Lakshmi Baramma Serial: ಗಂಗಕ್ಕ ಮಾಡಿದ ಅವಾಂತರದಿಂದ ಕೀರ್ತಿಗೆ ತೊಂದರೆ; ಸುಪ್ರಿತಾ ವಿರುದ್ಧ ಮಾತನಾಡಿದ ಲಕ್ಷ್ಮೀ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತುಂಬಾ ಕೋಪ ಮಾಡಿಕೊಂಡಿದ್ದಾಳೆ. ಯಾಕೆಂದರೆ ಅವಳಿಗೆ ಕೀರ್ತಿಗೆ ಆಗಿರುವ ಪರಿಸ್ಥಿತಿಯನ್ನು ನೆನೆಸಿಕೊಂಡು ಕೋಪ ಬಂದಿದೆ. ಅವಳ ಅಮ್ಮನಿಗೂ ಬೈಯ್ಯುತ್ತಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿಯ ಮನೆಯಲ್ಲಿ ನಿನ್ನೆ ಆದ ಘಟನೆಯನ್ನು ನೆನಪಿಸಿಕೊಂಡು ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಆದರೆ ಲಕ್ಷ್ಮೀ ಸುಮ್ಮನೆ ಕೂರುವ ಮನಸ್ಥಿತಿ ಹೊಂದಿಲ್ಲ. ಯಾಕೆಂದರೆ ಅವಳಿಗೆ ಕೀರ್ತಿಗೆ ಆಗಿರುವ ಡ್ಯಾಮೇಜ್ ನೆನಪಿಸಿಕೊಂಡು ಬೇಸರ ಆಗಿದೆ. ಡಾಕ್ಟರ್ ಕೀರ್ತಿಗೆ ಸಿಟ್ಟು ಬರದೇ ಇರುವ ರೀತಿ ನೋಡಿಕೊಳ್ಳಲು ಹೇಳಿದ್ದಾರೆ. ಆದರೂ ಕಾವೇರಿಯ ಫೋಟೋ ನೋಡುತ್ತಿದ್ದಂತೆ ಅವಳಿಗೆ ಹಳೆಯದೆಲ್ಲ ನೆನಪಾಗಿ ಅವಳು ಮೂರ್ಚೆ ಹೋಗಿದ್ದಾಳೆ. ಈ ವಿಷಯ ನಂತರ ಗೊತ್ತಾಗಿದೆ.
ಅದೆಲ್ಲ ಆಗಿದ್ದು ಇವರು ಪಾರ್ಟಿ ಮಾಡಿದ ಕಾರಣಕ್ಕೆ ಎಂದು ಲಕ್ಷ್ಮೀ ಬೈಯ್ಯುತ್ತಿದ್ದಾಳೆ. ಸುಪ್ರಿತಾ, ಕೀರ್ತಿ ತಾಯಿ ಹಾಗೂ ಗಂಗಕ್ಕ ಕೂತು ಬೈಸಿಕೊಳ್ಳುತ್ತಿದ್ದಾರೆ. ಕೊನೆಗೆ ಕೀರ್ತಿ ಅಮ್ಮ ಹೇಳುತ್ತಾರೆ."ನಾವು ಬೇಕು ಎಂದು ಇದ್ಯಾವುದನ್ನು ಮಾಡಿಲ್ಲ. ಕೀರ್ತಿ ನಿದ್ದೆ ಮಾಡಿದ್ದಾಳಾ? ಇಲ್ವಾ? ಅನ್ನೊದನ್ನು ನೋಡಿಕೊಂಡೆ ಪಾರ್ಟಿ ಮಾಡಿದಿವಿ. ಆದ್ರೂ ಹೀಗಾಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ" ಎಂದು. ಸುಪ್ರಿತಾ ತಾನೂ ಧ್ವನಿಗೂಡಿಸುತ್ತಾಳೆ.
ಲಕ್ಷ್ಮೀಗೆ ಕೋಪ
ಯಾರು ಏನೇ ಅಂದರೂ ಲಕ್ಷ್ಮೀ ಕೋಪ ಮಾತ್ರ ಕಮ್ಮಿ ಆಗುತ್ತಿಲ್ಲ. ಯಾಕೆಂದರೆ ಡಾಕ್ಟರ್ ಹೇಳಿದ ಮಾತಿನ ಪ್ರಕಾರ ಅವಳಿಗೆ ಕೋಪ ಬಂದರೆ ಅವಳಿಗೆ ಹಿಂದಿನ ಯಾವ ನೆನಪುಗಳೂ ಮತ್ತೆ ಬರುವುದಿಲ್ಲ. ಬಂದರೂ ಅದು ಇನ್ನಷ್ಟು ನಿಧಾನವಾಗುತ್ತದೆ ಎಂದು ಈ ಕಾರಣಕ್ಕೆ ಅವಳು ಸುಪ್ರಿತಾಗೂ ಬೈದಿದ್ದಾಳೆ. ಇದರಿಂದ ಸುಪ್ರಿತಾಗೆ ಕೋಪ ಬಂದಿದೆ.ಇನ್ನು ಇದರ ನಡುವೆ ಗಂಗಕ್ಕ ತುಂಬಾ ಬೇಸರ ಮಾಡಿಕೊಳ್ಳುತ್ತಾಳೆ. ಇಷ್ಟೆಲ್ಲ ಆಗುವುದಕ್ಕೆ ನಾನೇ ಕಾರಣ ಎಂದು ಹೇಳುತ್ತಾಳೆ. ಯಾಕೆಂದರೆ ಕಾವೇರಿ ಫೊಟೋವನ್ನು ಅಲ್ಲಿ ತಂದು ಇಟ್ಟಿರುವವಳು ಅವಳೇ ಆಗಿರುತ್ತಾಳೆ.
ಆ ಬಗ್ಗೆ ಗಂಗಕ್ಕ ಕ್ಷಮೆ ಕೇಳುತ್ತಾಳೆ. ಇನ್ನು ಸುಪ್ರಿತಾ ನೀನು ಯಾಕೆ ಇಷ್ಟೊಂದು ಓವರ್ ರಿಯಾಕ್ಟ್ ಮಾಡ್ತಾ ಇದೀಯಾ? ಎಂದು ಕೇಳುತ್ತಾಳೆ. ಆದರೆ ಲಕ್ಷ್ಮೀ ಮಾತ್ರ ಕಾವೇರಿ ಈಗ ಜೈಲಿಗೆ ಹೋಗಿದ್ದಾಗಿದೆ, ಅದನ್ನು ಸಂಭ್ರಮಿಸುವುದಕ್ಕಿಂತ ಹೆಚ್ಚಾಗಿ ಕೀರ್ತಿನಾ ಸರಿ ಮಾಡಬೇಕು ಎನ್ನುತ್ತಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.