ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲುವುದಿಲ್ಲ, ಪೊಲೀಸ್ ಸ್ಟೇಷನ್ ಮುಂದೆ ಧರಣಿ ಕುಳಿತ ಭಾವನಾ: ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 16ರ ಎಪಿಸೋಡ್‌ನಲ್ಲಿ ಖುಷಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶ್ರೀಕಾಂತ್ ಆಕ್ಸಿಡೆಂಟ್ ಕೇಸ್ ಮರು ತನಿಖೆ ಮಾಡುವಂತೆ ಪೊಲೀಸರಿಗೆ ದೂರು ನೀಡುತ್ತಾಳೆ. ಆದರೆ ದೂರು ಪಡೆಯಲು ಇನ್ಸ್‌ಪೆಕ್ಟರ್ ನಿರಾಕರಿಸಿದಾಗ ಭಾವನಾ ಪೊಲೀಸ್ ಸ್ಟೇಷನ್ ಮುಂದೆ ಧರಣಿ ಕೂರುತ್ತಾಳೆ.

Lakshmi Nivasa Serial: ಇಷ್ಟು ದಿನ ಸಿದ್ದು ಬಿಟ್ಟು ಉಳಿದವರು ಭಾವನಾ ವಿರುದ್ಧ ಕತ್ತಿ ಮಸೆಯುತ್ತಿದ್ದರು. ಗುರೂಜಿ ಮನೆಗೆ ಬಂದು ಹೋದಾಗಿನಿಂದ ಜವರೇಗೌಡ, ಏನೂ ಮಾತನಾಡದೆ ಸುಮ್ಮನಾಗಿದ್ದ, ಆದರೆ ತೀರ್ಥಯಾತ್ರೆಗೆ ಹೋಗಿದ್ದ ಜವರೇಗೌಡ ತಾಯಿ, ಮನೆಗೆ ವಾಪಸ್ ಬರುತ್ತಿದ್ದಂತೆ ಭಾವನಾ ಮೇಲೆ ದರ್ಪ ತೋರುತ್ತಾಳೆ.
ಭಾವನಾ ಮೇಲೆ ದರ್ಪ ತೋರುವ ಸಿದ್ದೇಗೌಡ ಅಜ್ಜಿ
ಇನ್ಮುಂದೆ ನೀನು ಯಾವ ಕೆಲಸಕ್ಕೂ ಹೋಗುವಂತಿಲ್ಲ, ಮನೆ ಕೆಲಸ ಮಾಡಿಕೊಂಡು ಇಲ್ಲೇ ಬಿದ್ದಿರಬೇಕು. ಎಂದು ಕಂಡಿಷನ್ ಮಾಡುತ್ತಾಳೆ. ಯಾರ ಮಾತಿಗೂ ಎದುರಾಡದೆ ಭಾವನಾ ಮನೆ ಕೆಲಸ ಎಲ್ಲಾ ಮಾಡುತ್ತಾಳೆ. ಗಿಡಕ್ಕೆ ನೀರು ಹಾಕುವಾಗ ಕಾಲಿಗೆ ಮುಳ್ಳು ಚುಚ್ಚಿ ಗಾಯವಾಗುತ್ತದೆ. ಗಾಯಕ್ಕೆ ಸಿದ್ದೇಗೌಡ ನೋವು ಕಡಿಮೆ ಆಗಲು ಎಣ್ಣೆ ಹಚ್ಚುತ್ತಾನೆ. ಭಾವನಾಗೆ ಮುಜುಗರವಾಗಿ ದಯವಿಟ್ಟು ನನ್ನ ಕಾಲು ಬಿಡಿ ಎಂದರೂ ಸಿದ್ದೇಗೌಡ ಬಿಡುವುದಿಲ್ಲ. ಮದುವೆ ಆಗಿ ಇಷ್ಟು ದಿನಗಳಾದರೂ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿಲ್ಲ, ಈಗ ಆ ಅವಕಾಶ ದೊರೆತಿದೆ. ನೀವು ಹೇಳಿದರೂ ನಾನು ಬಿಡುವುದಿಲ್ಲ ಎಂದು ಭಾವನಾ ಕಾಲಿಗೆ ಎಣ್ಣೆ ಹಚ್ಚುತ್ತಾನೆ.
ಮರುದಿನ ಸಿದ್ದೇಗೌಡನ ಬಳಿ ತಾವು ಕೊಟ್ಟ ಕಂಪ್ಲೇಂಟ್ ಏನಾಯಿತು ಎಂದು ಕೇಳುವಂತೆ ಭಾವನಾ ಹೇಳುತ್ತಾಳೆ. ಸಿದ್ದು ಪೊಲೀಸ್ ಸ್ಟೇಷನ್‌ಗೆ ಕರೆ ಮಾಡಿ ವಿಚಾರಿಸುತ್ತಾನೆ. ಹೌದು ಇನ್ಸ್‌ಪೆಕ್ಟರ್ ಬಂದಿದ್ದರು, ನೀವು ಕೊಟ್ಟ ಕಂಪ್ಲೇಂಟನ್ನು ಅವರಿಗೆ ಕೊಟ್ಟಿದ್ದೇವೆ, ಆದರೆ ಅದು ಹಳೆಯ ಕೇಸ್ ಆದ ಕಾರಣ ಅದನ್ನು ತನಿಖೆ ಮಾಡಲಾಗುವುದಿಲ್ಲ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಒಂದು ವೇಳೆ ಕೇಸ್ ಮತ್ತೆ ತನಿಖೆ ಆಗಬೇಕು ಎಂದರೆ ಅದಕ್ಕೆ ಜವರೇಗೌಡ ಒಪ್ಪಿಗೆ ಬೇಕು, ಒಮ್ಮೆ ಅವರಿಂದ ಫೋನ್ ಮಾಡಿಸಿ ಎಂದು ಕಾನ್ಸ್‌ಟೆಬಲ್ ಸಿದ್ದುಗೆ ವಿಷಯ ಮುಟ್ಟಿಸುತ್ತಾರೆ. ವಿಚಾರ ತಿಳಿದು ಸಿದ್ದು ಕೋಪಗೊಳ್ಳುತ್ತಾನೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳುತ್ತಿದ್ದೇವೆ, ನ್ಯಾಯ ಕೊಡಿಸುವುದು ನಿಮ್ಮ ಕರ್ತವ್ಯ ತಾನೇ ಎನ್ನುತ್ತಾನೆ.
ಪೊಲೀಸ್ ಸ್ಟೇಷನ್ ಮುಂದೆ ಧರಣಿ ಕುಳಿತ ಭಾವನಾ
ಪೊಲೀಸ್ ಸ್ಟೇಷನ್‌ಗೆ ಹೋಗಿ ವಿಚಾರಿಸುವುದು ಒಳ್ಳೆಯದು ಎಂದುಕೊಂಡು ಮರುದಿನ ಸಿದ್ದು ಹಾಗೂ ಭಾವನಾ ಅಲ್ಲಿಗೆ ಹೋಗುತ್ತಾರೆ. ಇಷ್ಟು ದಿನ ನಿಮಗೆ ನ್ಯಾಯ ಬೇಕು ಎನ್ನಿಸಲಿಲ್ವಾ? ಒಂದು ವರ್ಷದ ಹಿಂದಿನ ಕೇಸ್ ತನಿಖೆ ಮಾಡಿ ಎಂದು ಈಗ ಬಂದಿದ್ದೀರಿ. ನಾನು ಈ ಕಂಪ್ಲೇಂಟ್ ತೆಗೆದುಕೊಳ್ಳುವುದಿಲ್ಲ ಎಂದು ಇನ್ಸ್‌ಪೆಕ್ಟರ್ ಹೇಳುತ್ತಾರೆ. ಆ ಮಗುವಿಗೆ ನ್ಯಾಯ ದೊರಕಿಸಿಕೊಡಲೇಬೇಕು. ಅದು ಹೇಗೆ ಕಂಪ್ಲೇಂಟ್ ಪಡೆಯುವುದಿಲ್ಲ ನಾನೂ ನೋಡುತ್ತೇನೆ ಎಂದು ಭಾವನಾ, ಪೊಲೀಸರ ವಿರುದ್ಧ ಸ್ಟೇಷನ್ ಮುಂದೆ ಧರಣಿ ಕೂರುತ್ತಾಳೆ. ಭಾವನಾ ದಿಟ್ಟತನ ನೋಡಿ ಸಿದ್ದುಗೆ ಆಶ್ಚರ್ಯ ಉಂಟಾಗುತ್ತದೆ.
ಇತ್ತ ಅಜ್ಜಿಗೆ ಪ್ರಜ್ಞೆ ಬಂದಿರುವುದನ್ನು ಸಿಸಿಟಿವಿಯಲ್ಲಿ ನೋಡುವ ಜಯಂತ್ ಗಾಬರಿಯಾಗಿ ಮನೆಗೆ ಬರುತ್ತಾನೆ. ಇವರಿಗೆ ಪ್ರಜ್ಜೆ ಬಂದರೆ ಕಷ್ಟ, ಈ ಅಜ್ಜಿಯನ್ನು ಸಾಯಿಸದೆ ವಿಧಿಯಿಲ್ಲ ಎಂದುಕೊಂಡು ಆಕ್ಸಿಜನ್ ಮಾಸ್ಕ್ ತೆಗೆಯಲು ಹೋಗುತ್ತಾನೆ. ಅಷ್ಟರಲ್ಲಿ ಜಾಹ್ನವಿ ಅಲ್ಲಿಗೆ ಬರುತ್ತಾಳೆ. ನನ್ನ ಗಂಡನಿಗೆ ಅಜ್ಜಿ ಎಂದರೆ ಎಷ್ಟು ಇಷ್ಟ ಎಂದುಕೊಳ್ಳುತ್ತಾಳೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ