Lakshmi Baramma Serial: ಲಾಯರ್ ಮುಂದೆ ಸತ್ಯ ಒಪ್ಪಿಕೊಂಡ ಕಾವೇರಿ; ಕೀರ್ತಿ ಕೊಲೆ ಮಾಡಿದ್ದು ಇವಳೇ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿದ್ದಾಳೆ. ಲಾಯರ್ ಬಂದು ಸತ್ಯ ಹೇಳುವಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದಾರೆ. ಆದರೆ ಕಾವೇರಿ ಮಾತ್ರ ಇಷ್ಟು ದಿನ ಆದ್ರೂ ಸತ್ಯ ಹೇಳಿರಲಿಲ್ಲ. ಈಗೇನ್ಮಾಡಿದ್ದಾಳೆ ನೋಡಿ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿದ್ದಾಳೆ. ವೈಷ್ಣವ್ ಹೇಗಾದರೂ ಮಾಡಿ ಕಾವೇರಿ ಬಾಯಿಂದ ಸತ್ಯ ಹೊರಹಾಕಬೇಕು ಎಂದು ತುಂಬಾ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಅದು ಸಾಧ್ಯ ಆಗಿರಲಿಲ್ಲ. ವೈಷ್ಣವ್ ಇಲ್ಲದ ಹೊತ್ತಿನಲ್ಲಿ ಲಾಯರ್ ಕಾವೇರಿ ಹತ್ತಿರ ಹೋಗಿರುತ್ತಾರೆ. ಆಗ ಕಾವೇರಿ ಲಾಯರ್ ಬಳಿ ಮಾತಾಡುತ್ತಾ ಸತ್ಯ ಹೇಳಿ ಬಿಡುತ್ತಾಳೆ. ಯಾಕೆಂದರೆ ಲಾಯರ್ ಮಾತು ಆ ರೀತಿಯಾಗಿರುತ್ತದೆ. ನೀನು ನನ್ನ ಹತ್ತಿರ ಸತ್ಯ ಹೇಳದೆ ಏನೂ ಮಾಡೋದಿಕ್ಕಾಗೋದಿಲ್ಲ ಎಂದು ಹೇಳಿರುತ್ತಾರೆ. ಆ ಮಾತನ್ನು ಕೇಳಿ ಯಾಕೋ ಗಾಬರಿಯಾಗಿ ಕಾವೇರಿ ಸತ್ಯ ಒಪ್ಪಿಕೊಳ್ಳುತ್ತಾಳೆ.
ಕಾವೇರಿ ಜೈಲಿನಲ್ಲಿದ್ದಾಗಲೇ ನಾನು ಕೀರ್ತಿನಾ ಕೊಂದಿದ್ದು ನಿಜ ಎಂದು ಹೇಳುತ್ತಾಳೆ. ಕೀರ್ತಿ ಗನ್ ಹಿಡ್ಕೊಂಡು ಓಡಿ ಬರ್ತಾ ಇದ್ಲು. ಆಗ ನಾನು ಬೆಟ್ಟದ ಮೇಲೆ ನಿಂತಿದ್ದೆ ನಂತರ ಅವಳನ್ನು ನಾನೇ ಬೆಟ್ಟದ ಮೇಲಿನಿಂದ ಕೆಳಗಡೆ ತಳ್ಳಿದ್ದು ಎಂದು ಸತ್ಯ ಒಪ್ಪಿಕೊಳ್ಳುತ್ತಾಳೆ. ಅದಾದ ನಂತರದಲ್ಲಿ ಲಾಯರ್ ಇನ್ನೂ ಒಂದು ಪ್ರಶ್ನೆ ಕೇಳುತ್ತಾರೆ. ಮತ್ತೆ ಲಕ್ಷ್ಮೀನಾ ಏನ್ ಮಾಡಿದ್ರಿ ಎಂದು. ಆದರೆ ಕಾವೇರಿ ಆ ಪ್ರಶ್ನೆಗೆ ಉತ್ತರ ನೀಡೋದಿಲ್ಲ. ತಾನು ಮಾಡಿದ ಪಾಪವನ್ನು ನೆನಪು ಮಾಡಿಕೊಳ್ಳುತ್ತಾಳೆ.
ಲಕ್ಷ್ಮೀಯನ್ನು ನಾಟಕ ಮಾಡುತ್ತಿದ್ದ ದಿನ ಬೆಂಕಿಯಲ್ಲಿ ಸುಟ್ಟು ಹೋಗುವ ರೀತಿ ಕಾವೇರಿನೆ ಪ್ಲ್ಯಾನ್ ಮಾಡಿರುತ್ತಾಳೆ. ಆದರೆ ಅದನ್ನು ಹಂಚಿಕೊಂಡಿರುವುದಿಲ್ಲ. ಲಾಯರ್‌ಗೆ ತನ್ನ ಮೇಲೆ ಅನುಮಾನ ಇದೆ ಎನ್ನುವ ಸಂಗತಿ ಈಗ ಕಾವೇರಿಗೆ ಗೊತ್ತಾಗಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.