Lakshmi Baramma Serial: ಕಾವೇರಿಗೆ ಜೈಲಿನಲ್ಲಿ ಚಿತ್ರಹಿಂಸೆ; ಐಷಾರಾಮಿ ಜೀವನದ ಬದಲು ಇದೆಂಥಾ ಶಿಕ್ಷೆ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕಾವೇರಿಗೆ ಜೈಲಿನಲ್ಲಿ ಚಿತ್ರಹಿಂಸೆ; ಐಷಾರಾಮಿ ಜೀವನದ ಬದಲು ಇದೆಂಥಾ ಶಿಕ್ಷೆ

Lakshmi Baramma Serial: ಕಾವೇರಿಗೆ ಜೈಲಿನಲ್ಲಿ ಚಿತ್ರಹಿಂಸೆ; ಐಷಾರಾಮಿ ಜೀವನದ ಬದಲು ಇದೆಂಥಾ ಶಿಕ್ಷೆ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲು ಸೇರಿ ಹಲವು ದಿನಗಳೇ ಕಳೆದಿವೆ. ಆದರೆ ಯಾರೂ ಅವಳನ್ನು ನೋಡಲು ಬಂದಿಲ್ಲ. ಈ ನೋವು ಅವಳನ್ನು ಕಾಡುತ್ತಿದೆ. ಇದಷ್ಟೇ ಅಲ್ಲ ಜೈಲಿನಲ್ಲಿ ಕೆಲವರು ಅವಳಿಗೆ ಕಾಟ ಕೊಡುತ್ತಿದ್ದಾರೆ.

ಕಾವೇರಿಗೆ ಜೈಲಿನಲ್ಲಿ ಚಿತ್ರಹಿಂಸೆ
ಕಾವೇರಿಗೆ ಜೈಲಿನಲ್ಲಿ ಚಿತ್ರಹಿಂಸೆ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲು ಸೇರಿದ್ದಾಳೆ. ಅಲ್ಲಿ ಅವಳು ಸಾಕಷ್ಟು ಕಷ್ಟ ಅನುಭವಿಸುತ್ತಾ ಇದ್ದಾಳೆ. ಯಾಕೆಂದರೆ ಇಷ್ಟು ದಿನ ಐಷಾರಾಮಿ ಜೀವನಕ್ಕೆ ಕಾವೇರಿ ಹೊಂದಿಕೊಂಡಿದ್ದಳು. ಸಾಮಾನ್ಯ ಜೀವನಕ್ಕಿಂತಲೂ ಈ ಜೈಲು ವಾಸ ಕಷ್ಟವಾಗಿರುವಾಗ ಕಾವೇರಿಗೆ ಇನ್ನಷ್ಟು ಕಷ್ಟವಾಗಿದೆ. ಹೀಗಿರುವಾಗ ಜೈಲಿನಲ್ಲಿ ಕೆಲ ಹೆಂಗಸರು ಒಟ್ಟುಗೂಡಿಕೊಂಡು ಕಾವೇರಿಗೆ ಇನ್ನಷ್ಟು ಕಾಟ ಕೊಡುತ್ತಿದ್ದಾರೆ. ಒಂದು ಹೆಂಗಸು ಬಂದು “ನಾನು ನೀನು ಫ್ರೆಂಡ್ಸ್‌ ಆಗೋಣ” ಎಂದು ಹೇಳುತ್ತಾ ತನ್ನ ಕೈ ಮುಂದೆ ಮಾಡುತ್ತಾಳೆ. ಆಗ ಅವಳ ಕೈ ಕುಲುಕಲು ಕಾವೇರಿ ಹಿಂದೆ ಮುಂದೆ ಯೋಚನೆ ಮಾಡುತ್ತಾಳೆ.

ಕಾವೇರಿಗೆ ಕಿರಿಕಿರಿ

ಅವಳು ತುಂಬಾ ಹೊತ್ತು ಆಲೋಚನೆ ಮಾಡಿದಷ್ಟು ಅಲ್ಲಿನ ಹೆಂಗಸರಿಗೆ ಕೋಪ ಹೆಚ್ಚಾಗುತ್ತದೆ. “ನನ್ನನ್ನು ಇಲ್ಲಿ ಎಲ್ಲರೂ ಬಾಸ್‌ ಎಂದು ಕರೆಯುತ್ತಾರೆ. ನಾನು ನಿನ್ನ ಬಳಿ ಸ್ನೇಹ ಬಯಸುತ್ತಿದ್ದೇನೆ” ಎಂದು ಹೇಳುತ್ತಾಳೆ. ಆಗ ಕಾವೇರಿ ಮತ್ತೊಮ್ಮೆ ಯೋಚನೆ ಮಾಡುತ್ತಾಳೆ. “ಹೇಗಿದ್ದೆ ನಾನು ಈಗ ಹೇಗಾದೆ? ಈ ಹೆಂಗಸಿನ ಕೈ ಹಿಡಿಯಬೇಕಾಗಿ ಬಂದಿದೆ” ಎಂದು ಆಲೋಚಿಸುತ್ತಾಳೆ.

ಆದರೆ ಅವಳಿಗೆ ಕೈ ಕೊಡದೇ ಇದ್ದರೆ ಅಲ್ಲಿ ನಿಂತಿರುವ ಯಾರೂ ಅವಳನ್ನು ಸುಮ್ಮನೆ ಬಿಡುವ ರೀತಿ ಕಾಣಿಸಲಿಲ್ಲ. ಹಾಗಾಗಿ ಅವಳು ಕೈ ಕೊಡುತ್ತಾಳೆ. ಆದರೆ ಕೈ ಕೊಟ್ಟ ತಕ್ಷಣ ಅವಳು ಕಾವೇರಿ ಕೈ ತಿರುಗಿಸಿ ಬಿಡುತ್ತಾಳೆ. ಮೊದಲು ಗಟ್ಟಿಯಾಗಿ ಹಿಸುಕುತ್ತಾಳೆ. ಈ ರೀತಿಯಾಗಿ ಇನ್ನೊಬ್ಬ ಕೈದಿ ಟಾರ್ಚರ್ ನೀಡಿದರೆ, ಉಳಿದವರೆಲ್ಲ ಕಾವೇರಿಯನ್ನು ನೋಡಿ ನಗುತ್ತಾರೆ. ಅವಳು ಹೇಳುತ್ತಾಳೆ, “ನಾನು ನನಗೆ ಕಾಟ ಕೊಟ್ಟ ಅತ್ತೆಯನ್ನೇ ಕೊಂದು ಬಂದ ಸೊಸೆ ಎಂದು” ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner