Lakshmi Baramma Serial: ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾನೆ ವೈಷ್ಣವ್; ಲಕ್ಷ್ಮೀ ಅಥವಾ ಕಾವೇರಿ ಆಯ್ಕೆಯಾಗುವ ಹೆಸರೊಂದೇ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತನ್ನ ಬದುಕಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವ ಯೋಚನೆ ಮಾಡುತ್ತಿದ್ದಾನೆ. ಲಕ್ಷ್ಮೀ ಅಥವಾ ಕಾವೇರಿ ಯಾರ ಪರ ನಿಲ್ಲುವುದು ಎಂಬ ಪ್ರಶ್ನೆ ಅವನನ್ನು ಕಾಡುತ್ತಿದೆ.

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಇಷ್ಟು ದಿನ ಸುಮ್ಮನೆ ಇದ್ದು ಈಗ ಎಲ್ಲ ಮೀರಿ ಹೋದ ನಂತರ ಯಾವುದು ತಪ್ಪು? ಯಾವುದು ಸರಿ? ಎಂದು ಪ್ರಶ್ನೆ ಮಾಡಿಕೊಳ್ಳುತ್ತಾ ಅದಕ್ಕೆ ಉತ್ತರ ಕಂಡುಕೊಳ್ಳುತ್ತಿದ್ದಾನೆ. ಕಾವೇರಿ ಅಥವಾ ಲಕ್ಷ್ಮೀ ಇಬ್ಬರಲ್ಲಿ ತಾನು ಯಾರನ್ನು ನಂಬಬೇಕು ಎಂದು ಅವನಿಗೆ ಅರ್ಥ ಆಗುತ್ತಿಲ್ಲ. ಕಾವೇರಿಯಂತು ತನ್ನ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದಾಚೆ ಹಾಕಿದ್ದಾಳೆ. ಅವಳು ಮಾಡಿದ ಕೆಲಸ ನೋಡಿ ಸುಪ್ರಿತಾ ಹಾಗೂ ಮನೆಯಲ್ಲಿರುವ ಎಲ್ಲರಿಗೂ ಬೇಸರ ಆಗಿದೆ. ವೈಷ್ಣವ್ ಮಾತ್ರ ಕಾವೇರಿ ಹೇಳಿದ್ದೆಲ್ಲದಕ್ಕೂ ಹೂ ಹಾಕುತ್ತಾ ಬದುಕುತ್ತಿದ್ದಾನೆ. ಈಗ ಅವನಿಗೂ ತನ್ನ ನಿರ್ಧಾರ ಸರಿಯೇ ಅಥವಾ ತಪ್ಪೇ? ಎಂದು ಆಲೋಚನೆ ಮಾಡುವ ದಿನ ಎದುರಾಗಿದೆ.
ಲಕ್ಷ್ಮೀ ಅಥವಾ ಕಾವೇರಿ ಆಯ್ಕೆಯಾಗುವ ಹೆಸರೊಂದೇ
ಇಷ್ಟು ದಿನ ಏನೆಲ್ಲ ಆಯ್ತು ಎನ್ನುವುದನ್ನು ವಿಚಾರ ಮಾಡುತ್ತಾ ಕುಳಿತಿದ್ದಾನೆ. ಒಂದೆಡೆ ಅಮ್ಮ, ಇನ್ನೊಂದೆಡೆ ಹೆಂಡತಿ ಇಬ್ಬರೂ ಅವನಿಗೆ ಅವನಿಗೆ ಬೇಕು. ಆದರೆ, ಈಗ ಆಯ್ಕೆ ಹಾಗಿಲ್ಲ. ಅಮ್ಮ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರನ್ನೇ ಆಯ್ಕೆ ಮಾಡಬೇಕಿದೆ. ಕಾವೇರಿ ಹೇಳಿದ ಎಲ್ಲ ಅಂಶಗಳು ವೈಷ್ಣವ್‌ಗೆ ಸರಿ ಎನಿಸುತ್ತಿಲ್ಲ. ಅಮ್ಮ ಮಾಡಿದ ಎಷ್ಟೋ ವಿಷಯ ತಪ್ಪಿದೆ ಎಂಬುದರ ಅರಿವು ಅವನಿಗಾಗಿದೆ. ಆದರೆ ಲಕ್ಷ್ಮೀ ತಪ್ಪು ಮಾಡಿದ್ದಾಳಾ? ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ ಅವಳು ಇವನಿಗೆ ಸಹಕರಿಸಿದ ವಿಚಾರ ಮಾತ್ರ ನೆನಪಾಗುತ್ತಿದೆ ಹೊರತಾಗಿ ಬೇರಿನ್ನೇನೂ ಇಲ್ಲ. ಆ ಕಾರಣಕ್ಕಾಗಿ ಲಕ್ಷ್ಮೀಯೇ ಸರಿ ಎಂದು ಅಂದುಕೊಳ್ಳುತ್ತಿದ್ದಾನೆ.
ಹೇಗಿದೆ ವೀಕ್ಷಕರ ಅಭಿಪ್ರಾಯ
ಪೆದ್ದಗುಂಡ ನೀನು ಎಷ್ಟೇ ಮದುವೆಯಾದರೂ, ಹೆಂಡತಿ ಜೊತೆ ಸೇರೋಕೆ ನಿನ್ನ ಅಮ್ಮ ಬಿಡೋದಿಲ್ಲ.ಅಮ್ಮನ ಮಡಿಲಲ್ಲೇ ಮಲಗು. ಆಜನ್ಮ ಬ್ರಹ್ಮಚಾರಿಯಾಗಿರು ಎಂದು ಮಂಗಲಾ ನಾಯ್ಕ್ ಕಾಮೆಂಟ್ ಮಾಡಿದ್ದಾರೆ.
ಮೂರ್ಖ ವೈಷ್ಣವ್, ಒಂದು ಅಸ್ತಿತ್ವ ಇಲ್ಲದ ಪಾತ್ರ. ಅಮ್ಮನ ಮೋಸ, ವಂಚನೆಗೆ ಸದಾ ಬಲಿಯಾಗುತ್ತಿರುವ ಒಬ್ಬ ಮೂರ್ಖ ಎನ್ನುವುದಕ್ಕಿಂತ ಶತ ಮೂರ್ಖ ಎಂಬುದು ವೈಷ್ಣವ್‌ಗೆ ಸಲ್ಲುವ ಹೆಸರು ಎಂದು ಅಶೋಕ್ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ವೀಕ್ಷಕರು ಬಿಡುಗಡೆಯಾದ ಪ್ರೋಮೋಗೆ ಕಾಮೆಂಟ್ ಮಾಡುತ್ತಿದ್ದಾರೆ. ವೈಷ್ಣವ್ ಪಾತ್ರದ ಮೇಲೆ ಎಲ್ಲರಿಗೂ ಅಸಮಾಧಾನ ಇರುವುದು ಎದ್ದು ತೋರುತ್ತಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಕೀರ್ತಿ ಎಂಬ ಪಾತ್ರ ಕೂಡ ಈ ಧಾರಾವಾಹಿಯಲ್ಲಿ ಮಹತ್ವ ಪಡೆದಿದೆ. ಲಕ್ಷ್ಮೀ ಹಾಗೂ ವೈಷ್ಣವ್ ದಾಂಪತ್ಯದ ಬಗ್ಗೆ ಈ ಧಾರಾವಾಹಿ ಕಥೆ ಇದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
