Lakshmi Baramma Serial: ಲಕ್ಷ್ಮೀ ಜಾಣತನದಿಂದ ವೈಷ್ಣವ್ ಬಚಾವ್‌; ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅನನ್ಯಾ ಮಾಡಿದ ತಪ್ಪು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಲಕ್ಷ್ಮೀ ಜಾಣತನದಿಂದ ವೈಷ್ಣವ್ ಬಚಾವ್‌; ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅನನ್ಯಾ ಮಾಡಿದ ತಪ್ಪು

Lakshmi Baramma Serial: ಲಕ್ಷ್ಮೀ ಜಾಣತನದಿಂದ ವೈಷ್ಣವ್ ಬಚಾವ್‌; ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅನನ್ಯಾ ಮಾಡಿದ ತಪ್ಪು

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮೇಲೆ ಆರೋಪ ಬಂದಿತ್ತು. ಆದರೆ ತನ್ನ ಗಂಡನ ಮಾನ ಉಳಿಸುವ ಸಲುವಾಗಿ ಲಕ್ಷ್ಮೀ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. ಆ ನಿರ್ಧಾರ ಅವಳಿಗೆ ಒಳಿತು ಮಾಡಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (Colors Kannada)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಎಲ್ಲರೂ ಹೇಳಿದ ಮಾತನ್ನು ಲಕ್ಷ್ಮೀ ಕೂಡ ನಂಬಿದ್ದರೆ ಇಂದು ಲಕ್ಷ್ಮೀ ಮತ್ತು ವೈಷ್ಣವ್ ನಡುವೆ ಬಿರುಕು ಮೂಡುತ್ತಿತ್ತು. ಆದರೆ ಈಗ ಹಾಗಲ್ಲ ಲಕ್ಷ್ಮೀ ವೈಷ್ಣವ್‌ನನ್ನು ನಂಬಿ ಅವನ ಪರವಾಗಿ ನಿಂತಿದ್ದಾಳೆ. ಅವಳಿಗೆ ತನ್ನ ಗಂಡನ ಮೇಲೆ ಇದ್ದ ನಂಬಿಕೆಯೇ ಅವರಿಬ್ಬರ ಸಂಬಂಧವನ್ನು ಕಾಪಾಡಿದೆ. ಅನನ್ಯ ತನ್ನ ಬಳಿ ವೈಷ್ಣವ್ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅವನ ಮಾನ ತೆಗೆಯುವ ಪ್ರಯತ್ನ ಮಾಡಿದ್ದಳು. ಆದರೆ ನಂತರ ಸತ್ಯಾಂಶ ಬಯಲಾಗಿದೆ.

ಹೋಟೆಲ್ ಒಂದರಲ್ಲಿ ಅನನ್ಯಾ ತಾನೇ ಮೊದಲು ಬಂದು ವೈಷ್ಣವ್ ಕೆನ್ನೆಗೆ ಮುತ್ತು ಕೊಟ್ಟಿದ್ದಳು. ಅವಳಾಗೇ ವೈಷ್ಣವ್ ಮೈಮೇಲೆ ಬಂದಿದ್ದಳು. ಅದನ್ನು ಕಣ್ಣಾರೆ ಕಂಡ ಕೀರ್ತಿ ಕೂಡ ಇದ್ದಾಳೆ. ಕೀರ್ತಿ ಸತ್ಯಾಂಶವನ್ನು ಎಲ್ಲರ ಎದುರು ಹೇಳುತ್ತಾಳೆ ಎಂದು ಲಕ್ಷ್ಮೀ ಪ್ರೆಸ್‌ ಮೀಟ್‌ ಕರೆದಿದ್ದಳು ಆದರೆ ಕೀರ್ತಿ ಒಂದು ರೀತಿಯ ಕಿರಿಕಿರಿಯನ್ನು ಅನುಭವಿಸುತ್ತಾಳೆ. ಹಾಗೆ ಅನುಭವಿಸಿದ ಕಿರಿಕಿರಿಯಿಂದ ಅವಳ ಮನಸ್ಸು ವಿಚಲಿತವಾಗುತ್ತದೆ. ಎಲ್ಲರ ಮುಂದೆ “ನಂಗೇನು ಕೇಳ್ಬೇಡಿ, ನಂಗೇನೂ ಗೊತ್ತಿಲ್ಲ” ಎಂದು ಲಕ್ಷ್ಮೀ ಕೈ ಬಿಟ್ಟು ಬಿಡುತ್ತಾಳೆ. ಆದರೆ ಲಕ್ಷ್ಮೀ ಇದಕ್ಕೆಲ್ಲ ಹೆದರುವುದಿಲ್ಲ.

ಸಿಸಿಟಿವಿ ಚೆಕ್ ಮಾಡ್ತಾರೆ
ಸಿಸಿಟಿವಿಯನ್ನು ಚೆಕ್ ಮಾಡ್ತಾರೆ. ಲಕ್ಷ್ಮೀ ಸಿಸಿಟಿವಿಯನ್ನು ಚೆಕ್ ಮಾಡಲೇಬೇಕು ಎಂದು ಒತ್ತಾಯ ಮಾಡುತ್ತಾಳೆ. ಒತ್ತಾಯ ಮಾಡಿದ ನಂತರ ಅವಳಿಗೆ ತಿಳಿಯುತ್ತದೆ. ಇದೆಲ್ಲ ಅನನ್ಯಾಳದ್ದೇ ಕೆಲಸ ಎಂದು. ಸಾಕಷ್ಟು ಜನ ಲಕ್ಷ್ಮೀ ಹಿಂದಿನಿಂದಲೇ ಬಂದಿರುತ್ತಾರೆ. ಅವರೆಲ್ಲರೂ ಅನನ್ಯಾಳ ತಪ್ಪನ್ನು ಕಣ್ಣಾರೆ ನೋಡುತ್ತಾರೆ. ಆಗ ಅನನ್ಯಾ ಮುಖ ಅವಮಾನದಿಂದ ಮುದುಡುತ್ತದೆ. ಎಲ್ಲರಿಗೂ ವೈಷ್ಣವ್ ಯಾವ ತಪ್ಪನ್ನೂ ಮಾಡಿಲ್ಲ ಎಂದು ಅರ್ಥ ಆಗುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner