Lakshmi Baramma Serial: ಜೈಲಿನಿಂದಲೇ ಕುತಂತ್ರ ಆರಂಭಿಸಿದ ಕಾವೇರಿ; ಕೀರ್ತಿ ಮಾತು ಕೇಳಿ ಕಂಗಾಲಾದ ಲಕ್ಷ್ಮೀ ಫ್ಯಾಮಿಲಿ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಚೈಲಿನಲ್ಲಿದ್ದುಕೊಂಡೇ ಕುತಂತ್ರ ಮಾಡುತ್ತಿದ್ದಾಳೆ. ತನ್ನ ಮನೆಗೇ ತಾನು ಕೇಡು ಬಯಸುತ್ತಿದ್ದಾಳೆ. ಇತ್ತ ಕೀರ್ತಿ ಮಾತಿನಿಂದ ಎಲ್ಲರಿಗೂ ಗಾಬರಿಯಾಗಿದೆ.

Lakshmi Baramma Serial: ಲಕ್ಷ್ಮೀ ಜೀವನದಲ್ಲಿ ಮತ್ತೆ ಕಷ್ಟದ ದಿನಗಳು ಆರಂಭ ಆಗಿದೆ. ಕೀರ್ತಿ ಸಿಕ್ಕಾಯ್ತು, ಇನ್ನು ಮುಂದಾದ್ರೂ ಎಲ್ಲ ಒಳ್ಳೆಯದಾಗುತ್ತದೆ ಎಂದು ಅಂದುಕೊಂಡಿದ್ದೇ ಬಂತು ಹೊರತಾಗಿ ಇನ್ಯಾವ ಬದಲಾವಣೆ ಕೂಡ ಆಗಿಲ್ಲ. ಕೀರ್ತಿ ಮಲಗಿರುತ್ತಾಳೆ. ಮಲಗಿದ್ದಲ್ಲೇ ಸುಬ್ಬು ಅಂಕಲ್ ಎಂದು ಹೆಸರನ್ನು ಕನವರಿಸುತ್ತಾಳೆ. ಸುಬ್ಬು ಅಂಕಲ್ ಮುಂದಿನ ಪ್ರಶ್ನೆ ಕೇಳಿ ನಾನು ರೆಡಿ ಆಗ್ಬೇಕು ಎಂದು ಹೇಳುತ್ತಾಳೆ. ಅವಳು ಕನವರಿಸುತ್ತಿರುವುದನ್ನು ಕೇಳಿ ಲಕ್ಷ್ಮೀ ಹಾಗೂ ಕಾರುಣ್ಯ ಎಚ್ಚೆತ್ತುಕೊಳ್ಳುತ್ತಾಳೆ. ಕಾವೇರಿಗೆ ಸುಪ್ರಿತಾ ಮೇಲೆ ತುಂಬಾ ಕೋಪ ಬಂದಿರುತ್ತದೆ. “ನನ್ನ ಮಗಳ ಬಗ್ಗೆ ಸುಪ್ರಿತಾ ಏನೆಲ್ಲ ಹೇಳ್ತಾಳೆ ನೋಡು, ಕೀರ್ತಿಗೆ ಯಾವ ನಾಟಕವೂ ಬೇಕಾಗಿಲ್ಲ, ಅವಳು ಮೊದಲು ಹೀಗಿದ್ದವಳೂ ಅಲ್ಲ” ಎಂದು ಹೇಳುತ್ತಾಳೆ. ಆಗ ಲಕ್ಷ್ಮೀ “ಹೌದು ಆಂಟಿ ನನಗೆ ಎಲ್ಲ ಅರ್ಥ ಆಗುತ್ತೆ. ನಾನು ಯಾವಾಗಲೂ ಕೀರ್ತಿ ಮತ್ತು ನೀವು ಇಬ್ಬರ ಮಾತನ್ನೇ ನಂಬೋದು” ಎಂದು ಹೇಳುತ್ತಾಳೆ. ಆಗ ಕಾರುಣ್ಯಾಗೆ ಸಮಾಧಾನ ಆಗುತ್ತದೆ.
ಸುಪ್ರಿತಾಗೆ ಇನ್ನೂ ಇದೆ ಅನುಮಾನ
ಅಷ್ಟರಲ್ಲಿ ಕೀರ್ತಿ ಏಳುತ್ತಾಳೆ. ಎದ್ದ ತಕ್ಷಣ ಕಾರುಣ್ಯ ಸುಪ್ರಿತಾಳನ್ನು ಕರೆಯುತ್ತಾಳೆ. ಡಾಕ್ಟರ್ ಜೊತೆ ಅವಳು ಒಳಗಡೆ ಬರುತ್ತಾಳೆ. ಬರುವಷ್ಟರಲ್ಲಿ ಸುಪ್ರಿತಾಗೆ ಮತ್ತೆ ಇದೆಲ್ಲವೂ ನಾಟಕ ಎಂದು ಅನಿಸಲು ಆರಂಭ ಆಗುತ್ತದೆ. “ಸುಬ್ಬು ಅಂಕಲ್ ಪ್ರಶ್ನೆ ಕೇಳಿದ್ರು ನನ್ನ ಸಂದರ್ಶನ ಮಾಡಿದ್ರು, ಅದು ಟಿವಿಲಿ ಬರುತ್ತಂತೆ” ಎಂದು ಕೀರ್ತಿ ಹೇಳುತ್ತಾಳೆ. ಆಗ ಜಾಣ್ಮೆಯಿಂದ ಲಕ್ಷ್ಮೀ "ಏನ್ ಕೇಳಿದ್ರು? ನೀನು ಏನಂದೆ ಗೊಂಬೆ?" ಎಂದು ಪ್ರಶ್ನೆ ಮಾಡುತ್ತಾಳೆ. ಆಗ ನಾನು ಎಲ್ಲ ಸತ್ಯ ಹೇಳಿಬಿಟ್ಟೆ ಎನ್ನುತ್ತಾಳೆ. ಆ ಮಾತನ್ನು ಕೇಳಿ ಲಕ್ಷ್ಮೀ ಮನೆಯವರೆಲ್ಲರಿಗೂ ಗಾಬರಿ ಆಗುತ್ತದೆ.
ಜೈಲಿನಿಂದಲೇ ಕಾವೇರಿ ಕುತಂತ್ರ
ಇನ್ನು ಕಾವೇರಿ ಜೈಲಿನಲ್ಲಿ ಕುಳಿತುಕೊಂಡು, ಎಲ್ಲ ಸತ್ಯ ತಿಳಿದುಕೊಂಡು, “ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ?" ಎಂದು ಹಾಡು ಹೇಳುತ್ತಾ ಆನಂದಪಡುತ್ತಿರುತ್ತಾಳೆ. ಅವಳಿಗೆ ತುಂಬಾ ಸಂತೋಷ ಆಗಿರುತ್ತದೆ. ಯಾಕೆಂದರೆ ಚಿಂಗಾರಿ ಮೂಲಕ ಅವಳು ಕೀರ್ತಿ ಬಗ್ಗೆ ಎಲ್ಲ ಸತ್ಯ ತಿಳಿದುಕೊಂಡಿರುತ್ತಾಳೆ. ಆದರೆ ಇತ್ತ ಮನೆಯಲ್ಲಿ ಎಲ್ಲರೂ ಗಾಬರಿಯಿಂದ ಇನ್ನು ಮುಂದಿನ ದಿನದಲ್ಲಿ ಏನು ಮಾಡಬೇಕಾಯ್ತು? ಎಂದು ಯೋಚಿಸುತ್ತಾ ಇರುತ್ತಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
