Lakshmi Baramma Serial: ಪ್ರೀತಿಯಿಂದ ಲಕ್ಷ್ಮೀಗಾಗಿ ಮನೆ ಕಟ್ಟಿದ ಕೀರ್ತಿ; ಗೊಂಬೆ ಮಾತಿಗೆ ಲಚ್ಚಿ ಭಾವುಕ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ಕೀರ್ತಿ ಇಬ್ಬರೂ ಸೇರಿ ಮಣ್ಣಿನ ಮನೆ ಕಟ್ಟಿದ್ದಾರೆ. ಆದರೆ ಕೀರ್ತಿ ಮಾತು ಕೇಳಿ ಲಕ್ಷ್ಮೀ ಭಾವುಕಳಾಗಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಪತಿ ವೈಷ್ಣವ್‌ನನ್ನು ಬಿಟ್ಟು ದೂರ ಬಂದಿದ್ದಾಳೆ. ಆದರೆ ಇದೆಲ್ಲವೂ ಕಾವೇರಿಯ ಕುತಂತ್ರ ಆಗಿರುತ್ತದೆ. ಕಾವೇರಿ ತನ್ನ ಮಗ ಹಾಗೂ ಸೊಸೆ ಇಬ್ಬರೂ ದೂರವಾಗಲಿ ಎಂದು ಬಯಸಿರುತ್ತಾಳೆ. ಅದರಂತೆಯೇ ಅವರಿಬ್ಬರೂ ದೂರವಾಗಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಿರುತ್ತಾಳೆ. ಹಾಗಾಗಿ ಇಂದು ಲಕ್ಷ್ಮೀ ಕೀರ್ತಿ ಮನೆಯಲ್ಲಿ ವಾಸ ಮಾಡುತ್ತಿದ್ದಾಳೆ. ಕೀರ್ತಿಗೆ ಹಳೆಯದೆಲ್ಲವೂ ಮರೆತು ಹೋಗಿರುವ ಕಾರಣ ಅವಳು ಚಿಕ್ಕ ಮಕ್ಕಳಂತೆ ವರ್ತನೆ ಮಾಡುತ್ತಿದ್ದಾಳೆ. ಕೀರ್ತಿ ತಾಯಿ ಕಾರುಣ್ಯ ಆಗಲಿ, ನನ್ನ ಮಗಳು ಇಷ್ಟಾದರೂ ಜೀವಂತ ಉಳಿದಿದ್ದಾಳಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದಾಳೆ.
ಲಕ್ಷ್ಮೀಗಾಗಿ ಮಣ್ಣಿನ ಮನೆ ಕಟ್ಟಿದ ಕೀರ್ತಿ
ಹೀಗಿರುವಾಗ ಕೀರ್ತಿ ತನ್ನ ಮನೆಯ ಗಾರ್ಡನ್‌ನಲ್ಲಿ ಮಣ್ಣಿನ ಮನೆಯೊಂದನ್ನು ನಿರ್ಮಾಣ ಮಾಡುತ್ತಾ ಇರುತ್ತಾಳೆ. ಆದರೆ ಎಷ್ಟು ಪ್ರಯತ್ನಿಸಿದರೂ ಆ ಮನೆಗೆ ಮೇಲ್ಚಾವಣಿ ಮಾಡಲು ಅವಳ ಬಳಿ ಸಾಧ್ಯ ಆಗೋದಿಲ್ಲ. ಹೀಗಿರುವಾಗ ಒಬ್ಬಳೇ ಬೇಸರದಿಂದ ಆ ಮನೆಯನ್ನು ಕಟ್ಟಲು ಪ್ರಯತ್ನಿಸುತ್ತಾ ವಿಫಲವಾಗಿರುತ್ತಾಳೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಲಕ್ಷ್ಮೀ ಬರುತ್ತಾಳೆ. ಬಂದು ಕೀರ್ತಿ ಏನು ಮಾಡುತ್ತಿದ್ದಾಳೆ ಎಂದು ನೋಡುತ್ತಾಳೆ. ನೋಡಿದರೆ ಅಲ್ಲಿ ಅವಳು ಮನೆ ಕಟ್ಟುತ್ತಾ ಇರುತ್ತಾಳೆ. ತಾನೂ ಕೀರ್ತಿಗೆ ಸಹಾಯ ಮಾಡುತ್ತಾಳೆ.
ಗೊಂಬೆ ಮಾತಿಗೆ ಲಚ್ಚಿ ಭಾವುಕ
ಕೀರ್ತಿ ಹತ್ತಿರ ಈ ಮನೆಯನ್ನು ಯಾಕೆ ಕಟ್ಟಿದ್ದೀಯಾ? ಎಂದು ಕೇಳಿದಾಗ, ಕೀರ್ತಿ “ಈ ಮನೆ ನಿನಗೆ ಮತ್ತು ವೈಷ್ಣವ್‌ಗೆ. ನೀವಿಬ್ಬರೂ ಈ ಮನೆಯಲ್ಲಿ ಆರಾಮಾಗಿ ಜೀವನ ಮಾಡಿ” ಎಂದು ಹೇಳುತ್ತಾಳೆ. ಅದನ್ನು ಕೇಳಿ ಲಕ್ಷ್ಮೀ ತುಂಬಾ ಭಾವುಕಳಾಗುತ್ತಾಳೆ. ನನಗಾಗಿ ಇವಳು ಯೋಚನೆ ಮಾಡಿದಷ್ಟು ಇನ್ಯಾರೂ ಯೋಚನೆ ಮಾಡುತ್ತಿಲ್ಲವಲ್ಲ ಎಂದು ಲಕ್ಷ್ಮೀಗೆ ಅನಿಸುತ್ತದೆ. “ನಾನು ಸಿನಿಮಾದಲ್ಲಿ ನೋಡಿದಿನಿ ಹೀರೋ ಮತ್ತೆ ಹೀರೋಯಿನ್‌ಗೆ ಮದುವೆ ಆಗುತ್ತೆ, ಆಗ ಅವರನ್ನು ತುಂಬಾ ಪ್ರೀತಿಮಾಡೋರು ಆರತಿ ಮಾಡಿ ಅವರಿಬ್ಬರನ್ನು ಮನೆ ಒಳಗಡೆ ಕರೆದುಕೊಳ್ಳುತ್ತಾರೆ. ಈಗ ನಿನ್ನ ತುಂಬಾ ಪ್ರೀತಿ ಮಾಡೋಳು ನಾನ್ ತಾನೆ? ಹಾಗಾಗಿ ನಾನೇ ಆರತಿ ಮಾಡಿ ನಿಮ್ಮನ್ನು ಒಳಗಡೆ ಕರ್ಕೊತಿನಿ" ಎಂದು ಕೀರ್ತಿ ಹೇಳುತ್ತಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
