Lakshmi Baramma Serial: ಕಾವೇರಿಯನ್ನು ನೋಡಲು ಜೈಲಿಗೆ ಹೊರಟ ಕೃಷ್ಣ; ಒಳ್ಳೆತನದಿಂದಲೇ ಕುತ್ತು ತಂದುಕೊಳ್ತಾಳಾ ಲಕ್ಷ್ಮೀ?
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿಗೆ ಹೋದಾಗಿನಿಂದ ಅವಳನ್ನು ಯಾರೂ ಮಾತನಾಡಿಸಿರಲಿಲ್ಲ. ಆದರೆ ಈಗ ಕೃಷ್ಣ ಅವಳನ್ನು ನೋಡಿಕೊಂಡು ಬರಲು ಹೋಗುತ್ತಿದ್ದಾನೆ.
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೃಷ್ಣ ಗುಟ್ಟಾಗಿ ಯಾರಿಗೂ ಹೇಳದೆ ಮನೆಯಿಂದ ಹೊರಗಡೆ ಹೋಗಲು ನೋಡುತ್ತಿದ್ದಾನೆ. ಆದರೆ ಲಕ್ಷ್ಮೀಗೆ ಅವನು ಯಾಕೆ ಹೋಗುತ್ತಿದ್ದಾನೆ ಅನ್ನೋದು ಅರ್ಥವಾಗುತ್ತದೆ. “ಮಾವ ಅತ್ತೆನಾ ನೋಡ್ಕೊಂಬರೋಕ್ ಹೋಗ್ತಾ ಇದೀರಾ?” ಎಂದು ನೇರಾ ನೇರವಾಗಿ ಪ್ರಶ್ನೆ ಮಾಡುತ್ತಾಳೆ.. ಆಗ ಅವನು ಗತಿ ಇಲ್ಲದೆ ಉತ್ತರ ಕೊಡುತ್ತಾನೆ. “ಹೌದು ನಾನು ಕಾವೇರಿನಾ ಮೀಟ್ ಆಗಿ ಬರ್ಬೇಕು” ಎಂದು ಹೇಳುತ್ತಾನೆ. “ನಾನು ಹೋಗ್ತಾ ಇದೀನಿ ಅಂತ ವೈಷ್ಣವ್ ಹತ್ತಿರ ಹೇಳಬೇಡ, ಸಮಸ್ಯೆ ಆಗುತ್ತದೆ” ಎಂದು ತಿಳಿಸುತ್ತಾನೆ.
ಕೃಷ್ಣನ ನಿರ್ಧಾರ ಸರಿ
ಆಗ ಲಕ್ಷ್ಮೀ “ಓಕೆ ಮಾವ ನಾನು ಯಾರತ್ರಾನೂ ಹೇಳೋದಿಲ್ಲ. ನಿಮ್ಮ ಹೆಂಡ್ತೀನಾ ನೀವು ಮೀಟ್ ಆಗಿ ಬರೋದ್ರಲ್ಲಿ ಯಾವ ತಪ್ಪೂ ಇಲ್ಲ” ಎಂದು ಹೇಳುತ್ತಾಳೆ. ಆದರೆ ವೈಷ್ಣವ್ ಮಾತ್ರ ಈ ವಿಚಾರವಾಗಿ ರಂಪಾಟವನ್ನೇ ಮಾಡಿರುತ್ತಾನೆ. ಯಾರೂ ಅಮ್ಮನನ್ನು ನೋಡಲು ಹೋಗಬಾರದು ಎಂದು ತಾಕೀತು ಮಾಡಿರುತ್ತಾನೆ. ಅದೇ ಕಾರಣಕ್ಕೆ ತಾನು ಗುಟ್ಟಾಗಿ ಹೋಗಿ ಬರಬೇಕಾಯ್ತು ಎಂದು ಕೃಷ್ಣ ಅಂದುಕೊಂಡಿರುತ್ತಾನೆ. ನಿಮ್ಮ ನಿರ್ಧಾರ ಸರಿ ಇದೆ ಎಂದು ಲಕ್ಷ್ಮೀ ಹೇಳುತ್ತಾಳೆ. ಅವನು ಇನ್ನೇನು ಹೊರಡಬೇಕು ಎನ್ನುವ ಸಮಯದಲ್ಲಿ ವಿಧಿ ಅಲ್ಲಿಗೆ ಬರ್ತಾಳೆ.
ವಿಧಿ ಬಂದವಳೇ ನಾನೂ ನಿಮ್ಮ ಜೊತೆ ಬರ್ತೀನಿ ಎಂದು ಹಠ ಮಾಡ್ತಾಳೆ. ಯಾರೂ ನನ್ನ ತಡಿಯೋಕೆ ಆಗೋದಿಲ್ಲ. ನಾನು ಹೋಗೇ ಹೋಗ್ತೀನಿ ಎಂದು ಲಕ್ಷ್ಮೀಯ ಮುಖ ನೋಡುತ್ತಾ ಹೇಳುತ್ತಾಳೆ. ಆಗ ಲಕ್ಷ್ಮೀ ಇಲ್ಲಿ ಯಾರೂ ನಿನ್ನ ತಡೆದಿಲ್ಲ. ನಿನ್ನ ತಾಯಿನಾ ನೀನು ನೋಡ್ಬಹುದು ಎಂದು ಹೇಳುತ್ತಾಳೆ. ಕೃಷ್ಣನಿಗೆ ಕೋಪ ಬರುತ್ತದೆ “ಬರೋದಾದ್ರೆ ಬಾಯಿ ಮುಚ್ಕೊಂಡು ಬಾ” ಎಂದು ಬೈದುಕೊಂಡು ಕರೆದುಕೊಂಡು ಹೋಗ್ತಾನೆ.
ಲಕ್ಷ್ಮೀ ಒಳ್ಳೆತನ ಅತಿಯಾಯ್ತು
ಲಕ್ಷ್ಮೀ ತನ್ನ ಒಳ್ಳೆಯತನದಿಂದ ಎಲ್ಲರನ್ನೂ ಹೋಗಲು ಬಿಡುತ್ತಾಳೆ. ಆದರೆ ಸುಪ್ರಿತಾಗೆ ಇದು ಇಷ್ಟ ಆಗೋದಿಲ್ಲ. ನಿನ್ನ ಒಳ್ಳೆತನವೇ ನಿನಗೆ ಒಂದು ದಿನ ಮುಳುವಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾಳೆ. ಆದರೆ ಲಕ್ಷ್ಮೀ ಅಷ್ಟೊಂದು ವಿಚಾರ ಮಾಡುವುದಿಲ್ಲ. ವೈಷ್ಣವ್‌ಗೆ ಇವರೆಲ್ಲ ನೋಡಿಕೊಂಡು ಬರಲು ಹೋದ ವಿಚಾರ ತಿಳಿದರೆ ಮಾತ್ರ ಮನೆಯ ವಾತಾವರಣ ಬೇರೆ ರೀತಿಯೇ ಆಗಲಿದೆ. ಆಗ ವೈಷ್ಣವ್ ಲಕ್ಷ್ಮೀ ಮೇಲೂ ಕೋಪ ಮಾಡಿಕೊಳ್ಳಬಹುದು.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.