Lakshmi Baramma Serial: ಮಾದಪ್ಪನ ಮಾತಿಗೆ ಹೆದರಿದ ಕಾವೇರಿ; ಎಲ್ಲರೆದುರು ಸತ್ಯ ತಿಳಿಸಿದ ಕೀರ್ತಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಮಾದಪ್ಪನ ಮಾತಿಗೆ ಹೆದರಿದ ಕಾವೇರಿ; ಎಲ್ಲರೆದುರು ಸತ್ಯ ತಿಳಿಸಿದ ಕೀರ್ತಿ

Lakshmi Baramma Serial: ಮಾದಪ್ಪನ ಮಾತಿಗೆ ಹೆದರಿದ ಕಾವೇರಿ; ಎಲ್ಲರೆದುರು ಸತ್ಯ ತಿಳಿಸಿದ ಕೀರ್ತಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಅಂತ್ಯ ಕಾಲ ಬಂದಂತಿದೆ. ಬೆಟ್ಟದ ಮಾದಪ್ಪನನ್ನು ಕಂಡಾಗಲೇ ಕಾವೇರಿಯ ಅರ್ಧ ಬಲ ಇಳಿದು ಹೋಗಿದೆ. ಕೀರ್ತಿ ಎಲ್ಲ ಸತ್ಯವನ್ನು ಹೇಳಿಯೇ ಇಲ್ಲಿಂದ ಹೋಗುತ್ತಾಳೆ.

ಮಾದಪ್ಪನ ಮಾತಿಗೆ ಹೆದರಿದ ಕಾವೇರಿ;
ಮಾದಪ್ಪನ ಮಾತಿಗೆ ಹೆದರಿದ ಕಾವೇರಿ; (ಕಲರ್ಸ್ ಕನ್ನಡ)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಎಲ್ಲರ ಎದುರು ಸತ್ಯ ಹೇಳಲು ಮುಂದಾಗಿದ್ದಾಳೆ. ಸಾಕ್ಷಿ ಸಮೇತವಾಗಿ ಮುಂದೆ ಬಂದಿದ್ದಾಳೆ. ಬೆಟ್ಟದ ಮಾದಪ್ಪನನ್ನು ಕರೆದುಕೊಂಡು ಬಂದಿದ್ದಾಳೆ. ಬೆಟ್ಟದ ಮಾದಪ್ಪ ಲಕ್ಷ್ಮೀ ಮನೆಗೇ ಬಂದು ಸತ್ಯ ಹೇಳುತ್ತಿದ್ದಾನೆ. ಬೆಟ್ಟದಲ್ಲಿ ಆ ದಿನ ಏನಾಯಿತು ಎಂದು ಎಲ್ಲವನ್ನೂ ಬಾಯ್ಬಿಟ್ಟು ಹೇಳುತ್ತಿದ್ದಾನೆ. ಅವತ್ತು ಕೀರ್ತಿ ಕೂಡ ಬೆಟ್ಟದ ಮೇಲೆ ಒಂದು ಕ್ಯಾಮರಾ ಫೀಕ್ಸ್‌ ಮಾಡಿರುತ್ತಾಳೆ. ಆ ಕ್ಯಾಮರಾದಲ್ಲೂ ಎಲ್ಲಾ ಸೆರೆಯಾಗಿದೆ ಎಂದು ಕೀರ್ತಿ ಹೇಳುತ್ತಿದ್ದಾಳೆ. ಆ ಮಾತನ್ನು ಕೇಳಿ ಕಾವೇರಿ ಕಂಗಾಲಾಗಿದ್ದಾಳೆ.

ಬೆಟ್ಟದ ಮಾದಪ್ಪನನ್ನು ಕಂಡಾಗಲೇ ಕಾವೇರಿಯ ಅರ್ಧ ಬಲ ಇಳಿದು ಹೋಗಿತ್ತು. ಆದರೆ ಯಾರಿಗೂ ಅದನ್ನು ತೋರಿಸಿಕೊಳ್ಳದೆ ಮರೆಮಾಚಿಕೊಂಡಿದ್ದಳು. ಆದರೆ ಬೆಟ್ಟದ ಮಾದಪ್ಪ ಮಾತ್ರ ಎಲ್ಲಾ ಸತ್ಯವನ್ನೂ ಹೇಳಿಬಿಟ್ಟಿದ್ದಾನೆ. ಆದರೆ ಅವನ ಮಾತು ಒಗಟಾಗಿತ್ತು. ಆ ಮಾತನ್ನು ಕಾವೇರಿ ತಿರಸ್ಕರಿಸಿದಳು. ಆದರೆ ಎಲ್ಲರಿಗೂ ಅವನ ಮಾತಿನ ಮೇಲೆ ನಂಬಿಕೆ ಬರುವ ರೀತಿ ಇತ್ತು.

ಸುಪ್ರಿತಾಗೆ ಬಂತು ಅನುಮಾನ
ಕಾವೇರಿ ಯಾಕೋ ತುಂಬಾ ಚಡಪಡಿಸುತ್ತಿದ್ದಾಳೆ ಎಂದು ಅರ್ಥವಾಗಿ ಸುಪ್ರಿತಾ ಅವಳತ್ತ ಗಮನಹರಿಸಿದಳು. “ಅತ್ಗೆ ನೀವು ತಪ್ಪೇ ಮಾಡಿಲ್ಲ ಅಂದ್ರೆ ಯಾಕೆ ಈ ರೀತಿ ರಿಯಾಕ್ಟ್‌ ಮಾಡ್ತಾ ಇದ್ದೀರಾ? ಅವನು ಏನಂದ್ರೆ ನಿಮಗೆ ಏನು?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಕಾವೇರಿಗೆ ಮೈಮೇಲೆ ಬಿಸಿ ನೀರು ಹೊಯ್ದಂತಾಗುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಕಾವೇರಿ ಅವ್ರ ಪಾತ್ರ ಸಮಾಜಕ್ಕೆ ಏನು ಸಂದೇಶ ಕೊಡ್ತಿದೆ ಅಂದ್ರೆ ಸುಳ್ಳನ್ನು ಸತ್ಯದ ರೀತಿ ಹೇಗೆ ಬಿಂಬಿಸುವುದು, ಕೊಲೆನಾ ಯಾವ ರೀತಿ ಮಾಡಬಹುದು, ದೇವರು ಕೆಟ್ಟವರ ಪರನೇ ಇರೋದು ಪೊಲೀಸ್ರಿಗೂ ಗೊತ್ತಾಗದಂಗೆ ಹೇಗೆ ಕ್ರೈಂ ಮಾಡೋದು ಅಂತ ಹೇಳ್ತಿದ್ದಾರೆ ಇದೆಲ್ಲ ತಪ್ಪು ಎನ್ನುವ ಅರ್ಥದಲ್ಲಿ ಸತೀಶ್‌ ರಾವ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

Whats_app_banner