Lakshmi Baramma Serial: ಲಕ್ಷ್ಮೀಯನ್ನೇ ಅನುಮಾನಿಸಿದ ವೈಷ್ಣವ್; ಕೀರ್ತಿ ವಿಚಾರವಾಗಿ ಈಗಲಾದರೂ ಸತ್ಯ ಹೊರಬರುತ್ತಾ?
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮೇಲೆ ಇನ್ನೊಂದಷ್ಟು ಅಪವಾದಗಳು ಬರುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ವೈಷ್ಣವ್ ಕೇಳಿದ ಪ್ರಶ್ನೆಗೆ ಲಕ್ಷ್ಮೀ ಮಂಕಾಗಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹತ್ತಿರ ವೈಷ್ಣವ್ ಪದೇ ಪದೇ ಕೀರ್ತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾನೆ. ಯಾಕೆಂದರೆ ಅವನಿಗೆ ಕೀರ್ತಿಯ ವರ್ತನೆಗಳು ಸರಿ ಎನಿಸುತ್ತಿಲ್ಲ. ಹೀಗಿರುವಾಗ ಅವನು ಲಕ್ಷ್ಮೀಯನ್ನು ಮಾತ್ರ ಪ್ರಶ್ನೆ ಮಾಡಲು ಸಾಧ್ಯ ಯಾಕೆಂದರೆ ಲಕ್ಷ್ಮೀ ಸಾಕಷ್ಟು ವಿಚಾರಗಳನ್ನು ವೈಷ್ಣವ್‌ನಿಂದ ಮುಚ್ಚಿಟ್ಟಿದ್ದಾಳೆ ಎಂಬ ಅನುಮಾನ ವೈಷ್ಣವ್‌ಗೆ ಬಂದಿದೆ. ಕೀರ್ತಿಯ ಜತೆ ಹೆಚ್ಚಿನ ಸಂಬಂಧ ಹೊಂದಿರುವವಳೆಂದರೆ ಅದು ಲಕ್ಷ್ಮೀ ಮಾತ್ರ. ಕೀರ್ತಿ ಏನೇ ಮಾತನಾಡಲು ಮುಂದಾದರೂ ಲಕ್ಷ್ಮೀ ಅವಳನ್ನು ಕಂಟ್ರೋಲ್ ಮಾಡುತ್ತಿರುವುದನ್ನು ಅವನು ಗಮನಿಸಿದ್ದಾನೆ.
ಕೀರ್ತಿ ಬಗ್ಗೆ ವಿಚಾರಿಸಿದ ವೈಷ್ಣವ್
ಈ ವಿಚಾರವಾಗಿ ಅವನು ಲಕ್ಷ್ಮೀಯನ್ನು ನೇರವಾಗಿ ಪ್ರಶ್ನೆ ಮಾಡಿದ್ದಾನೆ. ಈ ಹಿಂದೆ ಕೀರ್ತಿ ಪ್ರೆಸ್‌ಮೀಟ್ ಸಂದರ್ಭದಲ್ಲಿ, ಎಲ್ಲ ಸತ್ಯ ಹೇಳುತ್ತಾಳೆ ಎಂದು ಭರವಸೆಯಿಂದ ಕುಳಿತಾಗ ಒಂದೇ ಸಲ “ನನಗೆ ಏನೂ ಗೊತ್ತಿಲ್ಲ, ನನ್ನ ಬಿಟ್ಬಿಡಿ” ಎಂದು ಎಲ್ಲರ ಎದುರು ಅವಳು ಕೂಗಾಡಿದ್ದಳು. ಇದು ಅವನಿಗೆ ಅಸಹಜ ಎಂದೆನಿಸಿತ್ತು. ಖಂಡಿತ ಕೀರ್ತಿ ಈ ರೀತಿ ಮಾಡೋದಿಲ್ಲ ಎಂಬ ಭರವಸೆ ಅವನಲ್ಲಿತ್ತು. ಹಾಗಾಗಿ ಪ್ರಶ್ನೆ ಮಾಡಿದ್ದಾನೆ.
ಲಕ್ಷ್ಮೀ ಮೇಲೆ ಅನುಮಾನ
ಇನ್ನು ಜೈಲಿನಲ್ಲಿ ಕುಳಿತ ಕಾವೇರಿಗೂ ಕೀರ್ತಿಗೆ ಏನೂ ನೆನಪಿಲ್ಲ ಎಂಬ ವಿಚಾರ ಗೊತ್ತಾಗಿದೆ. ಹೇಗಾದರೂ ಮಾಡಿ ಲಕ್ಷ್ಮೀ ಮುಚ್ಚಿಟ್ಟ ಸತ್ಯವನ್ನು ಹೊರಹಾಕಬೇಕು ಎಂದು ಅವಳು ಅಂದುಕೊಳ್ಳುತ್ತಿದ್ದಾಳೆ. ಎಲ್ಲ ವಿಚಾರವನ್ನು ಲಕ್ಷ್ಮೀ ತನ್ನಿಂದ ಮುಚ್ಚಿಡುತ್ತಿದ್ದಾಳೆ ಎಂದು ವೈಷ್ಣವ್ ಅನುಮಾನಪಟ್ಟಿದ್ದಾನೆ. ಅವನ ಅನುಮಾನ ನಿಜವೂ ಹೌದು. ಆದರೆ ಕೀರ್ತಿ ಬಗ್ಗೆ ಲಕ್ಷ್ಮೀ ಸತ್ಯ ಹೇಳ್ತಾಳಾ? ಇಲ್ವಾ? ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.