Lakshmi Baramma Serial: ಜೈಲಿನಿಂದಲೇ ಕಾವೇರಿ ಕುತಂತ್ರ; ಕೀರ್ತಿ ಗುಟ್ಟು ಗೊತ್ತಾಗಿದೆ ಎಂದ ವೈಷ್ಣವ್
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತನಗೆ ಎಲ್ಲ ಸತ್ಯ ಗೊತ್ತಾಗಿದೆ ಎಂದು ಹೇಳುತ್ತಿದ್ದಾನೆ. ಆದರೆ ಅವನಿಗೆ ಯಾವ ಸತ್ಯ ಗೊತ್ತಾಗಿದೆ ಎಂದು ಪೂರ್ತಿಯಾಗಿ ಲಕ್ಷ್ಮೀಗೆ ಅರ್ಥ ಆಗುತ್ತಿಲ್ಲ. ಅವನು ಮಾತಿನಿಂದ ಗೊಂದಲದಲ್ಲಿದ್ದಾಳೆ. ಇನ್ನು ಕಾವೇರಿ ಜೈಲಿನಿಂದ ಕಾಲ್ ಮಾಡಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತನಗೆ ಎಲ್ಲ ಸತ್ಯ ಗೊತ್ತಾಗಿದೆ ಎಂದು ಹೇಳುತ್ತಿದ್ದಾನೆ. ಆದರೆ ಅವನಿಗೆ ಯಾವ ಸತ್ಯ ಗೊತ್ತಾಗಿದೆ ಎಂದು ಪೂರ್ತಿಯಾಗಿ ಲಕ್ಷ್ಮೀಗೆ ಅರ್ಥ ಆಗುತ್ತಿಲ್ಲ. ಅವನು ಮಾತಿನಿಂದ ಗೊಂದಲದಲ್ಲಿದ್ದಾಳೆ. ಇನ್ನು ಕಾವೇರಿ ಜೈಲಿನಿಂದ ಕಾಲ್ ಮಾಡಿದ್ದಾಳೆ. ಈ ರೀತಿಯಾಗಿ ಎರಡು ಬೆಳವಣಿಗೆಗಳು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಂಡು ಬಂದಿದೆ. ಕಾವೇರಿ ಜೈಲಿನಲ್ಲಿದ್ದುಕೊಂಡೇ ಚಿಂಗಾರಿ ಮೂಲಕ ಮನೆಯೊಳಗಡೆ ಏನೆಲ್ಲ ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಂಡಿದ್ದಾಳೆ. ಹಾಗಾಗಿ ಅವಳಿಗೆ ಕೀರ್ತಿ ವಿಚಾರ ಕೂಡ ಗೊತ್ತಾಗಿದೆ. ಯಾಕೆಂದರೆ ಕೀರ್ತಿ ಬಗ್ಗೆ ಸತ್ಯ ಗೊತ್ತಾದರೆ ಕಾವೇರಿ ಜೈಲಿನಿಂದ ಹೊರಬರಬಹುದು.
ಜೈಲಿನಿಂದ ಕಾವೇರಿ ಕಾಲ್
ಆ ಕಾರಣಕ್ಕಾಗಿ ಆದಷ್ಟು ಮಾಡಿ ತಾನು ಕೀರ್ತಿ ಬಗ್ಗೆ ಸತ್ಯ ತಿಳಿದುಕೊಳ್ಳಬೇಕು ಎಂದು ಬಯಸುತ್ತಾ ಇದ್ದಾಳೆ. ಜೈಲಿನಿಂದ ಸುಪ್ರಿತಾಗೆ ಕಾಲ್ ಮಾಡಿದ್ದಾಳೆ. ಕಾಲ್ ಮಾಡಿ ಮಾತನಾಡುತ್ತಾ ನೀನು ಬಂದು ನನ್ನ ಮೀಟ್ ಆಗು ಎಂದು ಹೇಳುತ್ತಾಳೆ. ಆದರೆ ಮೊದಲು ಸುಪ್ರಿತಾ ಒಪ್ಪೋದಿಲ್ಲ. ಆದರೆ ನಂತರದಲ್ಲಿ ಅವಳಿಗೆ ಒಪ್ಪಲೇಬೇಕಾದ ಪರಿಸ್ಥಿತಿ ಎದುರಾದಂತಿದೆ. ಯಾಕೆಂದರೆ ಸುಪ್ರಿತಾ ಕೀರ್ತಿ ಬಗ್ಗೆ ಸತ್ಯ ತಿಳಿದುಕೊಳ್ಳಲು ಬಯಸುತ್ತಿದ್ದಾಳೆ. “ನಾನು ಹೇಳ್ತಾ ಇರೋದು ಸುಪ್ರಿತಾ ಬಗ್ಗೆ” ಎಂದು ಕಾವೇರಿ ಸ್ಪಷ್ಟವಾಗಿ ಹೇಳಿದ ನಂತರ ಸುಪ್ರಿತಾಗೂ ಆಸಕ್ತಿ ಮೂಡುತ್ತದೆ.
ವೈಷ್ಣವ್ ಪ್ರಶ್ನೆಗೆ ಲಕ್ಷ್ಮೀ ಉತ್ತರವೇನು?
ವೈಷ್ಣವ್ ಸ್ನಾನ ಮುಗಿಸಿಕೊಂಡು ಬಂದಿರುತ್ತಾನೆ. ಲಕ್ಷ್ಮೀ ಹತ್ತಿರ ನನಗೆ ಎಲ್ಲ ಹೇಳಿದ್ದಾಳೆ ಕೀರ್ತಿ. ಮೀನ ಯಾರು ಎಂದು ಪ್ರಶ್ನೆ ಮಾಡುತ್ತಾನೆ. ಅವನಿಗೆ ಕೀರ್ತಿ ಮೇಲೆ ಅನುಮಾನ ಬಂದಿದೆ ಎನ್ನುವ ವಿಚಾರದಿಂದ ಲಕ್ಷ್ಮೀಗೆ ಭಯ ಆರಂಭವಾಗಿದೆ. ಲಕ್ಷ್ಮೀ ಉದ್ದೇಶ ಕೆಟ್ಟದ್ದಲ್ಲ. ಆದರೂ ಅವಳು ಎಲ್ಲರಿಂದ ವಿಷಯ ಮುಚ್ಚಿಟ್ಟ ಕಾರಣ ಅವಳೇ ಕೆಟ್ಟವಳು ಎಂದು ಆಲೋಚನೆ ಬರುವಂತೆ ಮುಂದಿನ ಸನ್ನಿವೇಷಗಳು ಎದುರಾಗಬಹುದು ಎಂಬ ಭಯ ಅವಳಿಗಿದೆ. ಒಂದೊಂದು ಬಾರಿ ವೈಷ್ಣವ್ ಧ್ವನಿ ಕೇಳಿದಾಗಲೂ ಅವಳಿಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಮುಂದೇನಾಗುತ್ತದೆ? ಲಕ್ಷ್ಮೀ ಸತ್ಯ ಹೇಳ್ತಾಳಾ? ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.