Lakshmi Baramma: ಎಲ್ಲ ಚಿಂತೆ ಬಿಟ್ಟು ಎರಡು ದಿನ ಟ್ರಿಪ್‌ ಹೋಗ್ತಿದ್ದಾರೆ ಲಕ್ಷ್ಮೀ, ವೈಷ್ಣವ್‌; ಸೊಸೆಯನ್ನೇ ಕೊಲ್ಲಲು ಕಾವೇರಿ ಪ್ಲ್ಯಾನ್‌
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಎಲ್ಲ ಚಿಂತೆ ಬಿಟ್ಟು ಎರಡು ದಿನ ಟ್ರಿಪ್‌ ಹೋಗ್ತಿದ್ದಾರೆ ಲಕ್ಷ್ಮೀ, ವೈಷ್ಣವ್‌; ಸೊಸೆಯನ್ನೇ ಕೊಲ್ಲಲು ಕಾವೇರಿ ಪ್ಲ್ಯಾನ್‌

Lakshmi Baramma: ಎಲ್ಲ ಚಿಂತೆ ಬಿಟ್ಟು ಎರಡು ದಿನ ಟ್ರಿಪ್‌ ಹೋಗ್ತಿದ್ದಾರೆ ಲಕ್ಷ್ಮೀ, ವೈಷ್ಣವ್‌; ಸೊಸೆಯನ್ನೇ ಕೊಲ್ಲಲು ಕಾವೇರಿ ಪ್ಲ್ಯಾನ್‌

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್‌ ಇಬ್ಬರೂ ಸುತ್ತಾಡಲು ಹೊರಟಿದ್ದಾರೆ. ಆದರೆ ತನ್ನ ಸೊಸೆಯನ್ನೇ ಕೊಲ್ಲಲು ಕಾವೇರಿ ರೆಡಿಯಾಗಿದ್ದಾಳೆ.

ಮನೆಯವರೆಲ್ಲರೂ ಲಕ್ಷ್ಮೀ ಹಾಗೂ ವೈಷ್ಣವ್‌ ಇಬ್ಬರನ್ನೂ ಖುಷಿಯಿಂದ ಬೀಳ್ಕೊಡುತ್ತಿದ್ದಾರೆ
ಮನೆಯವರೆಲ್ಲರೂ ಲಕ್ಷ್ಮೀ ಹಾಗೂ ವೈಷ್ಣವ್‌ ಇಬ್ಬರನ್ನೂ ಖುಷಿಯಿಂದ ಬೀಳ್ಕೊಡುತ್ತಿದ್ದಾರೆ (ಕಲರ್ಸ್‌ ಕನ್ನಡ)

ಲಕ್ಷ್ಮೀ ಹಾಗೂ ವೈಷ್ಣವ್‌ ಈಗ ತಮ್ಮ ಎಲ್ಲಾ ಕಷ್ಟಗಳನ್ನು ಮರೆತು ಒಂದೆರಡು ದಿನ ಹೊರಗಡೆ ಇದ್ದು ಬರೋಣ ಎಂದು ಹೊರಟಿದ್ದಾರೆ. ಆದರೆ ಕಾವೇರಿ ಇದೇ ಟೈಮ್ ಬಳಸಿಕೊಂಡು ಲಕ್ಷ್ಮೀನ ಕೊಲೆ ಮಾಡಲು ಆಲೋಚಿಸಿದ್ದಾಳೆ. “ಮನೆಯಿಂದ ಹೊರಗಡೆ ಹೋದ ಲಕ್ಷ್ಮೀ ವಾಪಸ್ ಮನೆಗೆ ಬರದೇ ಇರುವಂತೆ ನಾನು ಮಾಡುತ್ತೇನೆ” ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾಳೆ. ಇನ್ನು ಮನೆಯವರೆಲ್ಲ ತುಂಬಾ ಖುಷಿಯಿಂದ ಅವರಿಬ್ಬರನ್ನು ಹೊರಗಡೆ ಕಳಿಸೋಕೆ ರೆಡಿಯಾಗಿದ್ದಾರೆ. ಲಕ್ಷ್ಮೀಗೆ ಈ ಬಗ್ಗೆ ಸುಳಿವು ಸಿಕ್ಕಿದೆ. ಯಾರೋ ಅಪರಿಚಿತನೊಬ್ಬ ಆಗಾಗ ಕಾಲ್ ಮಾಡಿ “ನೀವು ರೆಸಾರ್ಟ್‌ಗೆ ಹೋಗಬೇಡಿ, ಅಲ್ಲಿ ನಿಮ್ಮನ್ನು ಕೊಲ್ಲುತ್ತಾರೆ” ಎಂದು ಹೇಳುತ್ತಾ ಇದ್ದಾನೆ.

ಅಪರಿಚಿತನ ಕಾಲ್

ಈ ರೀತಿಯಾಗಿ ಅವಳಿಗೆ ಭಯ ಆಗುತ್ತಿದ್ದರೂ, ಎಲ್ಲರ ಮುಂದೆ ಹೇಳಿಕೊಳ್ಳಲಾಗದೆ ಒಬ್ಬಳೇ ಅನುಭವಿಸುತ್ತಾ ಇದ್ದಾಳೆ. ಇನ್ನು ಸುಪ್ರಿತಾ ಈ ಬಗ್ಗೆ ಮಾತಾಡ್ತಾ “ ನೀವು ತುಂಬಾ ಹುಷಾರಾಗಿ ಹೋಗಿ ಬನ್ನಿ” ಎಂದು ಹೇಳುತ್ತಾಳೆ. ಖಂಡಿತ ಏನೋ ಆಗುತ್ತದೆ ಎನ್ನುವ ರೀತಿಯಲ್ಲಿ ತುಂಬಾ ಮುನ್ನೆಚ್ಚರಿಕೆಯ ಮಾತುಗಳನ್ನು ಆಡುತ್ತಾಳೆ. ಅದನ್ನು ಕೇಳಿ ಕಾವೇರಿಗೆ ತುಂಬಾ ಕೋಪ ಬರುತ್ತದೆ.

ಸುಪ್ರಿತಾಳಿಗೆ ಬೈದ ಕಾವೇರಿ

ಕಾವೇರಿ ಹೇಳುತ್ತಾಳೆ “ಅವರೇನು ಸ್ಕೂಲ್ ಮಕ್ಕಳಾ? ಸ್ವಿಮ್ಮಿಂಗ್ ಪೂಲ್‌ಗೆ ಹೋಗ್ಬೇಡಿ, ನೀರತ್ರ ಹೋಗ್ಬೇಡಿ, ಟೀಚರ್ ಕೈ ಹಿಡ್ಕೊಂಡೇ ಇರಿ ಅಂತ ಹೇಳೋಕೆ. ಏನ್ ಮಾತಾಡ್ತೀಯಾ ನೀನು ಸುಪ್ರಿಯಾ” ಅಂತ ಹೇಳ್ತಾಳೆ.

“ಎಷ್ಟೋ ಜನ ನಮ್ಮವರೇ ಅನ್ಕೊಂಡ್ರು ನಮಗೆ ಆಮೇಲೆ ಕೆಟ್ಟದ್ದನ್ನು ಮಾಡ್ತಾರೆ. ಹಾಗಾಗಿ ಎಚ್ಚರಿಕೆ ಹೇಳಲೇಬೇಕು ಅಲ್ವಾ? ಅತ್ತಿಗೆ” ಅಂತ ಹೇಳುತ್ತಾಳೆ. ಆಗ ಕಾವೇರಿ “ನೀನು ಮಾತಾಡ್ಬೇಡ ನಿನ್ನ ಭಾಷಣ ಬಂದ್ ಮಾಡು” ಎಂದು ಗದರುತ್ತಾಳೆ.ಅದಾದ ನಂತರ ವೈಷ್ಣವ್ ತುಂಬಾ ಖುಷಿಯಲ್ಲಿ ಇರ್ತಾನೆ. ಅಜ್ಜಿ ಹೇಳ್ತಾರೆ "ಮುಂದಿನ ವರ್ಷ ಇಷ್ಟೊತ್ತಿಗೆ ಗೌರಿ ಅಥವಾ ಗಣೇಶ ಆಗಲಿ ಎಂದು ಆಗ ಅವರಿಬ್ಬರಿಗೂ ನಾಚಿಕೆಯಾಗುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner