Lakshmi Baramma Serial: ಕೀರ್ತಿಯನ್ನು ಕಿಡ್ನಾಪ್ ಮಾಡಿದ್ದು ನಾವೇ ಎಂದು ಒಪ್ಪಿಕೊಂಡ ಕಾವೇರಿ ಪರ ಲಾಯರ್; ಇಲ್ಲಿದೆ ಆಶ್ಚರ್ಯಕರ ತಿರುವು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕೀರ್ತಿಯನ್ನು ಕಿಡ್ನಾಪ್ ಮಾಡಿದ್ದು ನಾವೇ ಎಂದು ಒಪ್ಪಿಕೊಂಡ ಕಾವೇರಿ ಪರ ಲಾಯರ್; ಇಲ್ಲಿದೆ ಆಶ್ಚರ್ಯಕರ ತಿರುವು

Lakshmi Baramma Serial: ಕೀರ್ತಿಯನ್ನು ಕಿಡ್ನಾಪ್ ಮಾಡಿದ್ದು ನಾವೇ ಎಂದು ಒಪ್ಪಿಕೊಂಡ ಕಾವೇರಿ ಪರ ಲಾಯರ್; ಇಲ್ಲಿದೆ ಆಶ್ಚರ್ಯಕರ ತಿರುವು

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲುಪಾಲಾಗುತ್ತಾಳಾ? ಅಥವಾ ಲಕ್ಷ್ಮೀಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಇಂದಿನ ಸಂಚಿಕೆಯಲ್ಲಿ ಏನಾಗಿದೆ ಗಮನಿಸಿ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (Colors Kannada)

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ಕಾವೇರಿ ಪ್ರಕರಣ ನ್ಯಾಯಾಲಯದಲ್ಲಿ ಚರ್ಚೆಯಾಗುತ್ತಾ ಇರುತ್ತದೆ. ಆದರೆ ಲಕ್ಷ್ಮೀಯದ್ದೇ ತಪ್ಪು ಎಂದು ಕಾವೇರಿ ಪರ ಲಾಯರ್ ಎಲ್ಲ ಸಾಕ್ಷಿಗಳನ್ನು ಒದಗಿಸಿ ಇನ್ನೇನು ಲಕ್ಷ್ಮೀಯೇ ಜೈಲು ಸೇರಬೇಕಾಗಿಬರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾ ಇರುತ್ತಾರೆ. ಆದರೆ ಅಷ್ಟರಲ್ಲಿ ಲಕ್ಷ್ಮೀ ಪರ ವಕೀಲ ತನ್ನ ವಕಾಲತ್ತು ಮಂಡಿಸುತ್ತಾರೆ. ಅವರು ಹೇಳುವ ಪ್ರಕಾರ ಕೀರ್ತಿಯನ್ನು ಕಿಡ್ನಾಪ್ ಮಾಡಲು ಅವರೆಲ್ಲರೂ ಸೇರಿ ಪ್ಲಾನ್ ಮಾಡಿರುತ್ತಾರೆ. ಬೇಕು ಎಂದೇ ಉಪಾಯ ಮಾಡಿ ಕೀರ್ತಿಯನ್ನು ಅವರು ತಮ್ಮ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿರುತ್ತಾರೆ.

ಕಾವೇರಿ ಪರ ವಕೀಲೆ ವಾದ

ಕಾವೇರಿ ಪರ ವಕೀಲರೆ ಅಂದು ಇಡೀ ಹೋಟಲ್ ಬುಕ್ ಮಾಡಿರುತ್ತಾರೆ ಎಂಬ ಸತ್ಯವನ್ನು ಹಾಗೂ ಅದರ ಬಿಲ್‌ ಎರಡನ್ನೂ ಅವರು ಸಾಕ್ಷಿಯಾಗಿ ನೀಡುತ್ತಾರೆ. ಆಗ ವೈಷ್ಣವ್ ಹಾಗೂ ಮನೆಯವರಿಗೆ ಒಂದಷ್ಟು ಸಮಾಧಾನ ಆಗುತ್ತದೆ. ಇದರ ಹಿಂದೆ ಕಾವೇರಿ ತಂಡದ ಕೈವಾಡವೂ ಇದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಮತ್ತೆ ಕಾವೇರಿ ಪರ ವಕೀಲೆ ತನ್ನ ವಾದ ಮಂಡಿಸುತ್ತಾರೆ. ಹೌದು ನಾನೇ ಅಂದು ಹೋಟಲ್ ಬುಕ್ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ. ಆಗ ಕಾವೇರಿ ಮುಖದಲ್ಲಿ ಭಯ ಎದ್ದು ಕಾಣುತ್ತದೆ.

ಆಯ್ತು ಇನ್ನು ನನ್ನ ಕಥೆ ಮುಗೀತು ಎಂದು ಕಾವೇರಿ ಅಂದುಕೊಳ್ಳುವ ಹೊತ್ತಿನಲ್ಲೇ ಪ್ರಕರಣಕ್ಕೆ ಇನ್ನೊಂದು ತಿರುವು ಸಿಗುತ್ತದೆ. ಕಾವೇರಿ ಪರ ಲಾಯರ್ ನಾನು ಬೇಕು ಎಂದೇ ಹೀಗೆ ಮಾಡಿದ್ದೇನೆ ಎಂದು ಎಲ್ಲರೆದುರು ಒಪ್ಪಿಕೊಳ್ಳುತ್ತಾಳೆ. ನಾವು ಹೀಗೆ ಮಾಡದೇ ಇದ್ದರೆ ಸತ್ಯದ ಅರಿವಾಗುತ್ತಿರಲಿಲ್ಲ. ನಾನು ನನ್ನ ಕಕ್ಷೀದಾರರಿಗೆ ನ್ಯಾಯ ಕೊಡಿಸುವ ಸಲುವಾಗಿ ಹೀಗೆ ಮಾಡಿದ್ದೇನೆ ಎಂದು ಹೇಳುತ್ತಾರೆ. ಆಗ ಮತ್ತೆ ಈ ಪ್ರಕರಣ ತಿರುವು ಪಡೆದುಕೊಳ್ಳುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಕಾವೇರಿ ಜೈಲಿಗೆ ಹೋಗಿರೋದು ಲಕ್ಷ್ಮಿ ಕೇಸ್ ಅಲ್ಲಿ. ಅದು ಸಾಬಿತು ಆಗಿದೆ. ಈವಾಗ ಮತ್ತೆ ಕೇಸ್ ಓಪನ್ ಮಾಡಿದ್ದಾರೆ. ಇದರಲ್ಲಿ ಹುರುಳಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

Whats_app_banner