Lakshmi Baramma Serial: ಲಕ್ಷ್ಮೀ ವಿರುದ್ಧ ಹೊಸ ಸಂಚು ರೂಪಿಸಿದ ಕಾವೇರಿ; ಜೈಲಿನಿಂದ ಹೊರ ಬರಲು ಆಗಿದೆ ಎಲ್ಲ ತಯಾರಿ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತಾನು ಜೈಲಿನಿಂದ ಹೇಗೆ ಹೊರಗಡೆ ಬರಬೇಕು ಎಂದು ಆಲೋಚಿಸುತ್ತಾ ಹೊಸ ಉಪಾಯ ಮಾಡಿದ್ದಾಳೆ. ಈಗ ಲಕ್ಷ್ಮೀ ಮತ್ತು ಕಾವೇರಿ ಒಂದೆಡೆ ಎದುರಾಗಿ ಸಾಕಷ್ಟು ವಿಚಾರ ಮಾತನಾಡಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತಾನು ಹೇಗಾದರೂ ಮಾಡಿ ಜೈಲಿನಿಂದ ಹೊರ ಬರಬೇಕು ಎಂದು ಸಂಚು ರೂಪಿಸಿದ್ದಾಳೆ. ಆದರೆ ಆ ಸಂಚು ಏನು ಎಂಬುದು ಲಕ್ಷ್ಮೀ ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಕೀರ್ತಿಯ ಅಸಹಾಯಕತೆಯನ್ನೇ ತನ್ನ ಸಂಚಾಗಿಸಿಕೊಂಡು ಏನಾದರೂ ಮಾಡಬೇಕು ಎಂದು ಕಾವೇರಿ ಅಂದುಕೊಂಡಿದ್ದಾಳೆ ಎನ್ನುವ ಸತ್ಯ ಗೊತ್ತಾದರೆ ಲಕ್ಷ್ಮೀ ಕೂಡ ಉಪಾಯ ಮಾಡಬಹುದಿತ್ತು. ಆದರೆ ಅವಳಿಗೆ ಈ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ. ಹೀಗಿರುವಾಗ ಮುಂದೇನಾಗಿದೆ ಗಮನಿಸಿ.
ಕೋರ್ಟನಲ್ಲಿ ಕಾವೇರಿ ಕೇಸ್ ವಿಚಾರಣೆ ಇರುತ್ತದೆ. ಅದಕ್ಕಾಗಿ ಲಕ್ಷ್ಮೀ ಕೂಡ ಬಂದಿರುತ್ತಾಳೆ. ಆಗ ಕಾವೇರಿ ಅವಳನ್ನು ತಡೆದು ಮಾತಾಡಿಸಿದ್ದಾಳೆ. ಲಕ್ಷ್ಮೀ ನೀನು ತಡಮಾಡಿ ಬರಬಾರದು ತಡ ಮಾಡಿ ಬಂದರೆ ನನಗೇ ಸಮಸ್ಯೆ ಆಗೋದು ಎನ್ನುವ ರೀತಿಯಲ್ಲಿ ಮಾತಾಡಿದ್ದಾಳೆ. ಆಗ ಲಕ್ಷ್ಮೀಗೆ ಒಂದಷ್ಟು ಅನುಮಾನ ಆರಂಭವಾಗಿದೆ. ಕಾವೇರಿ ಏನಾದರೂ ಹೊಸ ಸಂಚು ರೂಪಿಸಿದ್ದಾಳಾ? ಎಂದು ಅವಳು ತನ್ನಷ್ಟಕ್ಕೆ ತಾನೇ ಅಂದುಕೊಳ್ಳುತ್ತಾಳೆ. ಕಾವೇರಿ ತಾನು ಜೈಲಿನಿಂದ ಹೊರ ಬಂದೇ ಬರುತ್ತೇನೆ ಎಂದು ತುಂಬಾ ಆತ್ಮವಿಶ್ವಾಸದಿಂದ ಮಾತಾಡಿರುವುದನ್ನು ನೋಡಿ ಅವಳಿಗೆ ಅನುಮಾನ ಇನ್ನಷ್ಟು ಹೆಚ್ಚಾಗಿದೆ.
ನಂತರ ಅಲ್ಲಿ ಯಾರೋ ಒಂದು ವಸ್ತುವನ್ನು ಲಕ್ಷ್ಮೀ ಇರುವ ಕಡೆ ಎಸೆಯುತ್ತಾರೆ. ಆದರೆ ಕಾವೇರಿ ಆ ವಸ್ತು ಲಕ್ಷ್ಮೀಗೆ ತಾಗದ ಹಾಗೇ ಅವಳನ್ನು ತನ್ನೆಡೆಗೆ ಸೆಳೆದುಕೊಂಡು ರಕ್ಷಣೆ ಮಾಡುತ್ತಾಳೆ. ಅದನ್ನು ನೋಡಿ ಲಕ್ಷ್ಮೀಗೆ ಆಶ್ಚರ್ಯ ಆಗುತ್ತದೆ. ಆಗ ಕಾವೇರಿ ಹೇಳುತ್ತಾಳೆ “ನಾನು ನಿನ್ನ ರಕ್ಷಣೆ ಮಾಡಿದೆ ಎಂದು ಅಂದುಕೊಳ್ಳಬೇಡ, ನನ್ನ ಬೇಟೆಯನ್ನು ಬೇರೆ ಯಾರೂ ಮಾಡಬಾರದು, ನಾನು ಮಾತ್ರ ನಿನಗೆ ನೋವು ಮಾಡಬೇಕು.. ಅದಕ್ಕಾಗಿ ನಿನ್ನ ರಕ್ಷಣೆ ಮಾಡಿದ್ದೇನೆ” ಎನ್ನುತ್ತಾಳೆ. ಅದನ್ನು ಕೇಳಿ ಲಕ್ಷ್ಮೀಗೆ ಇನ್ನಷ್ಟು ಆಶ್ಚರ್ಯ ಆಗುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
ಕಾವೇರಿ ಜೈಲಿಗೆ ಹೋಗಿರೋದು ಲಕ್ಷ್ಮಿ ಕೇಸ್ ಅಲ್ಲಿ. ಅದು ಸಾಬಿತು ಆಗಿದೆ. ಈವಾಗ ಮತ್ತೆ ಕೇಸ್ ಓಪನ್ ಮಾಡಿದ್ದಾರೆ. ಇದರಲ್ಲಿ ಹುರುಳಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
