Lakshmi Baramma: ನೀನೂ ಒಬ್ಬ ತಾಯಿನಾ? ಎಂದು ಪ್ರಶ್ನಿಸಿದ ವೈಷ್ಣವ್; ಬೆಟ್ಟದ ಮಾದಪ್ಪನಿಂದ ಹೊರಬಂತು ಸತ್ಯ
ತಾಯಿ ಮೇಲೆ ಮುನಿಸಿಕೊಂಡ ವೈಷ್ಣವ್: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ವೈಷ್ಣವ್‌ಗೆ ಎಲ್ಲ ಸತ್ಯ ಗೊತ್ತಾಗಿದೆ. ಕಾವೇರಿ ಎಷ್ಟು ಕೆಟ್ಟವಳು ಎಂಬ ಸತ್ಯ ಗೊತ್ತಾಗಿ ಅವನು ಕೋಪಗೊಂಡಿದ್ದಾನೆ. ಪಾಪದ ಕೀರ್ತಿ ಪ್ರಾಣವೇ ಹೋಗಿದೆ.

ಕಾವೇರಿಯ ಹುನ್ನಾರ ಮಗನೆದುರು ಬಯಲಾಗಿದೆ. ಕೀರ್ತಿಯನ್ನು ತಾನೇ ಕೊಂದದ್ದು ಎಂಬುದನ್ನು ಲಕ್ಷ್ಮೀ ಎದುರು ಕಾವೇರಿ ಹೇಳಿದ್ದಾಳೆ. ಆದರೆ ಹಿಂದೆ ತನ್ನ ಮಗ ವೈಷ್ಣವ್ ಇದ್ದಾನೆ ಎಂಬ ಯಾವ ಸುಳಿವೂ ಅವಳಿಗೆ ಇರುವುದಿಲ್ಲ. ಇನ್ನು ಮನೆ ಕೆಲಸದ ಗಂಗಕ್ಕ ಕೂಡ ಇದಕ್ಕೆ ಸಹಾಯ ಮಾಡಿದ್ದಾಳೆ ಎಂಬ ಸತ್ಯ ವೈಷ್ಣವ್‌ಗೂ ತಿಳಿದಿಲ್ಲ. ಕಾವೇರಿ ಮಾಡಿದ ಎಲ್ಲ ಕುತಂತ್ರವನ್ನು ಬಯಲು ಮಾಡಬೇಕು ಎಂದು ಲಕ್ಷ್ಮೀ ಈ ಎಲ್ಲ ಉಪಾಯ ಮಾಡಿದ್ದಾಳೆ. ಕಾವೇರಿ ಕೋಪದಲ್ಲಿ ಎಲ್ಲವನ್ನು ಒಪ್ಪಿಕೊಂಡು ಈಗ ಕಂಗಾಲಾಗಿದ್ದಾಳೆ. ಕೋಪದ ಬರದಲ್ಲಿ ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಸಹ ಅವಳಿಗೆ ತಿಳಿದಿರುವುದಿಲ್ಲ. ಆದರೆ ಅವಳು ಎಲ್ಲ ಸತ್ಯ ಬಾಯ್ಬಿಡುವಾಗ ಹಿಂದೆ ವೈಷ್ಣವ್ ನಿಂತಿರುತ್ತಾನೆ.
ಕಾವೇರಿಗೆ ಬೇರೆ ದಾರಿಯೇ ಇಲ್ಲ
ಕಾವೇರಿ ಮಾತನ್ನು ಕೇಳಿದ ವೈಷ್ಣವ್‌ಗೆ ಶಾಕ್ ಆಗುತ್ತದೆ. ನನ್ನ ತಾಯಿ ಇಷ್ಟೊಂದು ಕೆಟ್ಟವಳಾ? ಎಂಬ ಭಾವನೆ ಅವನಿಗೆ ಬಂದಿದೆ. ಸತ್ಯ ತಿಳಿದ ನಂತರ ತಾನೇನು ಮಾಡಬೇಕು? ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಅವನಿಗೆ ತಿಳಿಯುವುದಿಲ್ಲ. ಆದರೆ ಸತ್ಯಾಂಶ ತಿಳಿದ ನಂತರ ಸುಮ್ಮನಿರಲು ಸಾಧ್ಯವೇ ಇಲ್ಲ. ತಾಯಿಯ ಹತ್ತಿರ ಬಂದು “ಇಷ್ಟೆಲ್ಲಾ ಮಾಡಿದ್ದು ನೀನಾ ಅಮ್ಮ? ಅವಳು ನನಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ ಹುಡುಗಿ. ಆದರೆ ಆ ಕೀರ್ತಿಯನ್ನು ನೀನು ಕೊಂದೇಬಿಟ್ಟೆ. ಅವಳು ಮಾಡಿದ ತಪ್ಪಾದರೂ ಏನು? ಯಾಕೆ ನೀನು ಇಷ್ಟೆಲ್ಲ ಮಾಡಿದೆ?" ಎಂದು ಗಟ್ಟಿಯಾಗಿ ಅಮ್ಮನ ಎರಡೂ ತೋಳುಗಳನ್ನು ಹಿಡಿದು ಪದೇ ಪದೇ ಪ್ರಶ್ನೆ ಮಾಡುತ್ತಾ ಇದ್ದಾನೆ. ಇದಕ್ಕೆ ತಾನೇನು ಉತ್ತರ ಕೊಡಬೇಕೆಂದು ಕಾವೇರಿಗೆ ತೋಚುತ್ತಿಲ್ಲ.
ವೈಷ್ಣವ್‌ಗೀಗ ಎಲ್ಲಾ ಸತ್ಯ ಗೊತ್ತಾಗಿದೆ
ಅವಳಿಗೆ ತಾನು ಈಗ ಏನು ಮಾಡೋದು ಎನ್ನುವುದಕ್ಕಿಂತ ವೈಷ್ಣವ್‌ಗೆ ಸತ್ಯ ಗೊತ್ತಾಯ್ತಲ್ಲ ಎಂಬ ಭಯವೇ ಹೆಚ್ಚಾಗಿ ಕಾಡುತ್ತಿದೆ. ಅವಳು ಇನ್ನೇನೋ ಹೊಸ ಸುಳ್ಳು ಹೇಳಲು ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಈ ಬಾರಿ ವೈಷ್ಣವ್ ಅದನ್ನು ನಂಬುತ್ತಾನೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಇನ್ನು ಬೆಟ್ಟದ ಮಾದಪ್ಪ ಸತ್ಯ ಬಯಲಾಯಿತು ಎಂದು ದೊಡ್ಡದಾಗಿ ಕೂಗುತ್ತಾ ಇದ್ದಾನೆ. ಲಕ್ಷ್ಮೀ “ನನಗೆ ಈ ವಿಷಯ ಮೊದಲೇ ಗೊತ್ತಿತ್ತು” ಎಂದು ಪದೇಪದೇ ಹೇಳುತ್ತಾ ಇದ್ದಾಳೆ. ಆ ಬೆಟ್ಟದಲ್ಲಿ ಇವರ ಧ್ವನಿಗಳೇ ಪ್ರತಿಧ್ವನಿಸುತ್ತಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
