಲ್ಲಿ ಕೀರ್ತಿ ಮಗು ತರ ಮಲಗಿರುತ್ತಾಳೆ. ಜೊತೆಗೆ ಗಂಗಕ್ಕ ಕೂಡ ಬಂದಿರುತ್ತಾರೆ. ಗಂಗಕ್ಕ ಬಂದವರೇ ಅವಳ ಹತ್ತಿರವೇ ಇದ್ದ ಇಯರ್‌ಫೋನ್ ನೋಡುತ್ತಾಳೆ. ನೋಡಿ ಅದನ್ನು ಒಮ್ಮೆ ಚೆಕ್ ಮಾಡಬೇಕು ಎಂದುಕೊಳ್ಳುತ್ತಾಳೆ. ಆದರೆ ಇತ್ತ ವಿಧಿ ಹಾಗೂ ವಿಧಿಯ ಬಾಯ್ ಫ್ರೆಂಡ್ ಒಂದು ಸೀಕ್ರೆಟ್ ಕೋಣೆಯಲ್ಲಿ ಮೀಟ್ ಆಗಬೇಕು ಎಂದುಕೊಂಡಿರುತ್ತಾರೆ. ಆದರೆ ಅಲ್ಲಿ ಒಂದು ಮಾನಿಟರ್ ಮತ್ತು ಸಿಸಿಟಿವಿ ಕಂಡು ದಂಗಾಗುತ್ತಾರೆ.
ವಿಧಿ ಕಂಗಾಲು
ವಿಧಿ ಇಲ್ಲಿ ಏನೂ ಇರೋದಿಲ್ಲ. ಇದೊಂದು ಸೂಪರ್ ಸೀಕ್ರೇಟ್ ಜಾಗ ಎಂದುಕೊಂಡು ಅವಳ ಹುಡುಗನನ್ನು ಕರೆದುಕೊಂಡು ಬಂದಿರುತ್ತಾಳೆ. ಆದರೆ ಅವನು ಅಲ್ಲಿ ಏನಿದೆ ಎಂದು ಚೆಕ್ ಮಾಡಲು ಮುಂದಾಗುತ್ತಾನೆ. ಅದು ನೇರವಾಗಿ ಕೀರ್ತಿಗೆ ಕನೆಕ್ಟ್ ಆಗಿರುತ್ತದೆ. ಅದು ಗೊತ್ತಾದರೆ ಈಗ ಎಲ್ಲವೂ ಮೋಸ ಎಂದು ತಿಳಿಯುತ್ತದೆ.
ಕಾವೇರಿಗಂತು ಜೈಲೇ ಗತಿ
ಹೆತ್ತ ತಾಯಿನೇ ಸ್ವಂತ ಮಗನಿಗೆ ಮೋಸ ಮಾಡಬಹುದು ಎಂದು ನನಗೆ ಈಗ ಗೊತ್ತಾಗಿದೆ ಎಂದು ವೈಷ್ಣವ್ ನೋವುಣ್ಣುತ್ತಿದ್ದಾನೆ. ಈ ಸಂದರ್ಭದಲ್ಲಿ ಲಕ್ಷ್ಮೀ ಕೂಡ ಅವನ ಜೊತೆಗೇ ಇದ್ದಾಳೆ. ಕೋರ್ಟ್‌ನಿಂದ ಮನೆಗೆ ಹೋದ ವೈಷ್ಣವ್‌ಗೆ ನೆಮ್ಮದಿಯೇ ಇಲ್ಲ. ಇಷ್ಟು ದಿನ ನಾನು ನಂಬಿದ್ದ ನನ್ನ ತಾಯಿಯೇ ಕೊಲೆಗಾತಿ ಎಂದು ಅವನಿಗೆ ತುಂಬಾ ನೋವಾಗುತ್ತಿದೆ. ತನ್ನ ಮನೆಯಲ್ಲಿ ಅಮ್ಮನ ನೆನಪು ಕೂಡ ಇರಬಾರದು ಎಂದು ಅವನಿಗೆ ಅನಿಸಿದೆ. ಎಲ್ಲ ನೆನಪನ್ನೂ ಸುಟ್ಟು ಹಾಕಿದ್ದಾನೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.