ಅಪ್ಪನಿಗೆ ವಾಚ್‌ ಗಿಫ್ಟ್‌ ನೀಡಿದ ಭಾವನಾ, ಮಾವನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪನಿಗೆ ವಾಚ್‌ ಗಿಫ್ಟ್‌ ನೀಡಿದ ಭಾವನಾ, ಮಾವನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

ಅಪ್ಪನಿಗೆ ವಾಚ್‌ ಗಿಫ್ಟ್‌ ನೀಡಿದ ಭಾವನಾ, ಮಾವನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 12ರ ಎಪಿಸೋಡ್‌ನಲ್ಲಿ ಸಿದ್ದೇಗೌಡ-ಭಾವನಾ ಇಬ್ಬರೂ ಶ್ರೀನಿವಾಸ್‌ಗೆ ಹುಟ್ಟುಹಬ್ಬದ ಶುಭ ಕೋರಲು ಬರುತ್ತಾರೆ. ಭಾವನಾ ಅಪ್ಪನಿಗೆ ವಾಚ್‌ ಗಿಫ್ಟ್‌ ಮಾಡುತ್ತಾಳೆ. ಸಿದ್ದು ಕೂಡಾ ಮಾವನಿಗೆ ಬರ್ತ್‌ಡೇ ಶುಭ ಕೋರುತ್ತಾನೆ.

 ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 12ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 12ರ ಎಪಿಸೋಡ್‌ (PC: Zee Kannada FB)

Lakshmi Nivasa Serial: ಸಿದ್ದೇಗೌಡನೇ ತಾನು ಇಷ್ಟು ದಿನಗಳು ಫೋನಿನಲ್ಲಿ ಮಾತನಾಡುತ್ತಿದ್ದ ಗೌಡ್ರು ಎಂಬ ಸತ್ಯ ಭಾವನಾಗೆ ಗೊತ್ತಾಗುತ್ತದೆ. ಲಕ್ಷ್ಮೀ ಅತ್ತೆ ಮಾತು ಕೇಳಿ ಸಿದ್ದೇಗೌಡ, ಭಾವನಾಗೆ ಸತ್ಯ ಹೇಳುತ್ತಾನೆ. ನನ್ನ ಭಾವನೆಗಳನ್ನು ಕೇಳಲು ಮತ್ತೊಬ್ಬರು ಇದ್ದಾರೆ ಎಂದು ಖುಷಿಯಾಗಿದ್ದೆ, ಆದರೆ ಈಗ ಅದು ಸುಳ್ಳಾಯ್ತು, ಇನ್ನೂ ಎಷ್ಟು ಮೋಸ ಮಾಡಲು ಕಾಯುತ್ತಿದ್ದೀರ ಎಂದು ಭಾವನಾ ಕೇಳುತ್ತಾಳೆ. ನಾನು ನಿಜ ಹೇಳುವುದರಿಂದ ನಿಮಗೆ ಇಷ್ಟೆಲ್ಲಾ ನೋವಾಗುತ್ತದೆ ಎಂದು ಗೊತ್ತಿದ್ದರೆ ಇದನ್ನು ಹೇಳುತ್ತಲೇ ಇರಲಿಲ್ಲ ಎಂದು ಸಿದ್ದು ಕೂಡಾ ಬೇಸರ ವ್ಯಕ್ತಪಡಿಸುತ್ತಾನೆ.

ತಂದೆಯ ಹುಟ್ಟುಹಬ್ಬವನ್ನು ಭಾವನಾಗೆ ನೆನಪಿಸುವ ಸಿದ್ದು

ಭಾವನಾ ಇದೇ ನೋವಿನಲ್ಲಿ ಕಣ್ಣೀರಿಡುತ್ತಾಳೆ. ಬೆಳಗ್ಗೆ ಭಾವನಾ ಎಚ್ಚರವಾಗುತ್ತಿದ್ದಂತೆ ಸಿದ್ದು ಅವಳ ಮುಂದೆ ಬಂದು ನಿಲ್ಲುತ್ತಾನೆ. ನಿಮ್ಮ ಬಳಿ ಏನೋ ಹೇಳಬೇಕೆಂದು ಬಂದೆ ಎಂದು ಸಿದ್ದು ಖುಷಿಯಿಂದ ಹೇಳುತ್ತಾನೆ. ಆದರೆ ಭಾವನಾ, ಸಿದ್ದು ಮಾತುಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಇವತ್ತು ನನ್ನ ಮಾವ, ಅಂದರೆ ನಿಮ್ಮ ತಂದೆ ಹುಟ್ಟುಹಬ್ಬ ಎಂದು ಸಿದ್ದು ಹೇಳುತ್ತಾನೆ. ಅದನ್ನು ಕೇಳಿ ಭಾವನಾ ಖುಷಿಯಾಗುತ್ತಾಳೆ. ಅಪ್ಪನ ಹುಟ್ಟುಹಬ್ಬ ಅಂತ ನಾನು ಮರೆತಿದ್ದೆ, ಅವರಿಗೆ ಏನಾದರೂ ಗಿಫ್ಟ್‌ ತೆಗೆದುಕೊಂಡು ಹೋಗಬೇಕು ಎನ್ನುತ್ತಾಳೆ. ಸಿದ್ದು, ಭಾವನಾ ಇಬ್ಬರೂ ವಾಚ್‌ ಅಂಗಡಿಗೆ ಹೋಗುತ್ತಾರೆ. ಅಲ್ಲಿ ವಾಚ್‌ ಬೆಲೆ ಕೇಳಿ ಅದನ್ನು ಖರೀದಿಸುವುದು ಬೇಡ ಎಂದುಕೊಳ್ಳುತ್ತಾಳೆ. ಆದರೆ ಸಿದ್ದು ದುಡ್ಡಿನ ಬಗ್ಗೆ ಯೋಚನೆ ಮಾಡಬೇಡಿ ಎಂದು ಭಾವನಾಗೆ ಆ ವಾಚ್‌ ಕೊಡಿಸುತ್ತಾನೆ.

ಇತ್ತ ಆದಷ್ಟು ಬೇಗ ಮನೆ ಬಿಟ್ಟು ಹೋಗುವಂತೆ ಸಂತೋಷ್‌, ವೆಂಕಿಗೆ ಎಚ್ಚರಿಕೆ ಕೊಡುತ್ತಾನೆ. ಯಾರು ಎಷ್ಟೇ ಒರಟಾಗಿ ನಡೆದುಕೊಂಡರೂ ವೆಂಕಿ ಮಾತ್ರ ಅವರ ಪರವಾಗಿ ಮಾತನಾಡುವುದನ್ನು ಕಂಡು ಚೆಲ್ವಿ ಗಂಡನ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾಳೆ. ಚೆಲ್ವಿ ಹಾಗೂ ವೆಂಕಿ ಮನೆಯಿಂದ ಹೊರಡುವಷ್ಟರಲ್ಲಿ ಅಲ್ಲಿಗೆ ಸಿದ್ದೇಗೌಡ, ಭಾವನಾ ಬರುತ್ತಾರೆ. ಅಣ್ಣನನ್ನು ಕಂಡು ಭಾವನಾ ಖುಷಿಯಾಗುತ್ತಾಳೆ. ಇಷ್ಟು ಬೇಗ ಎಲ್ಲಿಗೆ ಹೊರಟೆ, ನಿನ್ನನ್ನು ನೋಡಿ ಬಹಳ ದಿನಗಳಾಯ್ತು, ನನ್ನ ಜೊತೆ ಊಟ ಮಾಡಿಕೊಂಡು ಹೋಗು ಎಂದು ಮನವಿ ಮಾಡುತ್ತಾಳೆ. ಸಿದ್ದು ಕೂಡಾ, ವೆಂಕಿ ಅಣ್ಣ ನಿಮ್ಮ ಜೊತೆ ಕೂತು ಊಟ ಮಾಡಿ ತುಂಬಾ ದಿನ ಆಯ್ತು ಇಲ್ಲೇ ಇರಿ ಎನ್ನುತ್ತಾನೆ. ಎಲ್ಲರೂ ವೆಂಕಿ, ಚೆಲ್ವಿ ಬಗ್ಗೆ ಮಾತನಾಡುವಾಗ ನಾನು ಏನೂ ಮಾತನಾಡದಿದ್ದರೆ ಸರಿ ಇರುವುದಿಲ್ಲ ಎಂದುಕೊಂಡ ಸಂತೋಷ್‌, ಎಷ್ಟು ದಿನ ಬೇಕಾದರೂ ಅವನು ಇಲ್ಲಿ ಇರಲಿ, ವೆಂಕಿಗೆ ಇಷ್ಟವಾದ ಅಡುಗೆ ಮಾಡಿ ಬಡಿಸು ಎಂದು ಹೆಂಡತಿ ವೀಣಾಗೆ ಹೇಳುತ್ತಾನೆ. ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಭಾವನಾ ಖುಷಿಯಿಂದ ಊಟ ಮಾಡುತ್ತಾಳೆ. ವೀಣಾ ಅಡುಗೆಯನ್ನು ಸಿದ್ದ ಹೊಗಳುತ್ತಾನೆ.

ಡಾಕ್ಟರ್‌ ಸಲಹೆ ಕೇಳಿ ಕೋಪಗೊಂಡ ಜಯಂತ್‌

ಮತ್ತೊಂದೆಡೆ ಜಯಂತ್‌, ಜಾಹ್ನವಿಗೆ ಅಡುಗೆ ಮಾಡಿ ಊಟ ಮಾಡಿಸುತ್ತಾನೆ. ಅದರೆ ಊಟ ಮಾಡುತ್ತಿದ್ದಂತೆ ಜಾಹ್ನವಿ ವಾಂತಿ ಮಾಡಿಕೊಳ್ಳುತ್ತಾಳೆ. ಗಾಬರಿಯಾಗುವ ಜಯಂತ್‌ ಕೂಡಲೇ ಡಾಕ್ಟರ್‌ಗೆ ಕಾಲ್‌ ಮಾಡುತ್ತಾನೆ. ಪ್ರೆಗ್ನೆನ್ಸಿಯಲ್ಲಿ ಇದೆಲ್ಲಾ ಸಾಮಾನ್ಯ ನೀವು ಯೋಚನೆ ಮಾಡಬೇಡಿ, ನನಗೆ ಸ್ವಲ್ಪ ಕೆಲಸ ಇದೆ ನಂತರ ಮನೆಗೆ ಬರುತ್ತೇನೆ ಎಂದು ಡಾಕ್ಟರ್‌ ಹೇಳುತ್ತಾರೆ. ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಜಾಹ್ನವಿ ಮತ್ತೆ ಪ್ರಜ್ಞೆ ತಪ್ಪುತ್ತಾಳೆ. ಮತ್ತೆ ಜಯಂತ್‌, ಡಾಕ್ಟರ್‌ಗೆ ಕಾಲ್‌ ಮಾಡುತ್ತಾನೆ. ಮನೆಗೆ ಬರುವ ಡಾಕ್ಟರ್‌ ಜಾಹ್ನವಿಯನ್ನು ಚೆಕ್‌ಅಪ್‌ ಮಾಡಿ, ಎಲ್ಲವೂ ಸರಿ ಇದೆ, ಗರ್ಭಿಣಿಯರಿಗೆ ಇದೆಲ್ಲಾ ಕಾಮನ್‌, ನೀವು ಯೋಚನೆ ಮಾಡುವ ಅಗತ್ಯ ಇಲ್ಲ ಎನ್ನುತ್ತಾಳೆ.

ನೀವು ಹೆಂಡತಿಯನ್ನು ಎಷ್ಟು ಕೇರ್‌ ಮಾಡಿದರೂ ಅವಳಿಗೆ ತನ್ನ ಕಷ್ಟ ಸುಖ ಹೇಳಿಕೊಳ್ಳಲು ತವರು ಮನೆಯವರು ಇರಬೇಕು. ಅವರ ಮನೆಯಿಂದ ಯಾರನ್ನಾದರೂ ಕರೆಸಿ ಎಂದು ಡಾಕ್ಟರ್‌, ಜಯಂತ್‌ಗೆ ಸಲಹೆ ನೀಡುತ್ತಾರೆ. ಆದರೆ ಜಯಂತ್‌ಗೆ ಅವರ ಮಾತುಗಳು ಇಷ್ಟವಾಗುವುದಿಲ್ಲ. ಒಂದು ವೇಳೆ ಜಾನು ಮನೆಯವರನ್ನು ಇಲ್ಲಿಗೆ ಕರೆಸಿದರೆ ಅವಳ ಗಮನವೆಲ್ಲಾ ಮನೆಯವರ ಕಡೆ ಹೋಗುತ್ತದೆ, ಆಗ ನಾನು ಒಂಟಿ ಆಗಿಬಿಡುತ್ತೇನೆ ಎಂದುಕೊಳ್ಳುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner