Lakshmi Baramma: ಜೂಜು ಮಲ್ಲಿಗೆ, ಜಾಜಿಯ ಸಂಪಿಗೆ ಎಂದು ಲಾಲಿ ಹಾಡಿ ಲಕ್ಷ್ಮೀಯನ್ನು ಮಲಗಿಸಿದ ಕೀರ್ತಿ; ಇವರದು ಅಕ್ಕ, ತಂಗಿಯರ ಪ್ರೀತಿ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಷ್ಟದಲ್ಲಿದ್ದಾಳೆ. ಕೀರ್ತಿ ತನಗೆ ಏನೂ ಅರ್ಥ ಆಗದಿದ್ದರೂ, ಲಕ್ಷ್ಮೀಗೆ ಸಮಾಧಾನ ಮಾಡುತ್ತಿದ್ದಾಳೆ.

ಕೀರ್ತಿ ಮತ್ತು ಲಕ್ಷ್ಮೀ ಒಂದು ಕಾಲದಲ್ಲಿ ಪರಮ ವೈರಿಗಳಾಗಿದ್ದವರು, ಆದರೆ ಈಗ ಒಬ್ಬರಿಗೆ ಇನ್ನೊಬ್ಬರ ಆಸರೆಯೇಬೇಕು. ಬದುಕು ಹೇಗೆಲ್ಲ ಬದಲಾಗುತ್ತದೆ ಎಂದು ಲಕ್ಷ್ಮೀ ಯೋಚಿಸುತ್ತಿದ್ದಾಳೆ. ಸಾಕಷ್ಟು ಏರುಪೇರುಗಳನ್ನು ಕಂಡು ಈಗ ಲಕ್ಷ್ಮೀ ತನ್ನ ಮನೆಯನ್ನು ಬಿಟ್ಟು ಕೀರ್ತಿ ಇದ್ದಲ್ಲಿಗೆ ಬಂದಿದ್ದಾಳೆ. ವೈಷ್ಣವ್ ಕೂಡ ಲಕ್ಷ್ಮೀ ಪರ ನಿಲ್ಲಲಿಲ್ಲ. ಇಂತಹ ಸಂದರ್ಭದಲ್ಲಿ ಜತೆಯಾಗಿದ್ದು ಕೀರ್ತಿ ಮಾತ್ರ. ಲಕ್ಷ್ಮೀ ನೋವಿನಿಂದ ತಾನು ಊಟ ಮಾಡುವುದಿಲ್ಲ ಎಂದು ಹಟ ಮಾಡುತ್ತಾ ಇರುತ್ತಾಳೆ. ಆಗ ಕೀರ್ತಿ ತಾನೇ ಹೇಗಾದರೂ ಮಾಡಿ ಇವಳಿಗೆ ಊಟ ಮಾಡಿಸಬೇಕು ಎಂದು ಅಂದುಕೊಳ್ಳುತ್ತಾಳೆ. ತನಗೆ ತಿಳಿದ ಮಟ್ಟಿಗೆ ಸಮಾಧಾನ ಮಾಡುತ್ತಾಳೆ.
ಆದರೆ ಲಕ್ಷ್ಮೀ ಮಾತ್ರ ಕೀರ್ತಿಯ ಯಾವ ಮಾತಿಗೂ ಸಮಾಧಾನ ಆದ ರೀತಿ ಕಾಣುವುದಿಲ್ಲ. ನಂತರ ಕೀರ್ತಿಗೂ ಲಕ್ಷ್ಮೀ ಪರಿಸ್ಥಿತಿ ನೋಡಿ ಬೇಜಾರಾಗುತ್ತದೆ. ಕೀರ್ತಿಯನ್ನು ನೋಡಿ ಲಕ್ಷ್ಮೀ ಇನ್ನಷ್ಟು ಸಂಕಟಪಟ್ಟುಕೊಳ್ಳುತ್ತಾಳೆ. “ಒಂದು ದಿನ ನಾನು ನೀನು ಈ ರೀತಿ ಆಗ್ತೀವಿ, ಕೊನೆಗೆ ನನಗೆ ನಿನ್ನ ಅವಶ್ಯಕತೆಯೇ ಬೀಳುತ್ತದೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ” ಎಂದು ಲಕ್ಷ್ಮೀ ಹೇಳುತ್ತಾಳೆ.
ಲಕ್ಷ್ಮೀಗೆ ಲಾಲಿ ಹಾಡಿದ ಕೀರ್ತಿ
ಏನು ಸಮಾಧಾನ ಮಾಡಿದರೂ ಲಕ್ಷ್ಮೀ ಮಾತ್ರ ಊಟ ಮಾಡಲಿಲ್ಲ. ಆಗ ಕೀರ್ತಿ ಇನ್ನೊಂದು ಉಪಾಯ ಮಾಡುತ್ತಾಳೆ. "ನೀನು ನನ್ನ ಕಾಲಮೇಲೆ ಮಲಗು, ನಾನು ನಿನಗೆ ಲಾಲಿ ಹಾಡ್ತೀನಿ" ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಲಕ್ಷ್ಮೀ ಇನ್ನಷ್ಟು ಭಾವುಕಳಾಗುತ್ತಾಳೆ. ಅಂದು ಗೊಂಬೆ ಆಡಿಸುವವನು ಕೂಡ ಇದೇ ಮಾತು ಹೇಳಿರ್ತಾನೆ. ನೀವಿಬ್ಬರು ಒಡಹುಟ್ಟಿದವರಲ್ಲದೇ ಇರಬಹುದು. ಆದರೆ ಒಬ್ಬರು ಸೋತಾಗ ಇನ್ನೊಬ್ಬರ ಸಾಂತ್ವನವೇ ಸಹಾಯ ಮಾಡುತ್ತದೆ ಎಂದು.
ಹೇಗಿದೆ ಜನಾಭಿಪ್ರಾಯ
ಆಗಾಗ ಧಾರಾವಾಹಿಯಲ್ಲಿ ಬದಲಾವಣೆ ಆದಂತೆ, ಜನರ ಅಭಿಪ್ರಾಯಗಳೂ ಬದಲಾಗುತ್ತವೆ. ಈ ಪ್ರೋಮೋ ನೋಡಿದ ವೀಕ್ಷಕರು ಭಾವುಕರಾಗಿದ್ದಾರೆ. ಲಕ್ಷ್ಮೀ ಹಾಗೂ ಕೀರ್ತಿಯನ್ನು ನೋಡಿ ಅಳು ಬಂತು ಎಂದೆಲ್ಲ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರ ಬಾಂಧವ್ಯ ವೀಕ್ಷಕರಿಗೆ ಹಿಡಿಸಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
