Lakshmi Baramma Serial: ಎರಡನೇ ಮದುವೆಗೆ ರೆಡಿಯಾದ ವೈಷ್ಣವ್; ಕಾವೇರಿ ಮಾತು ಕೇಳಿ ನಡುಗಿ ಹೋದ ಲಕ್ಷ್ಮೀ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಇಬ್ಬರೂ ದೂರ ಆಗಿದ್ದಾರೆ. ಆದರೆ, ಕಾವೇರಿ ಈಗ ಹೇಳಿದ ಮಾತು ಮಾತ್ರ ಲಕ್ಷ್ಮೀಯನ್ನು ನಡುಗಿಸಿದೆ. ವೈಷ್ಣವ್ ಎರಡನೇ ಮದುವೆ ಆಗ್ತಾನಂತೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಅವನ ಮನೆಯವರೆಲ್ಲರೂ ಒಂದು ನಿರ್ಧಾರಕ್ಕೆ ಬಂದಂತಿದೆ. ಇದು ಕಾವೇರಿಯ ನಿರ್ಣಯ ಎಂಬ ಸತ್ಯ ಗೊತ್ತಾದರೂ ಯಾರೂ ಏನೂ ಮಾತಾಡುತ್ತಿಲ್ಲ. ಲಕ್ಷ್ಮೀ ಬದುಕಿನಲ್ಲಿ ಕಾವೇರಿ ಬಿರುಗಾಳಿಯಂತೆ ಬಂದಿದ್ದಾಳೆ. ವೈಷ್ಣವ್ ಹಾಗೂ ಕಾವೇರಿ ಇಬ್ಬರೂ ಈ ಮೊದಲೇ ಮಾತಾಡಿಕೊಂಡಿದ್ದಾರೆ. ಆದರೆ, ಈಗ ಲಕ್ಷ್ಮೀ ಎದುರು ಆ ಸತ್ಯ ಬಯಲಾಗುತ್ತಿದೆ. ಕಾವೇರಿ ತುಂಬಾ ಖುಷಿಯಿಂದ ಮಾತಾಡುತ್ತಾ ಇದ್ದಾಳೆ. ಲಕ್ಷ್ಮೀ ಭಯ ಹಾಗೂ ದುಃಖದಿಂದ ಕೂಡಿದ್ದಾಳೆ. ಹೀಗಿರುವಾಗ.. ಲಕ್ಷ್ಮೀಯ ಮಾವ ಕೃಷ್ಣ ಹಾಗೂ ಸುಪ್ರಿತಾ ಎಲ್ಲರೂ ತುಂಬಾ ಬೇಸರದಲ್ಲಿದ್ದಾರೆ.
ಎರಡನೇ ಮದುವೆಗೆ ರೆಡಿಯಾದ ವೈಷ್ಣವ್
ಗಂಗಕ್ಕನಿಗೂ ಈ ವಿಚಾರ ಬೇಸರ ತಂದಿದೆ. ಲಕ್ಷ್ಮೀ ಕೆಲ ದಿನಗಳಿಂದ ಕೀರ್ತಿ ಮನೆಯಲ್ಲಿ ಉಳಿದುಕೊಳ್ಳುತ್ತಾ ಇದ್ದಾಳೆ. ಇದೇ ಸಂದರ್ಭದಲ್ಲಿ ವೈಷ್ಣವ್ ಈಗ ತಾನು ಎರಡನೇ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ. ಈ ವಿಚಾರ ತಿಳಿದ ನಂತರ ಲಕ್ಷ್ಮೀ ತುಂಬಾ ಕೋಪದಿಂದ ಕಾವೇರಿಯನ್ನು ಪ್ರಶ್ನೆ ಮಾಡುತ್ತಾಳೆ. “ಯಾಕೆ ನೀವು ನನ್ನ ಗಂಡನಿಗೆ ಮತ್ತೊಂದು ಮದುವೆ ಮಾಡ್ತಾ ಇದ್ದೀರಾ? ಅವರಿಗೆ ಒತ್ತಾಯ ಮಾಡಬೇಡಿ" ಎಂದು ಹೇಳುತ್ತಾಳೆ. ಆದರೆ ಕಾವೇರಿ ಈ ಮದುವೆಗೆ ಸ್ವತಃ ನಿನ್ನ ಗಂಡನೇ ಒಪ್ಪಿಕೊಂಡಿರುವುದು ಎಂದು ಹೇಳುತ್ತಾಳೆ. ಆದರೂ ಅವಳಿಗೆ ನಂಬಿಕೆ ಬರೋದಿಲ್ಲ.
ಕಾವೇರಿ ಮಾತು ಕೇಳಿ ನಡುಗಿ ಹೋದ ಲಕ್ಷ್ಮೀ
ವೈಷ್ಣವ್ ಹತ್ತಿರ ಹೋಗಿ ಇದೆಲ್ಲ ನಿಜಾನಾ? ಎಂದು ಅವಳು ಪ್ರಶ್ನೆ ಮಾಡುತ್ತಾಳೆ. ಆಗ ವೈಷ್ಣವ್ ಹೌದು ಎನ್ನುವ ರೀತಿಯಲ್ಲಿ ತಲೆ ತಗ್ಗಿಸುತ್ತಾನೆ. ಅವನ ಪ್ರತಿಕ್ರಿಯೆ ನೋಡಿ ಲಕ್ಷ್ಮೀ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ವೈಷ್ಣವ್ ಒಂದು ದಿನ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಅವಳು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ಈ ಪರಿಸ್ಥಿತಿ ನೋಡಿ ಅವಳು ಕಂಗಾಲಾಗಿದ್ದಾಳೆ. ಕಾವೇರಿ ಹೇಳಿದ ಮಾತೇ ನಿಜವಾಯ್ತಲ್ಲ ಎಂದು ಅವಳು ಬೇಸರದಲ್ಲಿದ್ಧಾಳೆ.
ಹೇಗಿದೆ ಜನಾಭಿಪ್ರಾಯ?
ಬಿಟ್ಟರೆ ಇನ್ನೂ ಹತ್ತು ಮದುವೆ ಆಗ್ತಾನೆ. ಇಂತ ಪೆದ್ದು ಮಗ ಯಾರಿಗೂ ಬೇಡಪ್ಪ. ದಡ್ಡ ಅಪ್ಪ, ಪೆದ್ದು ಮಗ ಸರಿಯಾಗಿದೆ ಎಡಬಿಡಂಗಿ ಸಂಸಾರ. ಆದಷ್ಟು ಬೇಗ ಸೀರಿಯಲ್ ಮುಗಿಸಿ ಪುಣ್ಯ ಕಟ್ಕೊಳಿ. ಚೆನ್ನಾಗಿರೋ ಸೀರಿಯಲ್ ಹದಗೆಡಿಸೋರನ್ನು ನಿಮ್ಮನ್ನು, ಭಾಗ್ಯಲಕ್ಷ್ಮಿ ಯವರನ್ನು, ರಾಮಾಚಾರಿ ಸೀರಿಯಲ್ನವರನ್ನು ನೋಡಿ ಕಲಿಯಬೇಕು. ಸುಮ್ಮನೆ ಎಳೆದಾಡೋದಲ್ಲ. ಕಥೆಗೆ ಪ್ರಾಮುಖ್ಯತೆ ಕೊಡಿ. ಇಲ್ಲ ಎಲ್ಲರನ್ನೂ ಸಾಯಿಸಿ ಸೀರಿಯಲ್ ಮುಗಿಸಿ ನಮ್ಮ ತಲೆ ತಿನ್ನಬೇಡಿ ಎನ್ನುತ್ತಿದ್ದಾರೆ ಪಲ್ಲವಿ ವಿಶ್ವಕರ್ಮ. ಇನ್ನೂ ಸಾಕಷ್ಟು ವೀಕ್ಷಕರು ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
