Lakshmi Nivasa Serial:ಅಂತೂ ಚುನಾವಣೆಯಲ್ಲಿ ಗೆದ್ದ ಜವರೇಗೌಡ,ಅಪ್ಪನ ಗೆಲುವು ಕಂಡು ಕುಣಿದು ಕುಪ್ಪಳಿಸಿದ ಸಿದ್ದು; ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 22ರ ಎಪಿಸೋಡ್‌ನಲ್ಲಿ ಚುನಾಣೆಯಲ್ಲಿ ಜವರೇಗೌಡ, ಮುನಿಸ್ವಾಮಿ ವಿರುದ್ಧ ಗೆಲುವು ಸಾಧಿಸುತ್ತಾನೆ. ಮತ್ತೊಂದೆಡೆ ಶ್ರೀನಿವಾಸ್, ವೆಂಕಿ ಪಾಲಿನ ದುಡ್ಡು ಕೊಡಲು ಮುಂದಾದಾಗ ಅದನ್ನು ಸಂತೋಷ್ ಕಸಿದುಕೊಳ್ಳುತ್ತಾನೆ.
Lakshmi Nivasa Serial: ಸಿದ್ದೇಗೌಡ, ಭಾವನಾಳನ್ನು ಮದುವೆ ಆಗಿರುವುದು ಜವರೇಗೌಡ ಹಾಗೂ ಮನೆಯವರಿಗೆ ಇಷ್ಟವಿಲ್ಲ. ಈ ಬಾರಿ ಚುನಾವಣೆಯಲ್ಲಿ ಖಂಡಿತ ನಾನು ಮುನಿಸ್ವಾಮಿ ವಿರುದ್ಧ ಸೋಲು ಕಾಣುತ್ತೇನೆ ಎಂಬ ಭಯ ಜವರೇಗೌಡನಿಗೆ ಕಾಡುತ್ತಿರುತ್ತದೆ. ಒಮ್ಮೆ ಗೆದ್ದರೆ ಸಾಕು, ಸಿದ್ದೇಗೌಡ ಹಾಗೂ ಭಾವನಾಳನ್ನು ಮನೆಯಿಂದ ಹೊರ ಹಾಕುತ್ತೇನೆ ಎಂದು ಜವರೇಗೌಡ ನಿರ್ಧರಿಸುತ್ತಾನೆ.
ಸೋಲಿನ ಭೀತಿಯಿಂದಲೇ ಚುನಾವಣೆಯಲ್ಲಿ ಗೆದ್ದೇ ಬಿಟ್ಟ ಜವರೇಗೌಡ
ಚುನಾವಣೆ ಫಲಿತಾಂಶದ ದಿನ ಎಲ್ಲರೂ ಟಿವಿಯಲ್ಲಿ ರಿಸ್ಟಲ್ಟ್ ನೋಡುತ್ತಾರೆ. ಮೊದಲೆರಡು ಸುತ್ತಿನಲ್ಲಿ ಜವರೇಗೌಡ ಮುನ್ನಡೆ ಸಾಧಿಸಿದರೂ ನಂತರದ ಸುತ್ತುಗಳಲ್ಲಿ ಮುನಿಸ್ವಾಮಿ ಮುನ್ನಡೆ ಸಾಧಿಸುತ್ತಾನೆ. ಇದರಿಂದ ಜವರೇಗೌಡನಿಗೆ ಭಯ ಶುರುವಾಗುತ್ತದೆ. ನಾನು ಇನ್ನು ಸೋಲುವುದು ಖಚಿತ ಎಂದು ಜವರೇಗೌಡ ನಿರ್ಧರಿಸುತ್ತಾನೆ. ಎಲ್ಲರೂ ಹಾಲ್‌ನಲ್ಲಿ ಟಿವಿ ನೋಡುತ್ತಾ ಕುಳಿತರೆ, ಇತ್ತ ಸಿದ್ದೇಗೌಡ ಹಾಗೂ ಭಾವನಾ ರಿಸಲ್ಟ್ ಕೇಳಿಸಿಕೊಂಡು ರೂಮ್‌ನಲ್ಲಿ ಉಳಿಯುತ್ತಾರೆ. ಕೊನೆಗೂ ಅಂತಿಮ ಫಲಿತಾಂಶ ಪ್ರಕಟಗೊಂಡು ಜವರೇಗೌಡ ಗೆಲುವು ಸಾಧಿಸುತ್ತಾನೆ.
ಅಪ್ಪ ಗೆದ್ದ ಖುಷಿಗೆ ಸಿದ್ದೇಗೌಡ ರೂಮ್‌ನಲ್ಲೇ ಕುಳಿದು ಕುಪ್ಪಳಿಸುತ್ತಾನೆ. ರೇಣುಕಾ ಎಲ್ಲರಿಗೂ ಸಿಹಿ ತಂದು ತಿನ್ನಿಸುತ್ತಾಳೆ. ಆದರೆ ಜವರೇಗೌಡ ಗೆದ್ದಿರುವುದು ಸಿದ್ದು ಅತ್ತಿಗೆಗೆ ಮಾತ್ರ ಖುಷಿ ನೀಡುವುದಿಲ್ಲ. ಇವರು ಸೋಲುತ್ತಾರೆ ಎಂದುಕೊಂಡಿದ್ದೆ, ಆದರೆ ಹೇಗೆ ಗೆದ್ದರು ಎಂದು ತನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಾಳೆ. ಆದರೆ ಮನೆಯವರ ಮುಂದೆ ತನಗೂ ಖುಷಿ ಆದಂತೆ ನಟಿಸುತ್ತಾಳೆ. ಸೋಲುತ್ತೇನೆ ಎಂದುಕೊಂಡಿದ್ದ ಜವರೇಗೌಡ, ಗೆದ್ದಿದ್ದಕ್ಕೆ ಶಾಕ್ ಆಗುತ್ತಾನೆ. ಆತನಿಗೆ ಗೆಲುವನ್ನು ಸಂಭ್ರಮಿಸಲೂ ಆಗುವುದಿಲ್ಲ.
ಕೊನೆಗೂ ಗಂಡನ ಬಗ್ಗೆಯೇ ಸುಳ್ಳು ಹೇಳಿ ಅಪ್ಪನ ಬಳಿ ದುಡ್ಡು ಬಾಚಿದ ಮಂಗಳಾ
ಇತ್ತ ಮಂಗಳಾ, ಗಂಡನನ್ನು ಕರೆತಂದು ಅಪ್ಪನ ಬಳಿ ದುಡ್ಡು ಕೇಳುತ್ತಾಳೆ. ಮಂಗಳಾ ಗಂಡನಿಗೆ ಏನೂ ಗೊತ್ತಿಲ್ಲದಿದ್ದರೂ , ಮಾವನ ಮುಂದೆ ಅವಳು ಆಡುವ ಮಾತನಿಂದ ಶಾಕ್ ಆಗುತ್ತಾಳೆ. ಅಪ್ಪನ ಬಳಿ ಇರುವ ದುಡ್ಡನ್ನು ಲಪಟಾಯಿಸಲು ಗಂಡನ ಬಗ್ಗೆ ಇಲ್ಲಸಲ್ಲದ್ದನ್ನು ತಂದೆ ಶ್ರೀನಿವಾಸ್ ಬಳಿ ಹೇಳುತ್ತಾಳೆ. ಅದನ್ನು ಕೇಳಿ ಆತ ಶಾಕ್ ಆಗುತ್ತಾನೆ. ಮಕ್ಕಳು ಇನ್ನೂ ಚಿಕ್ಕವರು, ಅವರ ಮುಂದೆ ನೀವು ಹೀಗೆಲ್ಲಾ ಕುಡಿದು ಗಲಾಟೆ ಮಾಡುವುದು ಸರಿಯಲ್ಲ, ಇನ್ಮುಂದೆಯಾದರೂ ತಿದ್ದಿಕೊಳ್ಳಿ ಎಂದು ಶ್ರೀನಿವಾಸ್ ಹೇಳಿದಾಗ ಮಂಗಳಾ ಗಂಡನಿಗೆ ಬೇಸರ ಎನಿಸುತ್ತದೆ. ದುಡ್ಡು ಕೊಡಲು ಬಂದಾಗ ಆತ ಅದನ್ನು ತೆಗೆದುಕೊಳ್ಳದೆ, ದಯವಿಟ್ಟು ನನ್ನನ್ನು ಕ್ಷಮಿಸಿ ಮಾವ, ಈ ದುಡ್ಡನ್ನು ನಿಮ್ಮ ಮಗಳಿಗೇ ಕೊಟ್ಟುಬಿಡಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಅಪ್ಪನ ಕೈಯಿಂದ ಮಂಗಳಾ ಹಣ ಕಸಿದುಕೊಳ್ಳುತ್ತಾಳೆ.
ಸಂತೋಷ್, ಹರೀಶ್, ಮಂಗಳಾಗೆ ದುಡ್ಡು ಹಂಚಿದ ನಂತರ ಶ್ರೀನಿವಾಸ್ ಹಿರಿಯ ಮಗ ವೆಂಕಿಗೂ ಹಣ ಹಂಚಲು ಮುಂದಾಗುತ್ತಾನೆ. ವೆಂಕಿ ಅದನ್ನು ನಿರಾಕರಿಸಿದರೂ ಬಲವಂತವಾಗಿ ಆತನ ಕೈಗೆ ಕೊಡುತ್ತಾನೆ. ಆದರೆ ಇದನ್ನು ಸಹಿಸಿಕೊಳ್ಳದ ಸಂತೋಷ್, ವೆಂಕಿ ಕೈಯಿಂದ ಅದನ್ನು ಕಿತ್ತುಕೊಳ್ಳುತ್ತಾನೆ. ರಸ್ತೆಯಲ್ಲಿದ್ದವನನ್ನು ಮನೆಗೆ ತಂದು ಸಾಕಿದ ಕೂಡಲೇ ಅವನು ಹೇಗೆ ನಿಮ್ಮ ಮಗ ಆಗುತ್ತಾನೆ? ಅವನು ಇಲ್ಲೇ ಇದ್ದರೆ ಆಸ್ತಿಯಲ್ಲಿ ಪಾಲು ಕೇಳುತ್ತಾನೆ. ಅವನು ಈ ಮನೆಯಲ್ಲಿ ಇರಕೂಡದು ಎಂದು ತಾಕೀತು ಮಾಡುತ್ತಾನೆ.
ಜಯಂತ್ ವರ್ತನೆಗೆ ಮತ್ತೊಮ್ಮೆ ಬೇಸರಗೊಂಡ ಜಾಹ್ನವಿ
ಮತ್ತೊಂದೆಡೆ ಜಯಂತ್, ನಮ್ಮಿಬ್ಬರ ನಡುವೆ ಮೂರನೆಯವರು ಬರುವುದು ಇಷ್ಟವಿಲ್ಲ, ಆದ್ದರಿಂದ ಈ ಮಗು ನಮಗೆ ಬೇಡ ಎನ್ನುತ್ತಾನೆ. ಅದನ್ನು ಕೇಳಿ ಜಾಹ್ನವಿಗೆ ಶಾಕ್ ಆಗುತ್ತದೆ.
ಜವರೇಗೌಡ, ಮೊದಲೇ ನಿರ್ಧರಿಸಿದಂತೆ ಸಿದ್ದೇಗೌಡ-ಭಾವನಾಳನ್ನು ಮನೆಯಿಂದ ಹೊರ ಹಾಕುತ್ತಾನಾ? ವೆಂಕಿ-ಚೆಲ್ವಿ ಮನೆ ಬಿಟ್ಟು ಹೋಗುತ್ತಾರಾ? ಜಾಹ್ನವಿ ಜಯಂತ್ ಬಲವಂತಕ್ಕೆ ಮಗುವನ್ನು ಕಳೆದುಕೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ