Lakshmi Baramma Serial: ಅನನ್ಯಾಳ ನಾಟಕಕ್ಕೆ ಬೀಳುತ್ತಾ ಬ್ರೇಕ್; ವೈಷ್ಣವ್‌ನನ್ನು ಸೇವ್ ಮಾಡಲು ಲಕ್ಷ್ಮೀ ಯಾವಾಗಲೂ ಮುಂದೆ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಅನನ್ಯಾಳ ನಾಟಕಕ್ಕೆ ಬೀಳುತ್ತಾ ಬ್ರೇಕ್; ವೈಷ್ಣವ್‌ನನ್ನು ಸೇವ್ ಮಾಡಲು ಲಕ್ಷ್ಮೀ ಯಾವಾಗಲೂ ಮುಂದೆ

Lakshmi Baramma Serial: ಅನನ್ಯಾಳ ನಾಟಕಕ್ಕೆ ಬೀಳುತ್ತಾ ಬ್ರೇಕ್; ವೈಷ್ಣವ್‌ನನ್ನು ಸೇವ್ ಮಾಡಲು ಲಕ್ಷ್ಮೀ ಯಾವಾಗಲೂ ಮುಂದೆ

Lakshmi Baramma Serial: ಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಗಂಡ ವೈಷ್ಣವ್‌ಗಾಗಿ ಹೋರಾಡಲು ಸಿದ್ಧಳಾಗಿ ಬಂದಿದ್ದಾಳೆ. ಪ್ರೆಸ್‌ ಮೀಟ್‌ ಕರೆದು ಎಲ್ಲರ ಎದುರು ಸತ್ಯ ಬಯಲು ಮಾಡಲು ಕಾದಿದ್ದಾಳೆ. ಅನನ್ಯಾಳ ನಾಟಕಕ್ಕೆ ಬ್ರೇಕ್ ಬೀಳಲು ಕೆಲವೇ ಸಮಯ ಬಾಕಿ ಇದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (ಕಲರ್ಸ್‌ ಕನ್ನಡ)

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಗಂಡನ ಪರವಾಗಿ ನಿಂತಿದ್ದಾಳೆ. ಅವಳಿಗೆ ಎಲ್ಲವೂ ಗೊತ್ತಿದೆ. ಯಾಕೆಂದರೆ ಅಂದು ಅನನ್ಯಾ ಜೊತೆ ವೈಷ್ಣವ್ ಇರುವಾಗ ನಡೆದಿದ್ದೇನು ಎಂಬುದನ್ನು ಅವಳು ಕೀರ್ತಿ ಮೂಲಕ ತಿಳಿದುಕೊಂಡಿದ್ದಾಳೆ. ಅಂದು ಸಾಕ್ಷಿ ಎಂಬಂತೆ ಕೀರ್ತಿ ಕೂಡ ವೈಷ್ಣವ್ ಜೊತೆಯಲ್ಲೇ ಇದ್ದಳು. ಆದರೆ ಅನನ್ಯಾಗೆ ಈ ಯಾವ ವಿಚಾರ ಕೂಡ ತಿಳಿದಿರಲಿಲ್ಲ. ವೈಷ್ಣವ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ಅವಳು ಸುಮ್ಮನೆ ಇದ್ದಾರೆ ಲಕ್ಷ್ಮೀ ಬಿಡ್ತಾಳಾ?

ಈಗ ಆಗುತ್ತಿರುವುದೂ ಅದೇ ವಿಚಾರ ಲಕ್ಷ್ಮೀ ತನ್ನ ಗಂಡ ವೈಷ್ಣವ್‌ನನ್ನು ತಪ್ಪಿತಸ್ತ ಅಲ್ಲ ಎಂದು ಸಾಬೀತು ಮಾಡಲು ಪ್ರೆಸ್‌ಮೀಟ್ ಕರೆದಿದ್ದಾಳೆ. ಆದರೆ ಈ ವಿಚಾರ ಅನನ್ಯಾಳಿಗೆ ಗೊತ್ತಿಲ್ಲ. ಅವಳು ತನ್ನ ಕಡೆಯವರೇ ಯಾರೋ ಪ್ರೆಸ್‌ ಮೀಟ್ ಕರೆದಿದ್ದಾರೆ ಎಂದು ಅಂದುಕೊಂಡು ಅಪ್ಪನ ಬಳಿ ಪ್ರಶ್ನೆ ಮಾಡುತ್ತಾಳೆ. ಇಷ್ಟೊಂದು ಜನರನ್ನು ನೀವು ಯಾಕೆ ಕರೆದಿದ್ದೀರಿ? ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ಅವಳ ತಂದೆಗೂ ಇದರ ಬಗ್ಗೆ ಯಾವ ಮಾಹಿತಿಯೂ ಇರೋದಿಲ್ಲ. ಇನ್ನು ಅದಾದ ನಂತರದಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಅವಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಸತ್ಯ ಹೇಳ್ತಾಳಾ ಕೀರ್ತಿ?

ನಂತರ ಕೀರ್ತಿ ಕೂಡ ಅಲ್ಲಿ ಕಾಣುತ್ತಾಳೆ. ಆಗ ಅನನ್ಯಾಳಿಗೆ ಭಯ ಆರಂಭವಾಗುತ್ತದೆ. ಯಾಕೆಂದರೆ ಅವಳು ಈ ಹಿಂದೆ ನಡೆದ ಘಟನೆಯನ್ನು ಕಣ್ಣಾರೆ ಕಂಡಿದ್ದಾಳೆ. ವೈಷ್ಣವ್‌ಗೆ ಅನನ್ಯಾ ಮುತ್ತು ಕೊಡಲು ಹೋದಾಗ ಕೀರ್ತಿಯೇ ಬಂದು ತಳ್ಳಿದ್ದಾಳೆ ಎಂಬ ವಿಚಾರ ನೆನಪಾಗುತ್ತದೆ. ಇವಳು ಎಲ್ಲರ ಎದುರು ಸತ್ಯ ಹೇಳಿಬಿಡ್ತಾಳೆ ಎಂದು ಭಯವಾಗಿ ಅವಳು ಒಳಗೊಳಗೇ ಸಾಯುತ್ತಿದ್ದಾಳೆ.

ಅನನ್ಯಾಗೆ ಭಯ
ಅನನ್ಯಾ ಕೀರ್ತಿಯನ್ನು ಕಂಡು ತುಂಬಾ ಭಯದಿಂದ ನಾನು ಮಾಡಿದ ನಾಟಕ ಈಗ ಎಲ್ಲರ ಎದುರು ಬಯಲಾಗುತ್ತದೆ ಎಂದು ಯೋಚನೆ ಮಾಡುತ್ತಿದ್ದಾಳೆ. ಲಕ್ಷ್ಮೀ ನಾವೂ ಪ್ರೆಸ್‌ ಮೀಟ್‌ ಕರೆದಿದ್ದೀವಿ ಎಂದು ಹೇಳುತ್ತಾ ಮುನ್ನಡೆಯುತ್ತಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner