Lakshmi Baramma Serial: ಯಾರು ಏನೇ ಮಾಡಿದ್ರೂ ವೈಷ್ಣವ್ ಮತ್ತು ಲಕ್ಷ್ಮೀ ಜಗಳ ನಿಲ್ಲಲ್ಲ; ಮತ್ತೊಮ್ಮೆ ಮನೆಯವರೆದುರು ಬೀಸಿದೆ ಬಿರುಗಾಳಿ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರ ನಡುವಿನ ಬಿರುಕು ಇನ್ನಷ್ಟು ದೊಡ್ಡದಾಗಿದೆ. ಮತ್ತೊಮ್ಮೆ ಮನೆಯವರೆದುರು ಜಗಳ ಮಾಡಿಕೊಂಡಿದ್ದಾರೆ.

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಬೇರೆಯಾಗಬೇಕು ಎಂದು ಕಾವೇರಿ ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಆ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಸಿಕ್ಕಿದೆ. ಲಕ್ಷ್ಮೀ ಹಾಗೂ ವೈಷ್ಣವ್ ಈಗ ಬೇರೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂಕಿತ್ ಹಾಗೂ ಕೀರ್ತಿ ಇಬ್ಬರೂ ಉಪಾಯ ಮಾಡಿ ಅವರಿಬ್ಬರನ್ನು ಮತ್ತೆ ಒಂದು ಮಾಡಬೇಕು ಎಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಲಕ್ಷ್ಮೀ ಹಾಗೂ ವೈಷ್ಣವ್ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಕೀರ್ತಿ ವೈಷ್ಣವ್ ಮನೆ ಪ್ರವೇಶ ಮಾಡಿದ್ದಾಳೆ. ಅಷ್ಟೇ ಅಲ್ಲ ಕಾವೇರಿ ಕೋಣೆಗೆ ಹೋಗಿ ಕಾವೇರಿಯನ್ನು ಕೊಲ್ಲುವ ಯತ್ನ ಮಾಡಿದ್ದಾಳೆ. ಇದರಿಂದಾಗಿ ವೈಷ್ಣವ್‌ಗೆ ಕೋಪ ಬಂದಿದೆ.
ಕೀರ್ತಿ ಮಾಡಿದ ಅವಾಂತರಕ್ಕೆ ಲಕ್ಷ್ಮೀಗೆ ಬೈಗುಳ
ಕಾರುಣ್ಯ ಮತ್ತು ಲಕ್ಷ್ಮೀ ಇಬ್ಬರೂ ಮನೆಯ ಹೊರಗಡೆ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಅಲ್ಲಿಗೆ ವೈಷ್ಣವ್ ಬರುತ್ತಾನೆ. ತಾನು ಬರುವಾಗಲೇ ತನ್ನ ಕೈಗಳಿಂದ ಕೀರ್ತಿ ಕೈ ಹಿಡಿದುಕೊಂಡು ಎಳೆದುಕೊಂಡು ಬಂದಿರುತ್ತಾನೆ. ಅವನು ಕೀರ್ತಿಯನ್ನು ಆ ರೀತಿ ಎಳೆದುಕೊಂಡು ಬಂದಿರುವುದನ್ನು ನೋಡಿ ಕಾರುಣ್ಯ ಮತ್ತು ಲಕ್ಷ್ಮೀ ಇಬ್ಬರಿಗೂ ಶಾಕ್ ಆಗುತ್ತದೆ. ಮತ್ತೇನು ಅವಾಂತರ ಆಗಿದೆಯೋ ಎಂದು ಇಬ್ಬರೂ ಗಾಬರಿ ಆಗುತ್ತಾರೆ. ಅಂದುಕೊಂಡಂತೆ ಕೀರ್ತಿಯಿಂದ ವೈಷ್ಣವ್ ಮನೆಯಲ್ಲಿ ತೊಂದರೆಯೂ ಆಗಿರುತ್ತದೆ. ಅದೇ ಕಾರಣಕ್ಕೆ ಕೋಪ ಇನ್ನಷ್ಟು ಹೆಚ್ಚಾಗಿ ವೈಷ್ಣವ್ ಬೈಯ್ಯಲು ಆರಂಭಿಸುತ್ತಾನೆ.
ಕಾವೇರಿಗೆ ಬೇಕಾಗಿದ್ದೇ ಆಗಿದೆ
ಅವನು ಮೊದಲು ಕೀರ್ತಿಗೆ ಬೈಯ್ಯುವ ಬದಲು, "ಇದೆಲ್ಲ ಮಹಾಲಕ್ಷ್ಮೀ ನಿಮ್ಮದೇ ಪ್ಲ್ಯಾನ್" ಎಂದು ದೂರುತ್ತಾನೆ. ಆ ಮಾತುಗಳನ್ನು ಕೇಳಿ ಲಕ್ಷ್ಮೀಗೂ ವಿಪರೀತ ಕೋಪ ಬರುತ್ತದೆ. ಅವಳೂ ವೈಷ್ಣವ್ ವಿರುದ್ಧ ಮಾತಾಡುತ್ತಾಳೆ. ಕಾವೇರಿ ತಾನೂ ಧನಿಗೂಡಿಸುತ್ತಾಳೆ. “ಹೌದು, ಇದೆಲ್ಲವೂ ಸಹ ಲಕ್ಷ್ಮೀದೇ ಉಪಾಯ” ಎಂದು ಹೇಳುತ್ತಾಳೆ. “ನಾನು ಈ ಮೊದಲೇ ನಿಮ್ಮೆಲ್ಲರಿಗೆ ಹೇಳಿದ್ದೆ, ಕೀರ್ತಿಗೆ ತಲೆ ಕೆಟ್ಟಿದೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯೂ ಇಲ್ಲದ ಅವಳು ಹೀಗೆಲ್ಲ ಮಾಡಲು ಸಾಧ್ಯವಿಲ್ಲ. ಇದೆಲ್ಲ ಲಕ್ಷ್ಮೀದೇ ಉಪಾಯ ಎಂದು, ಆದರೆ ನೀವು ಆಗ ನನ್ನನ್ನು ನಂಬಿರಲಿಲ್ಲ” ಎಂದು ಹೇಳುತ್ತಾಳೆ. ಆಗ ಲಕ್ಷ್ಮೀ ಕೋಪಿಸಿಕೊಂಡು ಅವರ ವಿರುದ್ಧ ಮಾತಾಡುತ್ತಾಳೆ. ವಿಧಿ ಮಧ್ಯ ಮಾತಾಡಿ ನೀನೇ ಕೆಟ್ಟವಳು, ಅಮ್ಮ ಒಳ್ಳೆಯವರು ಎನ್ನುತ್ತಾಳೆ"
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
