ವೈಷ್ಣವ್‌ಗೆ ಎರಡನೇ ಮದುವೆ ಮಾಡೋದು ಬೇಡ ಎಂದ ಸುಪ್ರಿತಾ; ಮೊದಲು ನಿನ್ನ ಜೀವನ ಸರಿ ಮಾಡ್ಕೋ ಆಮೇಲೆ ನನ್ನ ಪ್ರಶ್ನೆ ಮಾಡು ಎಂದ ಕಾವೇರಿ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಮತ್ತು ಸುಪ್ರಿತಾ ಮಾತಿಗೆ ಮಾತು ಬೆಳೆಸಿದ್ದಾರೆ. ವೈಷ್ಣವ್‌ಗೆ ಎರಡನೇ ಮದುವೆ ಮಾಡೋದು ಬೇಡ ಎಂದ ಸುಪ್ರಿತಾಳ ವಿರುದ್ಧ ಕಾವೇರಿ ಮಾತನಾಡಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಹಾಗೂ ಸುಪ್ರಿತಾ ನಡುವೆ ವಾಗ್ವಾದ ಆಗಿದೆ. ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದಾರೆ. ಕಾವೇರಿ ಈ ಮನೆಗೆ ತಾನೇ ಸರ್ವಾಧಿಕಾರಿ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಆದರೆ ಅವಳ ನಡವಳಿಕೆ ಸುಪ್ರಿತಾಳಿಗೆ ಇಷ್ಟವಾಗುತ್ತಿಲ್ಲ. ತುಂಬಾ ಬೇಸರದಿಂದ ಸುಪ್ರಿತಾ ವೈಷ್ಣವ್‌ಗೆ ಎರಡನೇ ಮದುವೆ ಮಾಡೋದು ಬೇಡ ಎಂದು ಹೇಳುತ್ತಾಳೆ. ಆದರೆ, ನನ್ನ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡಕೂಡದು ಎನ್ನುವ ರೀತಿಯಲ್ಲಿ ಕಾವೇರಿ ಪ್ರತ್ಯುತ್ತರ ನೀಡುತ್ತಾಳೆ. ಇನ್ನು ಸುಪ್ರಿತಾಳ ಅಣ್ಣ ಕೃಷ್ಣನಿಗೂ ಸುಪ್ರಿತಾ ಒಂದು ಮಾತು ಹೇಳುತ್ತಾಳೆ “ಅಣ್ಣಾ ನೀನು ಅತ್ಗೆ ಗಂಡ ಅನ್ನೋದನ್ನ ಮರಿಬೇಡ. ಅವಳಿಗೆ ಈ ಮನೆಯಲ್ಲಿ ಹೇಗೆ ಇರ್ಬೇಕು ಅಂತ ನೀನೇ ಸ್ವಲ್ಪ ಹೇಳು" ಎಂದು ಹೇಳುತ್ತಾಳೆ.
ಕೃಷ್ಣನ ಮಾತಿಗೂ ಬೆಲೆ ಕೊಡದ ಕಾವೇರಿ
ಆಗ ಕೃಷ್ಣ ಕಾವೇರಿ ಮಾತನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಾನೆ. ಆದರೆ, ಕಾವೇರಿ ಕೃಷ್ಣ ಹೇಳಿದ ಮಾತನ್ನು ಕೇಳುವುದಿಲ್ಲ. ಇಲ್ಲ ನಾನು ಈ ನಿರ್ಧಾರ ಬದಲಾಯಿಸೋದಿಲ್ಲ. ಯಾರ ಮಾತನ್ನೂ ಕೇಳಲ್ಲ ಎಂದು ಹೇಳಿಬಿಡುತ್ತಾಳೆ. ಆಗ ಕೃಷ್ಣನಿಗೂ ಇದು ಬೇಸರ ಉಂಟುಮಾಡುತ್ತದೆ. “ನಾನು ಯಾರನ್ನೂ ಕೇಳಿಲ್ಲ ಎಂದು ಸುಪ್ರಿತಾ ಹೇಳಿದ್ದಾಳಲ್ಲ, ಆದ್ರೆ ನಾನು ವೈಷ್ಣವ್‌ನ ಕೇಳಿಯೇ ಈ ನಿರ್ಧಾರಕ್ಕೆ ಬಂದಿರೋದು” ಎಂದು ಕಾವೇರಿ ಹೇಳುತ್ತಾಳೆ.
ಮೊದಲು ನಿನ್ನ ಜೀವನ ಸರಿ ಮಾಡ್ಕೋ ಆಮೇಲೆ ನನ್ನ ಪ್ರಶ್ನೆ ಮಾಡು ಎಂದ ಕಾವೇರಿ
ಆಗ ಅಜ್ಜಿ "ಮದುವೆ ಅಂದ್ರೆ ತಮಾಷೆ ಅನ್ಕೊಂಡಿದೀಯಾ? ಬಟ್ಟೆ ಬದಲಿಸಿದ ಹಾಗೆ ಸಂಗಾತಿಯನ್ನು ಬದಲಿಸೋಕೆ ಆಗೋದಿಲ್ಲ" ಎಂದು ಹೇಳುತ್ತಾರೆ. ಸುಪ್ರಿತಾ “ಕಾವೇರಿ ಎಂದು ಏಕವಚನದಲ್ಲಿ ಮಾತು ಆರಂಭಿಸುತ್ತಾಳೆ” ಆಗ ಕಾವೇರಿ ಕೋಪಗೊಂಡು ಸುಪ್ರಿಯತಾಳ ಮದುವೆ ವಿಚಾರ ತೆಗೆದು “ಮೊದಲು ನಿನ್ನ ಜೀವನ ಸರಿ ಮಾಡ್ಕೋ ಆಮೇಲೆ ನನ್ನ ಪ್ರಶ್ನೆ ಮಾಡು” ಎನ್ನುತ್ತಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
