Lakshmi Baramma serial: ಕೀರ್ತಿ ವಿಚಾರ ಮಾತನಾಡಿದ ಲಕ್ಷ್ಮೀ; ವೈಷ್ಣವ್‌ಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವನೆಗೆ ಬೀಳುತ್ತಾ ಬ್ರೇಕ್?
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕೀರ್ತಿ ವಿಚಾರ ಮಾತನಾಡಿದ ಲಕ್ಷ್ಮೀ; ವೈಷ್ಣವ್‌ಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವನೆಗೆ ಬೀಳುತ್ತಾ ಬ್ರೇಕ್?

Lakshmi Baramma serial: ಕೀರ್ತಿ ವಿಚಾರ ಮಾತನಾಡಿದ ಲಕ್ಷ್ಮೀ; ವೈಷ್ಣವ್‌ಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವನೆಗೆ ಬೀಳುತ್ತಾ ಬ್ರೇಕ್?

Lakshmi Baramma serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಮಾತನಾಡುತ್ತಿದ್ದಾರೆ. ಏಕಾಂತ ಸಿಕ್ಕಿದ ಸಂದರ್ಭವೇ ಇಲ್ಲದ ಅವರ ಬಾಳಲ್ಲಿ ಈಗ ಸಮಯ ಸಿಕ್ಕಿದೆ. ಆದರೆ ವೈಷ್ಣವ್‌ಗೆ ಲಕ್ಷ್ಮೀ ಮಾತಿನ ಯಾವ ಅರ್ಥವೂ ತಿಳಿಯುತ್ತಿಲ್ಲ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (ಕಲರ್ಸ್‌ ಕನ್ನಡ)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಪಾನಿಪೂರಿ ತಿಂದಿದ್ದೇನೆ ಎಂದು ಅಂದುಕೊಂಡಿದ್ದಾನೆ. ಅದೇ ವಿಚಾರವಾಗಿ ಲಕ್ಷ್ಮೀ ಹತ್ತಿರ ಮಾತಾಡುತ್ತಾ ಇರುತ್ತಾನೆ. ಅವನಿಗೆ ಈ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಅರಿವೂ ಇಲ್ಲ ಅಷ್ಟು ಅಮಲಿನಲ್ಲಿ ತೇಲಾಡುತ್ತಾ ಇದ್ದಾನೆ. ಅವನಿಗೆ ಲಕ್ಷ್ಮೀ ಹೇಳಿದ ಯಾವ ಮಾತೂ ಅರ್ಥ ಆಗುತ್ತಿಲ್ಲ. ಅವನು ಮಾತಾಡುತ್ತಾ “ಮಹಾಲಕ್ಷ್ಮೀ ನೀವು ತುಂಬಾ ಒಳ್ಳೆ ಹೆಂಡ್ತಿ, ನಿಮ್ಮಂತ ಹೆಂಡ್ತೀನಾ ಪಡೆಯೋಕೆ ನಾನು ಪುಣ್ಯ ಮಾಡಿದ್ದೆ” ಎಂದು ಹೇಳುತ್ತಾನೆ.

ಲಕ್ಷ್ಮೀಗೆ ಕಾಡುತ್ತಿದೆ ಪಾಪ ಪ್ರಜ್ಞೆ

ಆಗ ಲಕ್ಷ್ಮೀಗೆ ಪಾಪ ಪ್ರಜ್ಞೆ ಕಾಡುತ್ತದೆ. ನಾನು ಎಷ್ಟೊಂದು ವಿಚಾರವನ್ನು ಇವನಿಂದ ಮುಚ್ಚಿಟ್ಟಿರುವೆ, ಆದರೂ ಇವನು ನನ್ನ ಇಷ್ಟೊಂದು ನಂಬ್ತಾನಲ್ಲ ಎಂದು ಮನಸಿನಲ್ಲಿಯೇ ಅಂದುಕೊಳ್ಳುತ್ತಾ ಇರುತ್ತಾಳೆ. ನಾನು ಮೋಸ ಮಾಡ್ತಾ ಇದ್ದೀನಿ ಎನ್ನುವ ಭಾವನೆ ಅವಳಿಗೆ ಬರುತ್ತಾ ಹೋಗುತ್ತದೆ, ಆದರೆ ಅದನ್ನು ತೋರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾಳೆ. ಅದಾದ ನಂತರದಲ್ಲಿ ನಿಧಾನಕ್ಕೆ ತಾನೂ ಮಾತು ಆರಂಭಿಸುತ್ತಾಳೆ. ಹಳೆಯ ಒಂದೊಂದೇ ವಿಚಾರವನ್ನು ತೆಗೆಯುತ್ತಾಳೆ. ಕೀರ್ತಿ ವಿಚಾರವಾಗಿ ತಾನು ಮೋಸ ಮಾಡುತ್ತಿದ್ದೀನಿ ಎಂದು ಅವಳಿಗೆ ಅನಿಸಿರುತ್ತದೆ.

ಕೀರ್ತಿ ವಿಚಾರ ಮಾತನಾಡಿದ ಲಕ್ಷ್ಮೀ
ಕೀರ್ತಿ ಬೆಟ್ಟದಿಂದ ಬಿದ್ದು ಸತ್ತಿದ್ದಾಳೆ ಎಂಬ ವಿಚಾರ ಗೊತ್ತಾದಾಗ ಸತ್ಯ ಹೊರತೆಗೆಯಬೇಕು ಎಂದು ನಾನು ನಾಟಕ ಮಾಡಿದ್ದೆ. ಆದರೆ ಅತ್ತೆಯ ತಪ್ಪು ಏನು ಎಂದು ನಿಮ್ಮೆಲ್ಲರಿಗೆ ತೋರಿಸುವುದು ಮಾತ್ರ ನನ್ನ ಉದ್ದೇಶ ಆಗಿತ್ತು. ಕೀರ್ತಿಯನ್ನು ನಾನು ಅಷ್ಟೊಂದು ಹಚ್ಚಿಕೊಂಡಿರಲಿಲ್ಲ. ಬೇಕು ಎಂದೇ ಕೀರ್ತಿ ದೆವ್ವ ನನ್ನ ಮೈಮೇಲೆ ಬಂದ ರೀತಿ ನಾನು ನಾಟಕ ಮಾಡುತ್ತಿದ್ದೆ ಎಂದು ಹೇಳುತ್ತಾಳೆ.

ವೀಕ್ಷಕರಿಗೆ ಧಾರಾವಾಹಿ ಕಥೆ ಒಂದೇ ರೀತಿ ಸಾಗುತ್ತಿದೆ ಎಂದೆನಿಸಿದೆ. ಈ ಧಾರಾವಾಹಿ ಎಲ್ಲಿಂದ ಶುರುವಾಯಿತು ಎಲ್ಲಿ ಹೋಗುತ್ತಿದೆ ಒಂದು ತಿಳಿಯುತ್ತಿಲ್ಲ ಅಂತ್ಯ ಇನ್ನು ಭಯಾನಕ ಇರಬಹುದು ಅದಕ್ಕೆ ಈಗಲೇ ಇದನ್ನು ನೋಡುವುದು ನಿಲ್ಲಿಸಿ ಇಲ್ಲದ್ದಿದರೆ ಮೆಂಟಲ್ ಆಗೋದು ಗ್ಯಾರಂಟಿ ಎಂದು ಪೂಜಾ ಕಾರಂತ ಕಾಮೆಂಟ್ ಮಾಡಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner