ಸಕ್ಸಸ್‌ ಆಯ್ತು ಸಿದ್ದೇಗೌಡ ಪ್ಲ್ಯಾನ್‌, ಗುರುಗಳ ಮಾತು ಕೇಳಿ ಭಾವನಾಳನ್ನು ಮನೆಯಲ್ಲೇ ಉಳಿಸಿಕೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸಕ್ಸಸ್‌ ಆಯ್ತು ಸಿದ್ದೇಗೌಡ ಪ್ಲ್ಯಾನ್‌, ಗುರುಗಳ ಮಾತು ಕೇಳಿ ಭಾವನಾಳನ್ನು ಮನೆಯಲ್ಲೇ ಉಳಿಸಿಕೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

ಸಕ್ಸಸ್‌ ಆಯ್ತು ಸಿದ್ದೇಗೌಡ ಪ್ಲ್ಯಾನ್‌, ಗುರುಗಳ ಮಾತು ಕೇಳಿ ಭಾವನಾಳನ್ನು ಮನೆಯಲ್ಲೇ ಉಳಿಸಿಕೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 28ರ ಎಪಿಸೋಡ್‌ನಲ್ಲಿ ಗುರುಗಳು ಮಾತು ಕೇಳಿದ ನಂತರ ಜವರೇಗೌಡ , ಸೊಸೆಯನ್ನು ಮನೆಯಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡುತ್ತಾನೆ. ಸಿದ್ದು ಇದನ್ನೆಲ್ಲಾ ಬೇಕಂತಲೇ ಮಾಡಿಸಿರುವುದು ಎಂಬ ಸತ್ಯ ಭಾವನಾಗೆ ತಿಳಿಯುತ್ತದೆ.

ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 28ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 28ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಭಾವನಾಳನ್ನು ಮನೆಯಿಂದ ಹೊರ ಹಾಕಲು ರೇಣುಕಾ, ಜವರೇಗೌಡ, ಸಿಂಚನಾ, ನೀಲು ಎಲ್ಲರೂ ಕಾಯುತ್ತಿದ್ದಾರೆ. ಆದರೆ ಮರೀಗೌಡ ಹಾಗೂ ಸಿದ್ದೇಗೌಡಗೆ ಭಾವನಾಳನ್ನು ಮನೆಯಿಂದ ಹೊರ ಕಳಿಸಲು ಇಷ್ಟವಿಲ್ಲ. ಚುನಾವಣೆಯಲ್ಲಿ ಜಯ ಗಳಿಸುತ್ತಿದ್ದಂತೆ ಭಾವನಾಳನ್ನು ಮನೆಯಿಂದ ಹೊರ ಕಳಿಸಲು ಪ್ಲ್ಯಾನ್‌ ಮಾಡುತ್ತಿದ್ದವರಿಗೆ ಗುರುಗಳು ಹೇಳಿದ ಮಾತು ಆಶ್ಚರ್ಯ ಎನಿಸುತ್ತದೆ.

ಗುರುಗಳ ಮಾತು ಕೇಳಿ ಮನಸ್ಸು ಬದಲಿಸಿಕೊಂಡ ಜವರೇಗೌಡ

ಈ ಹೆಣ್ಣು ಮಗು ನಿಮ್ಮ ಮನೆಯ ಅದೃಷ್ಟ ಇವಳು ಕಾಲಿಟ್ಟ ಈ ಮನೆ ಬಹಳ ಚೆನ್ನಾಗಿರುತ್ತದೆ. ಇವಳಿಂದಲೇ ನಿಮ್ಮ ರಾಜಕೀಯ ಜೀವನ ಉತ್ತುಂಗಕ್ಕೆ ಏರುತ್ತದೆ. ಒಂದು ವೇಳೆ ಇವಳು ಮನೆಯಿಂದ ಹೊರ ಹೋದರೆ ನಿಮ್ಮ ಪಾಲಿಗೆ ನತದೃಷ್ಟ ಒಲಿದು ಬರುತ್ತದೆ ಎಂದು ಗುರುಗಳು ಹೇಳುತ್ತಾರೆ. ಅಸಲಿಗೆ ಸಿದ್ದೇಗೌಡನೇ ಆ ಗುರುಗಳನ್ನು ಮನೆಗೆ ಕರೆ ತಂದಿರುತ್ತಾನೆ. ದೇವಸ್ಥಾನವೊಂದರಲ್ಲಿ ಗುರುಗಳನ್ನು ನೋಡಿದ ಸಿದ್ದೇಗೌಡ, ಅವರ ಮುಂದೆ ನಡೆದ ವಿಚಾರಗಳೆನ್ನೆಲ್ಲಾ ಹೇಳಿಕೊಂಡು ಬೇಸರ ವ್ಯಕ್ತಪಡಿಸುತ್ತಾನೆ. ನೀವು ಸುಳ್ಳು ಹೇಳುವುದರಿಂದ ಒಂದು ಹೆಣ್ಣಿನ ಜೀವನ ಸರಿ ಆಗುತ್ತದೆ ಎಂದು ಮನವಿ ಮಾಡುತ್ತಾನೆ. ಸಿದ್ದು ಮನವಿಗೆ ಒಪ್ಪಿ ಗುರುಗಳು ಮನೆಗೆ ಬರುತ್ತಾರೆ.

ತನ್ನ ಮಾತಿಗೆ ಒಪ್ಪಿ, ಮನೆಗೆ ಬಂದು ಸುಳ್ಳು ಹೇಳಿದ್ದಕ್ಕೆ ಸಿದ್ದು , ಗುರುಗಳಿಗೆ ಧನ್ಯವಾದ ಹೇಳುತ್ತಾನೆ. ನಾನು ಇಲ್ಲಿಗೆ ಬಂದಿದ್ದೇ ದೈವ ಪ್ರೇರಣೆಯಿಂದ, ನಿನ್ನಿಂದ ಅಲ್ಲ, ಹಾಗೇ ನಾನು ಆಡಿದ ಮಾತುಗಳು ನಿನ್ನ ಮಾತುಗಳಲ್ಲ, ಆ ದೇವರು ಹೇಳಿಸಿದಂಥ ಮಾತುಗಳು ಎಂದು ಗುರುಗಳು ಹೇಳುತ್ತಾರೆ. ಗುರುಗಳು ಬಂದು ಹೋದ ನಂತರವೂ ಮತ್ತೆ ರೇಣುಕಾ ಹಾಗೂ ನೀಲು ಭಾವನಾಳನ್ನು ತವರು ಮನೆಗೆ ಕಳಿಸುವಂತೆ ಹೇಳುತ್ತಾರೆ. ಅವಳು ಇಲ್ಲಿ ಇದ್ದರೆ ಏನು ಸಮಸ್ಯೆ, ಇರಲಿ ಬಿಡಿ ಎಂದು ಮರೀಗೌಡ ಹೇಳುತ್ತಾನೆ. ಅಷ್ಟರಲ್ಲಿ ಸಿದ್ದೇಗೌಡ ಅಲ್ಲಿಗೆ ಬರುತ್ತಾನೆ. ನಿನ್ನ ಹೆಂಡತಿಯನ್ನು ಅವಳ ಮನೆಗೆ ಬಿಟ್ಟು ಬಾ ಎಂದು ರೇಣುಕಾ ಹೇಳುತ್ತಾಳೆ. ಭಾವನಾಗೆ ಇಲ್ಲಿ ಜಾಗವಿಲ್ಲ ಎಂದರೆ ನಾನೂ ಇಲ್ಲಿ ಇರುವುದಿಲ್ಲ ಎಂದು ಸಿದ್ದೇಗೌಡ ತಂದೆಯ ಕಾಲಿಗೆ ನಮಸ್ಕರಿಸಿ, ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಅಲ್ಲಿಂದ ಹೊರಡುತ್ತಾನೆ.

ಭಾವನಾಗೆ ಗೊತ್ತಾಯ್ತು ಸಿದ್ದು ಮಾಡಿರುವ ಪ್ಲ್ಯಾನ್

ಮಗನ ಮಾತು ಕೇಳಿದ ಜವರೇಗೌಡ, ಬಾ ಇಲ್ಲಿ, ನೀವು ಮನೆಯಿಂದ ಹೊರ ಹೋಗುವುದು ಬೇಡ ಇಲ್ಲೇ ಇರಿ ಎನ್ನುತ್ತಾನೆ. ಇದನ್ನು ಕೇಳಿ ಸಿದ್ದು , ಮರೀಗೌಡ ಖುಷಿಯಾದರೆ ರೇಣುಕಾ, ನೀಲು ಇಬ್ಬರೂ ಶಾಕ್‌ ಆಗುತ್ತಾರೆ. ಚುನಾವಣೆಯಲ್ಲಿ ಗೆದ್ದಿರುವೆ, ಮುಂದೆ ಮಿನಿಸ್ಟರ್‌ ಪೋಸ್ಟ್‌ ಸಿಗುವ ಅವಕಾಶವಿದೆ. ಎಲ್ಲರೂ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ, ಈ ಸಮಯದಲ್ಲಿ ಭಾವನಾಳನ್ನು ಹೊರಗೆ ಕಳಿಸಿದರೆ ಅದು ದೊಡ್ಡ ಸುದ್ದಿಯಾಗುತ್ತದೆ ಎಂದು ಜವರೇಗೌಡ ರೇಣುಕಾ ಬಾಯಿ ಮುಚ್ಚಿಸುತ್ತಾನೆ.

ಅಪ್ಪನ ಮಾತು ಕೇಳಿ ಸಿದ್ದೇಗೌಡ ಖುಷಿಯಾಗುತ್ತಾನೆ. ಸಿದ್ದು ಖುಷಿಯಾಗಿರುವುದನ್ನು ಗಮನಿಸಿದ ಭಾವನಾ ಏನು ಇಷ್ಟು ಖುಷಿಯಲ್ಲಿದ್ದೀರ ಎಂದು ಕೇಳುತ್ತಾಳೆ. ನಾವು ಮನೆ ಬಿಟ್ಟು ಹೋಗುವುದು ಬೇಡ ಅಂತ ಅಪ್ಪ ಹೇಳಿದ್ದಾರೆ ಎನ್ನುತ್ತಾನೆ. ಗುರುಗಳು ಅವರಾಗಿ ಬಂದಿದ್ದಲ್ಲ, ನೀವು ಕರೆದುಕೊಂಡು ಬಂದಿರುವುದೆಂದು ನನಗೆ ಚೆನ್ನಾಗಿ ಗೊತ್ತು, ನನ್ನ ಹಣೆಬರಹಕ್ಕೆ ನೀವು ಏಕೆ ತಲೆಕೆಡಿಸಿಕೊಳ್ಳುತ್ತೀರ? ಒಂದು ವೇಳೆ ಇದೆಲ್ಲಾ ಸುಳ್ಳು ಎಂದು ಅವರಿಗೆ ಗೊತ್ತಾದರೆ ಮುಂದೆ ಏನಾಗಬಹುದು ಅಂತ ಯೋಚನೆ ಮಾಡಿದ್ದೀರ? ಎಂದು ಕೇಳುತ್ತಾಳೆ. ಹೆಂಡತಿಗೆ ಎಲ್ಲಾ ವಿಚಾರ ಗೊತ್ತಾಗಿದ್ದು ಸಿದ್ದೇಗೌಡನಿಗೆ ಆಶ್ಚರ್ಯ ಎನಿಸಿದರೂ, ಮನೆಯಲ್ಲೇ ಉಳಿಯುವಂತೆ ಆಯ್ತಲ್ಲಾ ಎಂದು ಸಮಾಧಾನಗೊಳ್ಳುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner