Lakshmi Baramma Serial: ಮತ್ತೆ ಮನೆ ಬಿಟ್ಟು ಹೋದ ಕೀರ್ತಿ; ಲಕ್ಷ್ಮೀ, ವೈಷ್ಣವ್ ಬದುಕಲ್ಲಿ ಆಟ ಆಡ್ತಿದ್ದಾಳಾ ಈ ಹುಡುಗಿ?
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಮತ್ತೆ ಮನೆ ಬಿಟ್ಟು ಹೋದ ಕೀರ್ತಿ; ಲಕ್ಷ್ಮೀ, ವೈಷ್ಣವ್ ಬದುಕಲ್ಲಿ ಆಟ ಆಡ್ತಿದ್ದಾಳಾ ಈ ಹುಡುಗಿ?

Lakshmi Baramma Serial: ಮತ್ತೆ ಮನೆ ಬಿಟ್ಟು ಹೋದ ಕೀರ್ತಿ; ಲಕ್ಷ್ಮೀ, ವೈಷ್ಣವ್ ಬದುಕಲ್ಲಿ ಆಟ ಆಡ್ತಿದ್ದಾಳಾ ಈ ಹುಡುಗಿ?

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸುಪ್ರಿತಾಗೆ ಕೀರ್ತಿ ನಡವಳಿಕೆ ಮೇಲೆ ಅನುಮಾನ ಬಂದಿದೆ. ಅವಳು ಬೇಕು ಎಂದೇ ನಾಟಕ ಮಾಡುತ್ತಿದ್ದಾಳೆ ಎಂದು ಅವಳಿಗನಿಸಿದೆ. ಈ ವಿಚಾರವನ್ನು ಲಕ್ಷ್ಮೀ ಹತ್ತಿರ ಹಂಚಿಕೊಂಡಿದ್ದಾಳೆ.

ಮತ್ತೆ ಮನೆ ಬಿಟ್ಟು ಹೋದ ಕೀರ್ತಿ
ಮತ್ತೆ ಮನೆ ಬಿಟ್ಟು ಹೋದ ಕೀರ್ತಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ “ಕೀರ್ತಿಗೆ ಎಲ್ಲ ನೆನಪಿದೆ ಆದರೂ ಅವಳು ಮಗುವಿನಂತೆ ನಾಟಕ ಮಾಡುತ್ತಿದ್ದಾಳೆ. ಅವಳಿಗೆ ಏನೂ ಅರ್ಥ ಆಗುತ್ತಿಲ್ಲ ಎನ್ನುವ ರೀತಿಯಲ್ಲಿ ಅವಳ ವರ್ತನೆ ಇದೆ ನನಗೆ ಅನುಮಾನ ಬರುತ್ತಿದೆ” ಎಂದು ಸುಪ್ರಿತಾ ಹೇಳುತ್ತಿದ್ದಾಳೆ. ಲಕ್ಷ್ಮೀ ಬಳಿ ಬಂದು ಈ ವಿಚಾರವನ್ನು ಸುಪ್ರಿತಾ ಹೇಳಿದಾಗ ಅವಳೂ ಕೂಡ ಆಲೋಚನೆ ಆರಂಭಿಸುತ್ತಾಳೆ. ಸುಪ್ರಿತಾ ಹೇಳಿರುವುದು ನಿಜಾನಾ? ಎಂಬ ಅನುಮಾನ ಈಗ ಲಕ್ಷ್ಮೀಯಲ್ಲೂ ಆರಂಭ ಆಗಿದೆ. ಹೀಗಿರುವಾಗ ಕೀರ್ತಿ ಮನೆಯಿಂದ ಕಾಲ್ ಬರುತ್ತದೆ. ಕಾಲ್ ಬಂದಾಗ ಕೀರ್ತಿ ತಾಯಿ ಆಕಡೆಯಿಂದ ಮಾತಾಡ್ತಾರೆ.

ಕೀರ್ತಿ ಮನೆಯಲ್ಲೆಲ್ಲೂ ಕಾಣ್ತಾ ಇಲ್ಲ ಎಂದು ಹೇಳುತ್ತಾರೆ. ಆ ಮಾತನ್ನು ಕೇಳಿ ಇವರಿಬ್ಬರಿಗೂ ಶಾಕ್ ಆಗುತ್ತದೆ. ಯಾಕೆ ಅವಳು ಪದೇ ಪದೇ ಕಾಣೆ ಆಗ್ತಾ ಇದ್ದಾಳೆ ಎಂದು ಇವರಿಗೆ ಅರ್ಥ ಆಗೋದಿಲ್ಲ. ಅವಳು ಎಲ್ಲ ತಿಳಿದೇ ಈ ರೀತಿ ಮಾಡ್ತಿದ್ದಾಳೆ. ಅವಳಿಗೆ ಎಲ್ಲವೂ ನೆನಪಿದೆ ಎಂದು ಸುಪ್ರಿತಾ ಅಂದುಕೊಳ್ಳುತ್ತಾಳೆ.

ಕೀರ್ತಿ ನಿಜಕ್ಕೂ ಹೋದದ್ದೆಲ್ಲಿ?
ಕೀರ್ತಿ ವೈಷ್ಣವ್ ಎಲ್ಲಿಗೆ ಹೋಗ್ತಾನೆ ಎಂದು ನೋಡಿಕೊಂಡು ಅವನ ಹಿಂದೆಯೇ ಹೋಗಲು ಆರಂಭ ಮಾಡಿದ್ದಾಳೆ. ವೈಷ್ಣವ್ ಕಾರ್ ತೆಗೆದುಕೊಂಡು ಒಂದು ಕಡೆ ಹೋಗ್ತಾನೆ. ಆಗ ಇವಳು ವೈಷ್ಣವ್‌ಗೆ ಕಾಣದಂತೆ ಅವನದೇ ಕಾರ್‌ನಲ್ಲಿ ಬಚ್ಚಿಟ್ಟುಕೊಂಡು ಹೋಗುತ್ತಾಳೆ. ವೈಷ್ಣವ್‌ಗೆ ಏನೋ ಅನುಮಾನ ಬಂದಂತೆ ಆಗುತ್ತದೆ. ಆದರೆ ತನ್ನ ಜೊತೆ ಕೀರ್ತಿ ಕೂಡ ಬಂದಿದ್ದಾಳೆ ಎಂದು ಅವನಿಗೆ ಗೊತ್ತಾಗೋದಿಲ್ಲ.

ಈ ಹಿಂದೆ ಏನಾಗಿತ್ತು?
ಈ ಹಿಂದೆ ಕಾವೇರಿ ತುಂಬಾ ಕಷ್ಟಪಟ್ಟು ಕೀರ್ತಿಯನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದಳು. ಆದರೆ ಅವಳು ಕೊಲೆ ಮಾಡುವ ಪ್ರಯತ್ನ ಮಾಡಿದರೂ ಕೀರ್ತಿ ಬದುಕಿ ಬಂದಿದ್ದಾಳೆ. ಕಾವೇರಿ ಈಗ ಜೈಲಿನಲ್ಲಿದ್ದಾಳೆ. ವೈಷ್ಣವ್ ಮೇಲೆ ಈ ಹಿಂದಿನಿಂದಲೂ ಕೀರ್ತಿಗೆ ಆಸೆ ಇರುವ ಕಾರಣ ಅವಳು ಈಗ ಮತ್ತೆ ಅವನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಬಹುದು ಎಂಬ ಅನುಮಾನ ಮೂಡಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.