ತಾನು ಸೇಫ್ ಆಗುವುದಕ್ಕೆ ಗೆಳೆಯ ಸಚಿನ್ ಬಳಿ ಹೆಂಡತಿ ಜಾನುವನ್ನು ಕೆಟ್ಟವಳನ್ನಾಗಿ ಮಾಡಿದ ಸೈಕೋ ಜಯಂತ; ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 30ರ ಎಪಿಸೋಡ್‌ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಮತ್ತೆ ಖುಷಿಯನ್ನು ಮನೆಗೆ ಕರೆತರುತ್ತಾರೆ. ಮತ್ತೊಂದೆಡೆ ಜಯಂತ್ ತಾನು ಸೇಫ್ ಆಗುವುದಕ್ಕೆ ಗೆಳೆಯ ಸಚಿನ್ ಬಳಿ ಹೆಂಡತಿ ಜಾನುವನ್ನೇ ಕೆಟ್ಟವಳನ್ನಾಗಿ ಮಾಡುತ್ತಾನೆ.
Lakshmi Nivasa Serial: ಖುಷಿಯನ್ನು ಸೌಪರ್ಣಿಕಾ ಹಾಗೂ ರವಿ ಪೊಲೀಸರ ಜೊತೆಗೆ ಬಂದು ಕರೆದೊಯ್ದ ನಂತರ ಲಕ್ಷ್ಮೀ ಹಾಗೂ ಶ್ರೀನಿವಾಸ್ ಬೇಸರದಲ್ಲಿರುತ್ತಾರೆ. ಖುಷಿ ಜೊತೆ ಮಾತನಾಡಲು ಭಾವನಾ ಮನೆಗೆ ಕಾಲ್ ಮಾಡುತ್ತಾಳೆ. ಆದರೆ ಆಗ ಖುಷಿ ವಿಚಾರ ಗೊತ್ತಾಗುತ್ತದೆ. ಇದರಿಂದ ಬೇಸರಗೊಳ್ಳುವ ಭಾವನಾ, ಸಿದ್ದು ಬಳಿ ಹೇಳಿಕೊಂಡು ಅಳುತ್ತಾಳೆ. ಸಿದ್ದು ಕೂಡಾ ವಿಚಾರ ತಿಳಿದು ಬೇಸರಗೊಳ್ಳುತ್ತಾನೆ. ನೀವು ಅಳಬೇಡಿ ಎಂದು ಸಮಾಧಾನ ಹೇಳುತ್ತಾ ಭಾವನಾಳನ್ನು ಸೌಪರ್ಣಿಕಾ ಮನೆಗೆ ಕರೆದೊಯ್ಯುತ್ತಾನೆ.
ಖುಷಿಯನ್ನು ತಮ್ಮೊಂದಿಗೆ ಕಳಿಸಿಕೊಡುವಂತೆ ಮನವಿ ಮಾಡಿದ ಸಿದ್ದು
ಭಾವನಾ ಹಾಗೂ ಸಿದ್ದುವನ್ನು ನೋಡುತ್ತಿದ್ದಂತೆ ಖುಷಿ ಅವರ ಬಳಿ ಓಡೋಡಿ ಬರುತ್ತಾಳೆ. ನೀವು ಇಲ್ಲಿಗೆ ಏಕೆ ಬಂದ್ರಿ? ಏನು ಕೆಲಸ ಎಂದು ಕೇಳುತ್ತಾಳೆ. ನನಗೆ ಖುಷಿ ಬೇಕು ಎಂದು ಭಾವನಾ ಹೇಳುತ್ತಾಳೆ. ಖುಷಿಗೆ ನಾನು ಅತ್ತೆ ಆಗಬೇಕು ಅದರೆ ನಿನಗೂ ಅವಳಿಗೂ ಏನು ಸಂಬಂಧ ಎಂದು ಸೌಪರ್ಣಿಕಾ ಪ್ರಶ್ನಿಸುತ್ತಾಳೆ. ನಾನು ಖುಷಿ ಅಮ್ಮ ಎಂದು ಭಾವನಾ ಹೇಳುತ್ತಾಳೆ. ಅಮ್ಮ ಆದವಳು ಮಗುವನ್ನು ತನ್ನ ಜೊತೆ ಇಟ್ಟುಕೊಂಡು ನೋಡಿಕೊಳ್ಳಬೇಕು, ಗಂಡನ ಮನೆಯಲ್ಲಿ ಆರಾಮವಾಗಿ ಇರುವುದಲ್ಲ, ಈ ಬಾರಿ ನಾನು ಖುಷಿಯನ್ನು ಕಾನೂನಿನ ಮೂಲಕವೇ ಕರೆತಂದಿದ್ದೇನೆ, ನಿಮ್ಮ ಅಮ್ಮ ಕೂಡಾ ನಮ್ಮ ಜೊತೆ ಖುಷಿಯನ್ನು ಕಳಿಸಿಕೊಡಲು ಒಪ್ಪಿ ಪತ್ರ ಬರೆದುಕೊಟ್ಟಿದ್ದಾರೆ ಎನ್ನುತ್ತಾಳೆ.
ಇದಕ್ಕೆ ಸಿದ್ದು ಕೋಪಗೊಂಡರೂ ಸೌಪರ್ಣಿಕಾ ಹಾಗೂ ರವಿ ಬಳಿ ಬಂದು ಕೈ ಮುಗಿದು ಪ್ರಪಂಚದಲ್ಲಿ ಎಲ್ಲಾ ವಿಷಯಗಳು ಪೊಲೀಸರಿಂದಲೇ ಪರಹಾರವಾಗುವುದಿಲ್ಲ. ನನಗೂ ಖುಷಿ ಎಂದರೆ ಬಹಳ ಇಷ್ಟ, ಅವಳು ನನಗೆ ಮಗಳು ಇದ್ದಂತೆ, ಈ ರೀತಿ ಅವಳನ್ನು ನಿಮ್ಮ ಜೊತೆ ಕರೆದುತಂದು ನಮ್ಮಿಂದ ಅವಳನ್ನು ದೂರ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಾನೆ. ಸಿದ್ದು ವರ್ತನೆ ಕಂಡು ಭಾವನಾ, ಸೌಪರ್ಣಿಕಾ, ರವಿಗೆ ಆಶ್ಚರ್ಯವಾಗುತ್ತದೆ. ಸಿದ್ದು ಇಲ್ಲಿಗೆ ಬಂದು ನಮ್ಮ ಜೊತೆ ಗಲಾಟೆ ಮಾಡುತ್ತಾನೆ ಎಂದುಕೊಂಡಿದ್ದರೆ, ಇವನು ನೋಡಿದರೆ ಈ ರೀತಿ ಮನವಿ ಮಾಡುತ್ತಿದ್ದಾನಲ್ಲ ಎಂದು ಖುಷಿಯನ್ನು ಅವರೊಂದಿಗೆ ಕಳಿಸಲು ಒಪ್ಪಿಕೊಳ್ಳುತ್ತಾರೆ. 2 ದಿನಗಳು ಮಾತ್ರ, ಆದರೆ ನಂತರ ಅವಳನ್ನು ಕರೆತಂದು ಬಿಡಬೇಕು ಎಂದು ಸೌಪರ್ಣಿಕಾ ಕಂಡಿಷನ್ ಮಾಡುತ್ತಾಳೆ. ನಾನೇ ತಂದು ಬಿಡುತ್ತೇನೆ ಎಂದು ಸಿದ್ದು ಮನೆಗೆ ಖುಷಿಯನ್ನು ಕರೆತರುತ್ತಾನೆ. ಆದರೆ ಮನೆಗೆ ಮಗು ಬಂದಿರುವುದನ್ನು ನೋಡಿ ರೇಣುಕಾ ಕೋಪಗೊಳ್ಳುತ್ತಾಳೆ.
ಸಚಿನ್‌ನನ್ನು ಮನೆಯಿಂದ ಕಳಿಸಲು ಜಯಂತ್ ಪ್ಲ್ಯಾನ್
ಮತ್ತೊಂದೆಡೆ ಜಯಂತ್ ಮನೆಗೆ ಗೆಳೆಯ ಸಚಿನ್ ಬಂದಾಗಿನಿಂದ ಜಾನುಗೆ ಎಲ್ಲಿ ಇವನು ನನ್ನ ಬಗ್ಗೆ ಹೇಳುತ್ತಾನೋ ಎಂದು ಜಯಂತ್‌ಗೆ ಭಯ ಕಾಡುತ್ತಿರುತ್ತದೆ. ನಿಮ್ಮ ಫ್ರೆಂಡ್ ಚೆನ್ನಾಗಿ ಮಾತನಾಡುತ್ತಾರೆ ಅವರು ಬಂದಾಗಿನಿಂದ ನನಗೆ ಚೆನ್ನಾಗಿ ಟೈಮ್ ಪಾಸ್ ಆಗುತ್ತಿದೆ ಎಂದು ಜಾಹ್ನವಿ ಗಂಡನ ಬಳಿ ಹೇಳುತ್ತಾಳೆ. ಅವನಿಗೆ ಯಾವ ಸಮಯದಲ್ಲಿ ಏನು ಮಾತನಾಡಬೇಕು ಎಂದು ಗೊತ್ತಿಲ್ಲ, ಯಾರೊಂದಿಗೋ ಓಡಾಡುವುದು, ಬೇಕಾಬಿಟ್ಟಿ ಜೀವನ ನಡೆಸುವುದು ಅವನಿಗೆ ಅಭ್ಯಾಸ, ಮತ್ತೊಂದು ದೇಶಕ್ಕೆ ಹೋಗಿ ನಮ್ಮ ದೇಶದ ರೀತಿ ನೀತಿಯನ್ನು ಮರೆತಿದ್ದಾನೆ, ಅವನ ಮಾತುಗಳನ್ನು ನೀನು ಇಷ್ಟಪಟ್ಟಿದ್ದೀಯ ಎಂದರೆ ಏನು ಹೇಳಬೇಕೋ ಗೊತ್ತಿಲ್ಲ ಎಂದು ಜಯಂತ್ ಹೇಳುತ್ತಾನೆ.
ಇವನನ್ನು ಮನೆಯಲ್ಲೇ ಬಿಟ್ಟರೆ ನನ್ನ ಬಗ್ಗೆ ಎಲ್ಲವನ್ನೂ ಹೇಳುತ್ತಾನೆ ಎಂದು ಸಚಿನ್‌ನನ್ನೂ ತನ್ನೊಂದಿಗೆ ಆಫೀಸಿಗೆ ಕರೆದೊಯ್ಯುತ್ತಾನೆ. ಜಾಹ್ನವಿ ನೀನು ಅಂದುಕೊಂಡಷ್ಟು ಒಳ್ಳೆಯವರಲ್ಲ, ಅವರು ಒಂದು ಸಮಯದಲ್ಲಿ ಇರುವ ಹಾಗೇ ಯಾವಾಗಲೂ ಇರುವುದಿಲ್ಲ. ಅವರಿಗೆ ನೀನು ಇಲ್ಲಿ ಬಂದಿರುವುದು ಇಷ್ಟವಿಲ್ಲ. ಅವರು ಇಲ್ಲಿ ಏಕೆ ಬಂದಿದ್ದಾರೆ? ಎಂದು ಕೇಳುತ್ತಿದ್ದಾಳೆ ಎನ್ನುತ್ತಾನೆ. ಇದನ್ನು ಕೇಳಿ ಸಚಿನ್‌ಗೆ ಆಶ್ಚರ್ಯವಾದರೂ, ಸರಿ ನಾನು ವಾಪಸ್ ಹೋಗುವೆ ಎಂದು ಒಪ್ಪಿಕೊಳ್ಳುತ್ತಾನೆ. ಇಲ್ಲೇ ಸ್ವಲ್ಪ ದಿನ ಇರಲು ಬಂದ ಜಯಂತ್ ಗೆಳೆಯ ವಾಪಸ್ ಹೋಗುತ್ತಿದ್ದಾನೆ ಎಂದು ತಿಳಿದು ಜಾಹ್ನವಿ ಕೂಡಾ ಆಶ್ಚರ್ಯಗೊಳ್ಳುತ್ತಾಳೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
-------
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ