ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿದ್ದೀಯ ಏನೂ ಅನ್ನಿಸ್ತಿಲ್ವಾ, ಭಾವನಾ ಮೇಲೆ ಸಿಡುಕಿದ ರೇಣುಕಾ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿದ್ದೀಯ ಏನೂ ಅನ್ನಿಸ್ತಿಲ್ವಾ, ಭಾವನಾ ಮೇಲೆ ಸಿಡುಕಿದ ರೇಣುಕಾ; ಲಕ್ಷ್ಮೀ ನಿವಾಸ ಧಾರಾವಾಹಿ

ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿದ್ದೀಯ ಏನೂ ಅನ್ನಿಸ್ತಿಲ್ವಾ, ಭಾವನಾ ಮೇಲೆ ಸಿಡುಕಿದ ರೇಣುಕಾ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 13ರ ಎಪಿಸೋಡ್‌ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಮೇಲೆ ರೇಣುಕಾ ಕೋಪಗೊಳ್ಳುತ್ತಾಳೆ. ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿ ಊರೆಲ್ಲಾ ಸುತ್ತುತ್ತಿದ್ದೀಯ, ತಾಳಿ ಬಿಚ್ಚಿಟ್ಟು ಮನೆಗೆ ವಾಪಸ್‌ ಹೋಗು ಎಂದು ಭಾವನಾಗೆ ಹೇಳುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 13ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 13ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಎಲ್ಲರೂ ಶ್ರೀನಿವಾಸ್‌ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ. ಭಾವನಾ ಕೂಡಾ ಅಪ್ಪನಿಗೆ ಗಿಫ್ಟ್‌ ಕೊಟ್ಟು ಮನೆಗೆ ವಾಪಸ್‌ ಹೊರಡುತ್ತಾಳೆ. ಮಗಳು ಕೊಟ್ಟ ಗಿಫ್ಟ್‌ ನೋಡಿ ಶ್ರೀನಿವಾಸ್‌, ಲಕ್ಷ್ಮೀ ಇಬ್ಬರೂ ಖುಷಿಯಾಗುತ್ತಾರೆ. ವೆಂಕಿ ಹಾಗೂ ಚೆಲ್ವಿ ಕೂಡಾ ಮನೆಗೆ ವಾಪಸ್‌ ಹೊರಡುತ್ತಾರೆ.

ಅಪ್ಪನಿಗೆ ವಿಡಿಯೋ ಕಾಲ್‌ ಮಾಡಿ ಬರ್ತ್‌ಡೇ ಶುಭ ಕೋರಿದ ಜಾಹ್ನವಿ

ಎಲ್ಲರೂ ಬಂದು ಹೋದರು ಆದರೆ ನಿಮ್ಮ ಮಗಳು ಜಾಹ್ನವಿಗೆ ನಿನ್ನ ಹುಟ್ಟುಹಬ್ಬ ನೆನಪೇ ಇಲ್ಲ ಎಂದು ಸಂತೋಷ್‌ ಕೊಂಕು ಮಾತನಾಡುತ್ತಾನೆ. ಜಾನು ಈಗ ಇರುವ ಪರಿಸ್ಥಿತಿಯಲ್ಲಿ ಅವಳನ್ನು ನಾವು ವಿಚಾರಿಸಿಕೊಳ್ಳಬೇಕು ಎಂದು ಶ್ರೀನಿವಾಸ್‌, ಲಕ್ಷ್ಮೀ ಹೇಳುತ್ತಾರೆ. ಅಷ್ಟರಲ್ಲಿ ಜಾನು ವಿಡಿಯೋ ಕಾಲ್‌ ಮಾಡಿ ಅಪ್ಪನಿಗೆ ಬರ್ತ್‌ಡೇ ಶುಭ ಕೋರುತ್ತಾಳೆ. ಇಷ್ಟೊತ್ತು ನಿನ್ನ ಅಣ್ಣ ನಿನ್ನ ಬಗ್ಗೆಯೇ ಮಾತನಾಡುತ್ತಿದ್ದ ಎಂದು ಶ್ರೀನಿವಾಸ್‌ ಹೇಳಿದಾಗ, ಆಗಲೇ ಮಾಡಬೇಕೆಂದುಕೊಂಡೆ ಆದರೆ ಬಹಳ ಸುಸ್ತಾಗಿದ್ದೆ ಎನ್ನುತ್ತಾಳೆ. ನೀವೆಲ್ಲಾ ನನ್ನನ್ನು ನೋಡಲು ಬರಲೇ ಇಲ್ಲ ಎಂದು ಜಾನು ಬೇಸರಗೊಳ್ಳುತ್ತಾಳೆ. ನಮಗೂ ನಿನ್ನನ್ನು ನೋಡಲು ಬಹಳ ಆಸೆ ಆದರೆ ಒಂದಲ್ಲಾ ಒಂದು ಕಾರಣದಿಂದ ಯಾರೂ ಬರಲು ಆಗುತ್ತಿಲ್ಲ ಎಂದು ವೀಣಾ ಹೇಳುತ್ತಾಳೆ.

ತಮಗೆ ಹೋಗಲು ಸಾಧ್ಯವಾಗದಿದ್ದರೂ ಅಜ್ಜಿಯನ್ನಾದರೂ ಕಳಿಸೋಣ ಎಂದು ಶ್ರೀನಿವಾಸ್‌, ಲಕ್ಷ್ಮೀಗೆ ಹೇಳುತ್ತಾನೆ. ಜಾನುಗೆ ಕೊಡಲು ಲಕ್ಷ್ಮೀ ಸಿಹಿ, ಖಾರ ತಿಂಡಿಳನ್ನು ರೆಡಿ ಮಾಡಿ ಡಬ್ಬಿಗೆ ತುಂಬುತ್ತಾಳೆ. ಅಜ್ಜಿ ಜೊತೆ ಬೇರೆ ಯಾರೂ ಹೋಗಲು ಆಗುತ್ತಿಲ್ಲ ಅದ್ದರಿಂದ ವೆಂಕಿಯನ್ನಾದರೂ ಕಳಿಸೋಣ ಎಂದು ಶ್ರೀನಿವಾಸ್‌, ವೆಂಕಿ ಬಳಿ ಹೋಗಿ ಅಜ್ಜಿ ಜೊತೆ ಜಾನು ಮನೆಗೆ ಹೋಗಲು ಸಾಧ್ಯವೇ ಎಂದು ಕೇಳುತ್ತಾನೆ. ಅದನ್ನು ಕೇಳಿ ವೆಂಕಿ ಖುಷಿಯಾಗಿ ಒಪ್ಪುತ್ತಾನೆ. ಆದರೆ ಹೊಸದಾಗಿ ಮದುವೆಯಾಗಿದ್ದೀರಿ, 2-3 ದಿನಗಳು ಅಲ್ಲೇ ಇರಬೇಕಾಗುತ್ತದೆ ನಿಮಗೆ ಏನೂ ಸಮಸ್ಯೆ ಆಗುವುದಿಲ್ಲವೇ ಎಂದು ಚೆಲ್ವಿಯನ್ನು ಕೇಳುತ್ತಾನೆ. ಚೆಲ್ವಿಗೆ ವೆಂಕಿಯನ್ನು ಬಿಟ್ಟಿರಲು ಆಗದಿದ್ದರೂ ಖುಷಿಯಾಗಿ ಒಪ್ಪಿಕೊಳ್ಳುತ್ತಾಳೆ. ತವರು ಮನೆಯವರು ನನ್ನನ್ನು ನೋಡಲು ಬರುತ್ತಿದ್ದಾರೆ ಎಂದು ತಿಳಿದು ಜಾನು ಬಹಳ ಖುಷಿಯಾಗುತ್ತಾಳೆ.

ಸಿದ್ದುಗೆ ಥ್ಯಾಂಕ್ಸ್‌ ಹೇಳಿದ ಭಾವನಾ

ಇತ್ತ ಸಿದ್ದು ಭಾವನಾಳನ್ನು ಮನೆಗೆ ವಾಪಸ್‌ ಕರೆದೊಯ್ಯುವ ದಾರಿಯಲ್ಲಿ ಜ್ಯೂಸ್‌ ಕುಡಿಯಲು ಕರೆಯತ್ತಾನೆ. ನನಗೆ ಈಗಾಗಲೇ ನಿಮಗೆ ಕೊಡಬೇಕಾದ ದುಡ್ಡು ಸಾಕಷ್ಟು ಬಾಕಿ ಇದೆ ನನಗೆ ಜ್ಯೂಸ್‌ ಬೇಡ ಎನ್ನುತ್ತಾಳೆ. ತಂದೆಯ ಹುಟ್ಟುಹಬ್ಬ ನೆನಪಿಸಿದ್ದಕ್ಕೆ, ವಾಚ್‌ ಕೊಡಿಸಿದ್ದಕ್ಕೆ ಭಾವನಾ ಸಿದ್ದುವಿಗೆ ಥ್ಯಾಂಕ್ಸ್‌ ಹೇಳುತ್ತಾಳೆ.

ಮನೆಯಲ್ಲಿ ಸಿದ್ದು , ಭಾವನಾ ಇಲ್ಲದ್ದನ್ನು ನೋಡಿ ರೇಣುಕಾ ಕೋಪಗೊಳ್ಳುತ್ತಾಳೆ. ಇವರಿಗೆ ಭಯ ಇಲ್ಲ ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಗೊಣಗುತ್ತಾಳೆ. ಅಷ್ಟರಲ್ಲಿ ಸಿದ್ದು ಭಾವನಾ ಬರುತ್ತಾರೆ. ಎಲ್ಲಿಗೆ ಹೋಗಿದ್ದಿರಿ? ನಿಮಗೆ ಹೇಳುವವರು ಕೇಳುವರು ಯಾರೂ ಇಲ್ಲ ಅಂತ ಹೀಗೆ ಮಾಡುತ್ತಿದ್ದೀರ? ನಿಮಗಿಷ್ಟ ಬಂದ ಹಾಗೆ ಹೋಗಲು, ಬರಲು ಇದು ಛತ್ರ ಅಲ್ಲ, ಮೊದಲು ನೀನು ಎಲ್ಲಿ ಹೋದರೂ ಹೇಳಿ ಹೋಗುತ್ತಿದ್ದೆ , ಆದರೆ ಈಗ ನೀನು ಬಹಳ ಬದಲಾಗಿದ್ದೀಯ ಎಂದು ರೇಣುಕಾ ಸಿದ್ದುವಿಗೆ ಬೈಯ್ಯುತ್ತಾಳೆ.

ನಿನಗೆ ಹೇಳಿದರೆ ಏನು ಪ್ರಯೋಜನ? ನಿನ್ನ ಜೊತೆ ಬಂದಿದ್ದಾಳಲ್ಲ ಇವಳಿಗೆ ಹೇಳಬೇಕು, ಇವನಿಗೆ ಬುದ್ಧಿ ಇಲ್ಲ, ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿ ಊರೆಲ್ಲಾ ಸುತ್ತುತ್ತಿದ್ದೀಯ ನಿನಗೆ ಏನೂ ಅನ್ನಿಸುವುದಿಲ್ಲವಾ, ಈ ತಾಳಿ ತೆಗೆದು ನಿನ್ನ ತಂದೆ ಮನೆಗೆ ವಾಪಸ್‌ ಹೋಗು ಎಂದು ರೇಣುಕಾ, ಭಾವನಾ ಮೇಲೆ ಕೋಪಗೊಳ್ಳುತ್ತಾಳೆ. ಭಾವನಾ ಏನೂ ಮಾತನಾಡದೆ ಅಳ್ಳುತ್ತಾ ಅಲ್ಲಿಂದ ಹೋಗುತ್ತಾಳೆ. ಅವರಿಗೆ ಏನೂ ಹೇಳಬೇಡ, ಪ್ರತಿಯೊಂದಕ್ಕೂ ಅವರನ್ನು ಏಕೆ ಬೈಯ್ಯುತ್ತೀಯ ಎಂದು ಸಿದ್ದು ತಾಯಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner