Lakshmi Baramma Serial: ಕೀರ್ತಿ ನಾಟಕ ಮಾಡ್ತಿದ್ದಾಳಾ ಅಥವಾ ನಿಜ ಹೇಳ್ತಿದ್ದಾಳಾ? ಸುಪ್ರಿತಾ ಮಾಡಿದ್ದಾಳೆ ಹೊಸ ಉಪಾಯ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕೀರ್ತಿ ನಾಟಕ ಮಾಡ್ತಿದ್ದಾಳಾ ಅಥವಾ ನಿಜ ಹೇಳ್ತಿದ್ದಾಳಾ? ಸುಪ್ರಿತಾ ಮಾಡಿದ್ದಾಳೆ ಹೊಸ ಉಪಾಯ

Lakshmi Baramma Serial: ಕೀರ್ತಿ ನಾಟಕ ಮಾಡ್ತಿದ್ದಾಳಾ ಅಥವಾ ನಿಜ ಹೇಳ್ತಿದ್ದಾಳಾ? ಸುಪ್ರಿತಾ ಮಾಡಿದ್ದಾಳೆ ಹೊಸ ಉಪಾಯ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ನಾಟಕ ಮಾಡ್ತಿದ್ದಾಳಾ ಅಥವಾ ನಿಜ ಹೇಳ್ತಿದ್ದಾಳಾ? ಎಂಬ ಅನುಮಾನ ಸುಪ್ರಿತಾಗಿದೆ. ಆದರೆ ಕೀರ್ತಿ ಮಾಡ್ತಾ ಇರೋದು ನಾಟಕ ಎಂದು ಸಾಬೀತು ಮಾಡಲು ಈಗ ಹೊಸ ಉಪಾಯವೊಂದನ್ನು ಮಾಡಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (ಕಲರ್ಸ್ ಕನ್ನಡ)

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀಗೆ ಕೀರ್ತಿ ಬಗ್ಗೆ ಸತ್ಯ ತಿಳಿಸಬೇಕು, ಕೀರ್ತಿ ನಾಟಕ ಮಾಡುತ್ತಿದ್ದಾಳೆ ಎಂದು ಅರ್ಥ ಮಾಡಿಸಬೇಕು ಎಂದು ಸುಪ್ರಿತಾ ಅಂದುಕೊಂಡಿದ್ದಾಳೆ. ಅದಕ್ಕಾಗಿ ಗಂಗಾಳ ಸಹಾಯವನ್ನು ಪಡೆಯುವ ನಿರ್ಧಾರ ಮಾಡಿದ್ದಾಳೆ. ಇತ್ತ ಕಾವೇರಿಯೂ ಕಮ್ಮಿ ಇಲ್ಲ. ಅವಳು ಚಿಂಗಾರಿಯನ್ನು ತನ್ನ ಮನೆಯ ಕೆಲಸದವಳಾಗಿ ಹೋಗುವಂತೆ ಮಾಡಿ, ಕೀರ್ತಿಗೆ ಏನೂ ಗೊತ್ತಿಲ್ಲ, ಆದರೂ ಲಕ್ಷ್ಮೀ ನಾಟಕ ಮಾಡುತ್ತಿದ್ದಾಳೆ ಎನ್ನುವ ವಿಚಾರವನ್ನು ಬಯಲು ಮಾಡಲು ಹೇಳಿದ್ದಾಳೆ. ಚಿಂಗಾರಿ ಕೂಡ ಲಕ್ಷ್ಮೀ ಮನೆ ಸೇರಿಕೊಂಡಿದ್ದಾಳೆ.

ಸುಪ್ರಿತಾ ಹೊಸ ಉಪಾಯ

ಗಂಗಾ ಕೈಕಾಲಿಗೆ ಪೆಟ್ಟು ಮಾಡಿಕೊಂಡಿದ್ದರೂ ನೆಲ ಒರೆಸುತ್ತಾ ಇರುತ್ತಾಳೆ. ಆಗ ಸುಪ್ರಿತಾ ಬಂದು “ಇನ್ನೊಬ್ಬಳು ಕೆಲಸದವಳು ಬಂದಿದ್ದಾಳಲ್ಲ ಅವಳೆಲ್ಲಿ?” ಎಂದು ಕೇಳುತ್ತಾಳೆ. ಆಗ ಅವಳು ತರಕಾರಿ ತರಲು ಹೋಗಿರಬಹದು ಎನ್ನುತ್ತಾಳೆ. ಹಾಗಾದ್ರೆ ಒಳ್ಳೆದಾಯ್ತು ನಾನು ನಿಗೊಂದು ಕೆಲಸ ಹೇಳ್ತೀನಿ ಅದನ್ನೆ ಮಾಡು ನೀನು ಇದನ್ನೆಲ್ಲ ಬಿಟ್ಟು ಬಿಡು ಎನ್ನುತ್ತಾ ಮಾತಿಗಿಳಿಯುತ್ತಾಳೆ. ಅದಾದ ನಂತರದಲ್ಲಿ ಕಾರುಣ್ಯ ಮನೆಗೆ ಹೋಗಿ ಅವಳನ್ನು ಕೀರ್ತಿಯಿಂದ ದೂರ ಕರೆದುಕೊಂಡು ಹೋಗು, ಆಗ ನಾನು ಲಕ್ಷ್ಮೀಯನ್ನು ಅಲ್ಲಿಗೆ ಕರೆದುಕೊಂಡು ಬಂದು ಸತ್ಯ ಏನು ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಹೇಳುತ್ತಾಳೆ.

ಕೀರ್ತಿ ಇದ್ದಲ್ಲಿಗೆ ಹೋಗಲು ಒಪ್ತಾಳಾ ಲಕ್ಷ್ಮೀ?

ಆದರೆ ಮೊದಲು ಗಂಗಾ ಒಪ್ಪಿಕೊಳ್ಳುವುದಿಲ್ಲ. “ನಾನು ಕರೆದ ತಕ್ಷಣ ಮಾತಾಡಿಕೊಂಡು ನನ್ನ ಜೊತೆ ಬರೋದಕ್ಕೆ ಅವರೇನು ನನ್ನ ಗೆಳತಿನಾ?” ಎಂದು ಪ್ರಶ್ನೆ ಮಾಡುತ್ತಾಳೆ. ಆದರೂ ಸುಪ್ರಿತಾ ಬಿಡುವುದಿಲ್ಲ. ನಂತರ ಲಕ್ಷ್ಮೀ ಹತ್ತಿರ ಹೋಗಿ ಈಗ ನಾವು ಕೀರ್ತಿ ಮನೆಗೆ ಹೋಗೋಣ ಅವಳ ನಾಟಕ ಬಯಲು ಮಾಡ್ತೀನಿ ಎಂದು ಹೇಳುತ್ತಾಳೆ. ಆದರೆ ಲಕ್ಷ್ಮೀ ಬರಲು ಒಪ್ಪೋದಿಲ್ಲ. “ಅತ್ತೆ ನೀವು ಇನ್ನೂ ಅದೇ ಹಳೆ ವಿಚಾರದಲ್ಲೇ ಇದ್ದೀರಾ? ನನಗೆ ಗೊತ್ತು ಕೀರ್ತಿಗೆ ಏನೂ ನೆನಪಿಲ್ಲ. ಅವಳು ನಾಟಕ ಮಾಡ್ತಾ ಇಲ್ಲ” ಎಂದು ಕೇಳುತ್ತಾಳೆ. “ನೀನು ನನ್ನ ಜೊತೆ ಬಾ ಸಾಕು, ನಾನು ಎಲ್ಲವನ್ನೂ ತಿಳಿಸುತ್ತೇನೆ” ಎಂದು ಮತ್ತೆ ಕರೆಯುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. ಕಾವೇರಿ ಜೈಲಿನಲ್ಲೇ ಇದ್ದರೂ ಮನೆಯಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner