Lakshmi Baramma Serial: ಕಾವೇರಿಗೆ ಮಾತಲ್ಲೇ ಭಯ ಹುಟ್ಟಿಸಿದ ಸುಪ್ರಿತಾ; ಯಾರು ಏನೇ ಅಂದ್ರು ಕಾವೇರಿ ಮಾತ್ರ ತನ್ನ ಆಟ ನಿಲ್ಲಿಸಲ್ಲ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಏನೇ ನಾಟಕ ಮಾಡಿದ್ರೂ ಅದು ಒಂದಲ್ಲ ಒಂದು ದಿನ ಎಲ್ಲರ ಎದುರು ಬಯಲಾಗುತ್ತದೆ ಎಂದು ಸುಪ್ರಿತಾ ಎಚ್ಚರಿಸುತ್ತಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಾವೇರಿ ತನ್ನ ತಲೆಗೆ ಆದ ಗಾಯಕ್ಕೆ ಔಷಧಿ ಹಚ್ಚಿಕೊಳ್ಳುತ್ತಾ ಕುಳಿತಿದ್ದಳು. ಆಗ ಅವಳಿಗೆ ಹಳೆಯ ಘಟನೆಗಳೆಲ್ಲ ನೆನಪಿಗೆ ಬಂದವು. ಲಕ್ಷ್ಮೀ ಏನೇ ಆದ್ರೂ ನಾನು ಮಾತ್ರ ನಿಮ್ಮ ಕಾಲಿಗೆ ಬೀಳೋದಿಲ್ಲ ಎಂದು ಹೇಳಿದ ಮಾತೇ ಅವಳಿಗೆ ಮತ್ತೆ ಮತ್ತೆ ನೆನಪಾಗುತ್ತಾ ಇತ್ತು. ಇನ್ನು ಕೀರ್ತಿ ಕೂಡ ನೆನಪಾಗುತ್ತಿದ್ದಳು. ಲಕ್ಷ್ಮೀ ಹೇಳಿದ ಮಾತು ಅವಳ ಕಿವಿಯಲ್ಲಿ ಗುನುಗುತ್ತಿತ್ತು “ವೈಷ್ಣವ್ ಅವರಿಗೆ ನನ್ನ ಪ್ರೀತಿಯ ಅರಿವಾದರೆ ಅವರು ಖಂಡಿತ ನನ್ನ ಬಳಿ ಬಂದೇ ಬರ್ತಾರೆ” ಎಂಬ ಮಾತನ್ನು ಲಕ್ಷ್ಮೀ ಆಡಿದ್ದಳು. ಆ ಮಾತನನ್ನು ನೆನೆಸಿಕೊಳ್ಳುತ್ತಾ. “ಪಾಪ ಲಕ್ಷ್ಮೀ ತನ್ನ ಕನಸು ನನಸಾಗೋದಿಲ್ಲ ಎಂದು ಗೊತ್ತಿಲ್ಲದೇ ಇನ್ನಷ್ಟು ಕನಸು ಕಾಣುತ್ತಾ ಇದ್ದಾಳೆ. ವೈಷ್ಣವ್ ಯಾವತ್ತಿದ್ರೂ ನನ್ನ ಮಾತನ್ನೇ ಕೇಳೋದು” ಎಂದು ಅಂದುಕೊಳ್ಳುತ್ತಾ ಇರುತ್ತಾಳೆ.
ಕಾವೇರಿಯದು ಮುಗಿಯದ ಅಹಂಕಾರ
ಅಷ್ಟರಲ್ಲಿ ಅಲ್ಲಿಗೆ ಸುಪ್ರಿತಾ ಬರುತ್ತಾಳೆ. ಬಂದು 'ಅತ್ಗೆ' ಎಂದು ಕೂಗುತ್ತಾಳೆ. ಆ ಧ್ವನಿ ಕೇಳುತ್ತಿದ್ದಂತೆಯೇ ಕಾವೇರಿ ಬೆಚ್ಚಿ ಬೀಳುತ್ತಾಳೆ. ಆದರೆ ತನಗೆ ಭಯ ಆಗಿಲ್ಲ ಎಂದೇ ನಾಟಕ ಮಾಡುತ್ತಾಳೆ. ಸುಪ್ರಿತಾಳಿಗೆ ಕಾವೇರಿ ವರ್ತನೆ ನೋಡಿ ನಗು ಬರುತ್ತದೆ. “ಏನು ನೀನು ಇಲ್ಲಿಗೆ ಬಂದಿರೋದು?” ಎಂದು ಕಾವೇರಿ ಪ್ರಶ್ನೆ ಮಾಡುತ್ತಾಳೆ. ಆಗ ಸುಪ್ರಿತಾ ಮಾತು ಆರಂಭಿಸಿ “ಏನಿಲ್ಲ ಅತ್ಗೆ, ದೇವರು ಇದಾನೆ ಅಂತ ಅನಸ್ತಾ ಇದೆ. ನಿನ್ನೆ ನೀವು ಕೀರ್ತಿ ತಲೆಗೆ ಗಾಯ ಮಾಡಿದ್ರಿ, ಇಂದು ದೇವ್ರೇ ನಿಮ್ಮ ತಲೆಗೆ ಗಾಯ ಆಗಬೇಕು ಎಂದು ನಿರ್ಧಾರ ಮಾಡಿದ್ದಾನೆ” ಎನ್ನುತ್ತಾಳೆ.
ಕಾವೇರಿಗೆ ಮಾತಲ್ಲೇ ಭಯ ಹುಟ್ಟಿಸಿದ ಸುಪ್ರಿತಾ
“ಆಗ ಕಾವೇರಿ ಯಾವ ದೇವರು ಇಲ್ಲ, ಏನೂ ಇಲ್ಲ. ನನ್ನ ಬದುಕನ್ನು ನಾನೇ ರೂಪಿಸಿಕೊಳ್ತೀನಿ. ನನ್ನ ಬದುಕಲ್ಲಿ ಏನಾಗಬೇಕು ಎಂದು ನಿರ್ಧಾರ ಮಾಡುವವಳೂ ನಾನೇ ಆಗಿರ್ತೀನಿ” ಎಂದು ಹೇಳುತ್ತಾಳೆ. ಆಗ ಸುಪ್ರಿತಾ ಕೇಳುತ್ತಾಳೆ “ನಿಮ್ಮ ತಲೆಗೆ ಏಟಾಗ್ಲಿ ಅಂತನೂ ನೀವೇ ಅಂದುಕೊಂಡಿದ್ರಾ?” ಎಂದು ನಗುತ್ತಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
