Lakshmi Baramma Serial: ಮಕ್ಕಳಾಗಲಿ ಎಂದು ಹರಕೆ ಕಟ್ಟಿದ ಲಕ್ಷ್ಮೀ, ವೈಷ್ಣವ್; ಕೀರ್ತಿ ಬಗ್ಗೆ ಸತ್ಯ ತಿಳಿದುಕೊಳ್ಳಲು ಚಿಂಗಾರಿ ಸಾಹಸ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿಂಗಾರಿ ಸತ್ಯ ತಿಳಿದುಕೊಳ್ಳಲು ಬಂದಿದ್ದಾಳೆ. ಇತ್ತ ವೈಷ್ಣವ್ ಹಾಗೂ ಲಕ್ಷ್ಮೀ ಮಕ್ಕಳಾಗಲಿ ಎಂದು ದೇವಸ್ಥಾನದಲ್ಲಿ ಹರಕೆ ಕಟ್ಟಿದ್ದಾರೆ. ಇನ್ನೂ ಏನೆಲ್ಲ ಆಗಿದೆ ಎಂಬುದನ್ನು ನೀವೇ ನೋಡಿ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿಂಗಾರಿ ಕಾರ್ಯಾಚರಣೆ ಆರಂಭ ಮಾಡಿದ್ದಾಳೆ. ಕೀರ್ತಿ ಯಾರು, ಇಷ್ಟು ದಿನದ ಹಿಂದೆ ಅವಳು ಎಲ್ಲಿದ್ದಳು, ಏನ್ಮಾಡ್ತಾ ಇದ್ಲು ಅನ್ನೋದನ್ನು ಪ್ರಶ್ನೆ ಮಾಡ್ತಾ ಇದ್ದಾಳೆ. ಕೀರ್ತಿ ಪಾರ್ಕ್‌ನಲ್ಲಿ ಇರ್ತಾಳೆ. ಆಗ ಚಿಂಗಾರಿ ಹೋಗಿ ಕೀರ್ತಿ ಹತ್ತಿರ ಪ್ರಶ್ನೆ ಮಾಡುತ್ತಾಳೆ. ನೀನು ಲಕ್ಷ್ಮೀಗೆ ಸಿಗೋಕು ಮುಂಚೆ ಎಲ್ಲಿದ್ದೆ? ಎಂದು ಪ್ರಶ್ನೆ ಕೇಳ್ತಾಳೆ. ಆಗ ಕೀರ್ತಿ “ನಾನು ಎಲ್ಲಿದ್ದೆ ಅನ್ನೋ ಸತ್ಯ ನಿಮಗೆ ಬೇಕಾ? ಹಾಗಾದ್ರೆ ಹತ್ರ ಬನ್ನಿ” ಎಂದು ಕರೀತಾಳೆ. ಆದರೆ ಅವಳು ಯಾವ ರೀತಿ ಸತ್ಯ ಹೇಳಿದ್ದಾಳೆ ಅನ್ನೋದನ್ನು ವೀಕ್ಷಕರಿಗೆ ತಿಳಿಯದಂತೆ ಗುಟ್ಟಾಗಿ ಕಿವಿಯಲ್ಲಿ ಸತ್ಯ ಹೇಳಿದ ರೀತಿ ತೋರಿಸಿದ್ದಾರೆ.
ದೇವಸ್ಥಾನಕ್ಕೆ ಬಂದ ಲಕ್ಷ್ಮೀ ಕುಟುಂಬ
ಲಕ್ಷ್ಮೀ ಕುಟುಂಬ ದೇವಸ್ಥಾನಕ್ಕೆ ಬಂದಿದೆ. ಅಲ್ಲಿಗೆ ಬಂದು ಸಾಕಷ್ಟು ನೆಮ್ಮದಿ ದೊರಕಿದೆ ಎಂದು ಮನೆಯವರೆಲ್ಲ ಮಾತಾಡಿಕೊಳ್ಳುತ್ತಾ ಇರುತ್ತಾರೆ. ‘ಅಂತು ಸುಬ್ಬಿಯಿಂದ ನಾವೆಲ್ಲ ಇಂದು ದೇವಸ್ಥಾನಕ್ಕೆ ಬರುವ ಹಾಗಾಯ್ತು‘ ಎಂದು ಅಜ್ಜಿ ಹೇಳುತ್ತಾರೆ. ಆ ಮಾತನ್ನು ಕೇಳಿ ಗಂಗಕ್ಕನಿಗೆ ಸ್ವಲ್ಪ ಕೋಪ ಬರುತ್ತದೆ. ಅವಳನ್ನು ನೋಡಿ ಕೃಷ್ಣ ನಗುತ್ತಾನೆ. ‘ಇದೇ ನೋಡು ಗಂಗಾ ಹೊಟ್ಟೆಕಿಚ್ಚು ಅಂದ್ರೆ‘ ಎಂದು ಹೇಳುತ್ತಾನೆ. ಆಗ ಅವಳು ಸುಮ್ಮನೆ ಹಾಗೆಲ್ಲ ಏನೂ ಇಲ್ಲ ಎನ್ನುತ್ತಾಳೆ. ಅದಾದ ನಂತರ ಮನೆಯಲ್ಲಿ ಈ ಹಿಂದೆ ನಡೆದ ಸಂಕಷ್ಟದ ದಿನಗಳನ್ನು ಅಜ್ಜಿ ನೆನಪು ಮಾಡಿಕೊಳ್ಳುತ್ತಾರೆ.
ಹರಕೆ ಕಟ್ಟಿದ ಲಕ್ಷ್ಮೀ ವೈಷ್ಣವ್
ಆಗ ವೈಷ್ಣವ್ ಲಕ್ಷ್ಮೀ ಕೈಯನ್ನು ತನ್ನತ್ತ ಸೆಳೆದುಕೊಂಡು ಅವಳ ಕೈ ಹಿಡಿದು ನಿಂತಿರ್ತಾನೆ. ಆಗ ಅವರ ಹಿಂದಿನಿಂದ ಒಂದು ತೊಟ್ಟಿಲು ಬೀಳುತ್ತದೆ. ಆ ತೊಟ್ಟಿಲನ್ನು ನೋಡಿ ಆಶ್ಚರ್ಯ ಆಗುತ್ತದೆ. ಅಜ್ಜಿ ಇದೇನಿದು ಎಂದು ಹಿಂದೆ ನಿಂತವರ ಬಳಿ ಕೇಳುತ್ತಾಳೆ. ಆಗ ಅವರು ಇಲ್ಲಿ ಮರಕ್ಕೆ ಈ ತೊಟ್ಟಿಲು ಕಟ್ಟಿದ್ರೆ ಮಕ್ಕಳಾಗ್ತಾದಂತೆ ಹಾಗಾಗಿ ನಾವು ಈ ತೊಟ್ಟಿಲನ್ನು ಹರಕೆ ರೂಪದಲ್ಲಿ ಮರಕ್ಕೆ ಕಟ್ಟಿ ಹೋಗಲು ಬಂದಿದ್ದೇವೆ ಎನ್ನುತ್ತಾರೆ. ಆಗ ಅಜ್ಜಿ ಒಳ್ಳೆದಾಯ್ತು ಎಂದು ಹೇಳುತ್ತಾ “ವೈಷ್ಣವ್, ಲಕ್ಷ್ಮೀ ನೀವೂ…” ಅಂತ ರಾಗ ಎಳೆಯುತ್ತಾರೆ. ಅವರಿಬ್ಬರ ಮುಖದಲ್ಲೂ ನಗು ಇರುತ್ತದೆ. ನಾಚಿಕೆಯೂ ಕಾಣಿಸುತ್ತದೆ. ನಂತರ ಅವರಿಬ್ಬರೂ ಆ ಮರಕ್ಕೆ ಹರಕೆ ರೂಪದಲ್ಲಿ ತೊಟ್ಟಿಲು ಕಟ್ಟುತ್ತಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.