Lakshmi Baramma Serial: ವೈಷ್ಣವ್ ಲಕ್ಷ್ಮೀ ಇಬ್ಬರೇ ಕಟ್ಟಬೇಕಿದ್ದ ಹರಕೆ ತೊಟ್ಟಿಲಿಗೆ ಗಂಟು ಹಾಕಿದ ಕೀರ್ತಿ; ಮನೆಮಂದಿಗೆ ಬಂತು ಕೆಂಡದಂಥ ಕೋಪ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಪುಟ್ಟ ತೊಟ್ಟಿಲನ್ನು ಹರಕೆಯಾಗಿ ಮರಕ್ಕೆ ಕಟ್ಟಿದ್ದಾರೆ. ಆದರೆ ಆ ತೊಟ್ಟಿಲ ದಾರ ಸಡಿಲವಾಗುತ್ತಿದ್ದಂತೆ ಕೀರ್ತಿ ಅಲ್ಲಿಗೆ ಬಂದು ಅವಾಂತರ ಮಾಡಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿ ಇದ್ದುಕೊಂಡೇ ಉಪಾಯ ಮಾಡುತ್ತಿದ್ದಾಳೆ. ಚಿಂಗಾರಿ ಸಹಾಯ ಪಡೆದುಕೊಂಡು ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾಳೆ. ಲಕ್ಷ್ಮೀ ಮನೆಗೆ ಕೆಲಸದವಳಂತೆ ಬಂದ ಚಿಂಗಾರಿ, ಎಲ್ಲ ಮಾಹಿತಿಯನ್ನೂ ತಿಳಿದುಕೊಂಡು ಬಂದಿದ್ದಾಳೆ. ಕೀರ್ತಿ ಯಾರು? ಅವಳ ವರ್ತನೆ ಹೇಗಿದೆ? ಅವಳು ಮನೆಯಲ್ಲಿ ಹೇಗೆ ಇರ್ತಾಳೆ? ಈ ಎಲ್ಲ ವಿಚಾರವನ್ನೂ ಅವಳು ಈಗಾಗಲೇ ತಿಳಿದುಕೊಂಡು ಬಂದು ಕಾವೇರಿಗೆ ವರದಿ ಒಪ್ಪಿಸಿದ್ದಾಳೆ. ಅವಳ ಮಾತನ್ನು ಕೇಳಿ ಕಾವೇರಿಗೆ ಖುಷಿಯಾಗಿದೆ. ಯಾಕೆಂದರೆ ಕೀರ್ತಿಗೆ ಹಳೆಯ ಯಾವ ವಿಚಾರವೂ ನೆನಪಿಲ್ಲ ಎಂದು ಅರ್ಥ ಆಗಿದೆ.
ಹರಕೆ ಕಟ್ಟಿದ ಲಕ್ಷ್ಮೀ ವೈಷ್ಣವ್
ಇನ್ನು ಇತ್ತ ವೈಷ್ಣವ್ ಹಾಗೂ ಲಕ್ಷ್ಮೀ ತಮ್ಮದೇ ಆದ ಲೋಕದಲ್ಲಿ ಮುಳುಗಿದ್ದಾರೆ. ಅವರು ತಮ್ಮ ಸಂಸಾರವನ್ನು ಮುಂದುವರಿಸುವತ್ತ ಒಲವು ತೋರಿದ್ದಾರೆ. ತಮ್ಮ ಕುಟುಂಬಕ್ಕೊಂದು ಪುಟ್ಟ ಮಗು ಬೇಕು ಎಂಬ ಬಯಕೆ ಅವರಿಗಾಗಿದೆ. ಹೀಗಿರುವಾಗ ಅವರು ದೇವಸ್ಥಾನದಲ್ಲಿ ಅಜ್ಜಿ ಸಲಹೆಯಂತೆ ಹರಕೆ ಕಟ್ಟಿದ್ದಾರೆ. ದೇವಸ್ಥಾನದ ಆವರಣದಲ್ಲಿರುವ ಮರವೊಂದಕ್ಕೆ ಹರಕೆ ರೂಪದಲ್ಲಿ ಪುಟ್ಟ ತೊಟ್ಟಿಲು ಕಟ್ಟಿದ್ದಾರೆ.
ಕೀರ್ತಿ ಮಾಡಿದ ಅವಾಂತರ
ಆದರೆ ಲಕ್ಷ್ಮೀಗೆ ಸರಿಯಾಗಿ ಕೈ ಎಟಕದ ಕಾರಣ ಕಟ್ಟಿದ ದಾರ ಸಡಿಲವಾಗಿ ತೊಟ್ಟಿಲು ಜಾರುತ್ತಿರುತ್ತದೆ. ಅದನ್ನು ನೋಡಿದ ಅಜ್ಜಿ, ಸರಿಯಾಗಿ ಕಟ್ಟಿ ಎಂದು ಹೇಳುವಷ್ಟರಲ್ಲಿ ಅಲ್ಲಿಗೆ ಕೀರ್ತಿ ಬರುತ್ತಾಳೆ. ಈ ಯಾವ ಕಾರಣವನ್ನೂ ತಿಳಿಯದ ಅವಳು ತಾನೇ ತೊಟ್ಟಿಲ ದಾರವನ್ನು ಬಿಗಿ ಮಾಡಿ ಮರಕ್ಕೆ ಕಟ್ಟುತ್ತಾಳೆ. ಗಂಡ, ಹೆಂಡತಿ ಇಬ್ಬರೂ ಕೂಡಿ ಕಟ್ಟಬೇಕಿದ್ದ ಹರಕೆಯನ್ನು ಪೂರ್ತಿ ಮಾಡುತ್ತಾಳೆ. ಅದ್ಯಾವ ಮಾಯದಲ್ಲಿ ಕೀರ್ತಿ ಅಲ್ಲಿಗೆ ಬಂದಳು ಎಂದು ಯಾರಿಗೂ ಗೊತ್ತೇ ಆಗುವುದಿಲ್ಲ. ಚಿಕ್ಕ ಮಕ್ಕಳಂತೆಯೇ ನಡೆದುಕೊಳ್ಳುವ ಕೀರ್ತಿ, ತಾನು ಈ ರೀತಿ ಮಾಡಬಾರದು ಅದು ಗಂಡ, ಹೆಂಡತಿಗೆ ಸಂಬಂಧಿಸಿದ್ದು ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಅವಳಿಂದ ಆದ ತಪ್ಪಿಗೆ ವೈಷ್ಣವ್, ಸುಪ್ರಿತಾ, ಅಜ್ಜಿ ಎಲ್ಲರೂ ತುಂಬಾ ಕೋಪ ಮಾಡಿಕೊಂಡಿದ್ದಾರೆ. ಆದರೆ ಈಗ ಆಗಿರುವುದನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.