Lakshmi Baramma Serial: ಪ್ರೀತಿಯಲ್ಲಿ ಮುಳುಗಿದ ಲಕ್ಷ್ಮೀ, ವೈಷ್ಣವ್; ಅಪಾಯದಲ್ಲಿದ್ದಾಳೆ ಕೀರ್ತಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಪ್ರೀತಿಯಲ್ಲಿ ಮುಳುಗಿದ ಲಕ್ಷ್ಮೀ, ವೈಷ್ಣವ್; ಅಪಾಯದಲ್ಲಿದ್ದಾಳೆ ಕೀರ್ತಿ

Lakshmi Baramma Serial: ಪ್ರೀತಿಯಲ್ಲಿ ಮುಳುಗಿದ ಲಕ್ಷ್ಮೀ, ವೈಷ್ಣವ್; ಅಪಾಯದಲ್ಲಿದ್ದಾಳೆ ಕೀರ್ತಿ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಬದುಕು ಇನ್ನೇನು ಸರಿ ಆಗುತ್ತದೆ ಎನ್ನುವಾಗ ಮತ್ತೆ ತೊಂದರೆ ಎದುರಾಗುತ್ತಿದೆ. ಕೀರ್ತಿ ಅವರ ಜೀವನದಲ್ಲಿ ಸಮಸ್ಯೆಯಾಗಿಯೇ ಉಳಿದಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (Colors Kannada)

Lakshmi Baramma Serial: 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಯಾವಾಗ ಒಂದಾಗಲು ಪ್ರಯತ್ನ ಮಾಡಿದರೂ, ಒಂದಲ್ಲ ಒಂದು ವಿಘ್ನ ಉಂಟಾಗಿ ಮತ್ತೆ ಅವರಿಬ್ಬರು ದೂರವೇ ಉಳಿಯುವ ಸಂದರ್ಭ ಎದುರಾಗುತ್ತಿತ್ತು. ಆದರೆ ಈಗ ಮತ್ತೆ ಅವರಿಬ್ಬರು ಒಂದಾಗುವ ಸಮಯ ಬಂದಿದೆ. ಸುಪ್ರಿತಾ ಯಾವಾಗಲೂ ವೈಷ್ಣವ್ ಹಾಗೂ ಲಕ್ಷ್ಮೀ ಪರವಾಗಿಯೇ ಇದ್ದಾಳೆ. ಈ ಬಾರಿಯೂ ಸುಪ್ರಿತಾ ಲಕ್ಷ್ಮೀ ಹಾಗೂ ವೈಷ್ಣವ್ ಪರವಾಗಿ ನಿಂತಿದ್ದಾಳೆ. ಆದರೆ ಕಾವೇರಿ ಜೈಲಿನಲ್ಲಿ ಇದ್ದುಕೊಂಡೇ ವೈಷ್ಣವ್ ಸಂಸಾರವನ್ನು ಹಾಳು ಮಾಡುತ್ತಿದ್ದಾಳೆ.

ಕಾವೇರಿಯ ಮುಗಿಯದ ಕುತಂತ್ರ

ಮಗ ಸಂತೋಷದಿಂದ ಇರಬೇಕು ಆದರೆ ಸೊಸೆ ತನ್ನ ಮನೊಂದಿಗೆ ಇರಬಾರದು ಎಂಬ ಹುಚ್ಚುತನದಿಂದಲೇ ಅವಳು ಜೈಲು ಸೇರಿದ್ದಾಳೆ. ಕೆಲವರಿಗೆ ಕೆಟ್ಟ ಮೇಲಾದರೂ ಬುದ್ದಿ ಬರುತ್ತದೆ, ಆದರೆ ಕಾವೇರಿಗೆ ಕೆಟ್ಟ ಮೇಲೂ ಬುದ್ದಿ ಬಂದಿಲ್ಲ. ಜೈಲಿನಲ್ಲಿ ಇದ್ದುಕೊಂಡೇ ಚಿಂಗಾರಿಯನ್ನು ಬಳಸಿಕೊಂಡು ಒಂದಲ್ಲೊಂದು ರೀತಿಯಲ್ಲಿ ತೊಂದರೆ ಮಾಡುತ್ತಲೇ ಇದ್ದಾಳೆ. ಕೀರ್ತಿ ಮನೆಯಲ್ಲಿ ಯಾವ ರೀತಿ ಇರುತ್ತಾಳೆ? ಅವಳ ನಡವಳಿಕೆ ಹೇಗಿದೆ? ಎಂಬುದನ್ನೆಲ್ಲ ಕಾವೇರಿ ಚಿಂಗಾರಿ ಮೂಲಕ ತಿಳಿದುಕೊಂಡಿದ್ದಾಳೆ.

ರೌಡಿಗಳನ್ನು ಕಳಿಸಿ ನಂತರ ಅವರಿಂದ ಕೀರ್ತಿಯನ್ನು ಕಿಡ್ನಾಪ್ ಮಾಡಿಸುವ ಉಪಾಯವನ್ನು ಕಾವೇರಿ ಮಾಡಿದ್ದಾಳೆ. ಏನೂ ಅರಿಯದೇ ಕೀರ್ತಿ ಯಾರದೋ ಜತೆ ಬಂದು ತನಗೆ ತಾನೇ ಅಪಾಯ ತಂದುಕೊಂಡಿದ್ದಾಳೆ. ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ರೌಡಿಗಳು ಕೀರ್ತಿಯನ್ನು ಕರೆದುಕೊಂಡು ಬಂದಿದ್ದಾರೆ. ಅವರು ಬಹುಶಃ ಕೆಟ್ಟ ಜನರಿರಬಹುದು ಎಂದು ಅವಳು ಅಂದುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಈಗಾಗಲೇ ಕೀರ್ತಿ ಆ ಕೆಟ್ಟ ಜನರಿಂದ ಸುತ್ತುವರಿದಿದ್ದಳು.

ಈ ಹಿಂದೆ ಗಂಡ, ಹೆಂಡತಿ ಇಬ್ಬರೂ ಕೂಡಿ ಕಟ್ಟಬೇಕಿದ್ದ ಹರಕೆಯನ್ನು ಕೀರ್ತಿ ಮಧ್ಯ ಬಂದು ಅರಿವಿಲ್ಲದೇ ಹಾಳು ಮಾಡಿರುತ್ತಾಳೆ. ಅದರಿಂದ ಕೀರ್ತಿಗೆ ಬೇಸರವಾಗಿ ಎಲ್ಲಾದರೂ ದೂರ ಹೋಗಬೇಕು ಎಂದು ನಿರ್ಧಾರ ಮಾಡಿರುತ್ತಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner