ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ ಬೆನ್ನತ್ತಿದ ಭಾವನಾ: ಸತ್ಯ ಹೊರಬಂದು ಜವರೇಗೌಡ, ಸಿದ್ದೇಗೌಡನಿಗೆ ಶಿಕ್ಷೆ ಆಗುತ್ತಾ?ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ ಬೆನ್ನತ್ತಿದ ಭಾವನಾ: ಸತ್ಯ ಹೊರಬಂದು ಜವರೇಗೌಡ, ಸಿದ್ದೇಗೌಡನಿಗೆ ಶಿಕ್ಷೆ ಆಗುತ್ತಾ?ಲಕ್ಷ್ಮೀ ನಿವಾಸ ಧಾರಾವಾಹಿ

ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ ಬೆನ್ನತ್ತಿದ ಭಾವನಾ: ಸತ್ಯ ಹೊರಬಂದು ಜವರೇಗೌಡ, ಸಿದ್ದೇಗೌಡನಿಗೆ ಶಿಕ್ಷೆ ಆಗುತ್ತಾ?ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 3ರ ಎಪಿಸೋಡ್‌ನಲ್ಲಿ ರೇಣುಕಾ ಕೋಪಕ್ಕೆ ಹೇಳಿದ ಮಾತು ಭಾವನಾಗೆ ಬಹಳ ಕಾಡುತ್ತದೆ, ಶ್ರೀಕಾಂತ್‌ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಬೇಕೆಂಬ ಕಾರಣದಿಂದ ಪೋಲೀಸರಿಗೆ ದೂರು ನೀಡುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 3ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 3ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಸೌಪರ್ಣಿಕಾ ಮನೆಯಿಂದ ಸಿದ್ದೇಗೌಡ ಹಾಗೂ ಭಾವನಾ ಖುಷಿಯನ್ನು ಕರೆತರುವುದು ರೇಣುಕಾಗೆ ಇಷ್ಟವಾಗುವುದಿಲ್ಲ. ಈ ಮಗುವನ್ನು ಏಕೆ ಕರೆತಂದೆ ಎಂದು ರೇಣುಕಾ ಕೇಳುತ್ತಾಳೆ. ನಾನು ಅವಳ ಅಮ್ಮ ಅಂತ ಭಾವನಾ ಹೇಳುತ್ತಾಳೆ. ನಿನಗೆ  ಮಗುವಿನ ಬಗ್ಗೆ ಅಷ್ಟು ಅಕ್ಕರೆ ಇದ್ದರೆ ಅವಳ ತಂದೆಯ ಸಾವಿಗೆ ಕಾರಣರಾದವರನ್ನು ಹುಡುಕಿ ಶಿಕ್ಷೆ ಕೊಡಿಸು ಎಂದು ರೇಣುಕಾ ಹೇಳುತ್ತಾಳೆ.

ಶ್ರೀಕಾಂತ್‌ ಆಕ್ಸಿಡೆಂಟ್‌ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ ಭಾವನಾ

ಭಾವನಾಗೆ ರೇಣುಕಾ ಮಾತು ನಿಜ ಎನಿಸುತ್ತದೆ. ನಾನು ಮೊದಲೇ ಏಕೆ ಈ ಕೆಲಸ ಮಾಡಲಿಲ್ಲ, ಈಗಲಾದಾರೂ ಪೊಲೀಸರಿಗೆ ದೂರು ನೀಡಿ ಶ್ರೀಕಾಂತ್‌ ಸಾವಿಗೆ ಕಾರಣರಾದವರು ಯಾರು ಎಂಬುದನ್ನು ಕಂಡುಹಿಡಿಯಬೇಕು ಎಂದು ಪೊಲೀಸ್‌ ಸ್ಟೇಷನ್‌ಗೆ ಹೋಗುತ್ತಾಳೆ. ಆದರೆ 2 ದಿನ ಅಲೆದಾಡಿದರೂ ಯಾರೂ ಕಂಪ್ಲೇಂಟ್‌ ಪಡೆಯುವುದಿಲ್ಲ. ಭಾವನಾಳನ್ನು ಗುರುತಿಸಿದ ಕಾನ್‌ಸ್ಟೇಬಲ್‌, ನೀವು ಜವರೇಗೌಡರ ಸೊಸೆ ತಾನೇ? ನಿಮ್ಮ ಮಾವನ ಕಡೆಯಿಂದ ಒಂದು ಫೋನ್‌ ಮಾಡಿಸಿದರೆ ನಿಮ್ಮ ಕೆಲಸ ಆಗಿಬಿಡುತ್ತದೆ ಎನ್ನುತ್ತಾರೆ. ಭಾವನಾಗೆ ಮನೆಯವರಿಗೆ ಯಾರಿಗೂ ಈ ವಿಚಾರ ತಿಳಿಸುವುದು ಇಷ್ಟವಿರುವುದಿಲ್ಲ. ಆದರೆ ಹೇಳದೆ ಬೇರೆ ದಾರಿಯೂ ಇಲ್ಲ.

ಜವರೇಗೌಡ ಅಥವಾ ಸಿದ್ದುವಿಗೆ ಈ ವಿಚಾರ ಹೇಳುವುದಕ್ಕಿಂತ ಮರೀಗೌಡನಿಗೆ ಹೇಳಿದರೆ ಒಳ್ಳೆಯದು ಎಂದು ಎಲ್ಲಾ ವಿಚಾರವನ್ನೂ ಅವನಿಗೆ ತಿಳಿಸುತ್ತಾನೆ. ಭಾವನಾ ಮಾತು ಕೇಳಿದ ಮರೀಗೌಡ ಅವಳಿಗೆ ಸಹಾಯ ಮಾಡಲು ಒಪ್ಪುತ್ತಾನೆ. ತನಗೆ ಪರಿಚಯ ಇರುವ ಪೊಲೀಸರಿಗೆ ಹೇಳಿ ದೂರು ಪಡೆಯುವಂತೆ ಹೇಳುತ್ತಾನೆ. ಅದರಂತೆ ಭಾವನಾ ಬಂದು ಒಂದು ವರ್ಷದ ಹಿಂದೆ ನಡೆದ ಘಟನೆಯ ಬಗ್ಗೆ ದೂರು ನೀಡುತ್ತಾಳೆ. ಎಲ್ಲಿ ಹೋಗುತ್ತಿದ್ದೀರಿ, ಏನು ಮಾಡುತ್ತಿದೀರಿ, ಏನಾದರೂ ಸಹಾಯ ಬೇಕಿದ್ದರೆ ನನಗೆ ಕೇಳಿ ಎಂದು ಸಿದ್ದೇಗೌಡ ಎಷ್ಟು ಹೇಳಿದರೂ ಭಾವನಾ ಮಾತ್ರ ಅವನ ಬಳಿ ಏನೂ ಹೇಳುವುದಿಲ್ಲ.

ಪೊಲೀಸ್‌ ಸ್ಟೇಷನ್‌ನಿಂದ ಕಾನ್‌ಸ್ಟೇಬಲ್‌ ಒಬ್ಬರು ಭಾವನಾಗೆ ಕರೆ ಮಾಡಿ, ನೀವು ಕೊಟ್ಟ ಕಂಪ್ಲೇಟ್‌ ರೀ ಓಪನ್‌ ಆಗುವ ಎಲ್ಲಾ ಸಾಧ್ಯತೆಗಳಿವೆ, ನಾಳೆ ಸಾಹೇಬ್ರು ಬರುತ್ತಿದ್ದಾರೆ, ನೀವು ಅವರ ಬಳಿ ಬಂದು ಮಾತನಾಡಿ, ಆದರೆ ನೀವೊಬ್ಬರೇ ಬರಬೇಡಿ, ನಿಮ್ಮ ಗಂಡ ಸಿದ್ದೇಗೌಡನನ್ನು ಜೊತೆಗೆ ಕರೆತನ್ನಿ ಎಂದು ಸಲಹೆ ನೀಡುತ್ತಾರೆ. ಭಾವನಾ ಬಹಳ ಯೋಚಿಸಿ,ಕೊನೆಗೂ ಸಿದ್ದುವನ್ನು ತನ್ನೊಂದಿಗೆ ಕರೆದೊಯ್ಯಲು ನಿರ್ಧರಿಸುತ್ತಾಳೆ. ನಾಳೆ ನೀವು ನನ್ನ ಜೊತೆ ಪೊಲೀಸ್‌ ಸ್ಟೇಷನ್‌ಗೆ ಬರಬೇಕು ಎಂದು ಸಿದ್ದೇಗೌಡನಿಗೆ ಹೇಳುತ್ತಾಳೆ. ಸಿದ್ದು ಕೂಡಾ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ.

ಗೆಳೆಯ ಸಚಿನ್‌ನನ್ನು ಬೆದರಿಸಿ ಮನೆಯಿಂದ ಹೊರ ಕಳಿಸಿದ ಜಯಂತ್‌

ಇತ್ತ ಜಯಂತ್‌ ಗೆಳೆಯ ಸಚಿನ್‌ಗೆ ಅವನ ಎಲ್ಲಾ ಕಳ್ಳಾಟಗಳು ತಿಳಿದುಹೋಗುತ್ತದೆ. ನೀನು ಹಾಗೂ ಅರ್ಜುನ್‌ ಜೊತೆಗೆ ಇದ್ದವರು, ನೀನು ಅವನ ತಂಗಿಯನ್ನೇ ಮದುವೆ ಆಗಿ, ಅವರ ಬಳಿ ಎಲ್ಲಾ ವಿಚಾರವನ್ನೂ ಮುಚ್ಚಿಟ್ಟಿದ್ದೀಯ, ನೀನೇ ಅರ್ಜುನ್‌ ಸ್ನೇಹಿತ ಎಂದು ಹೇಳಿಬಿಡು ಎಂದು ಹೇಳುತ್ತಾನೆ. ಆದರೆ ಜಯಂತ್‌ಗೆ ಮಾತ್ರ ನಿಜ ಹೇಳಲು ಮನಸ್ಸು ಬರುವುದಿಲ್ಲ, ಎಲ್ಲಾ ವಿಚಾರ ಕೇಳಿ ಜಾನು ನನ್ನ ಬಿಟ್ಟು ಹೋದರೆ ಕಷ್ಟ ಎಂದು ಭಯಪಡುತ್ತಾನೆ. ಹೇಗಾದರೂ ಮಾಡಿ ಸಚಿನ್‌ನನ್ನು ಇಲ್ಲಿಂದ ಕಳಿಸಬೇಕೆಂದು ಜಾನುಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಮಲಗುವಂತೆ ಮಾಡುತ್ತಾನೆ. ಅಜ್ಜಿ ಹಾಲ್‌ನಲ್ಲಿ ಒಬ್ಬರೇ ಇರುವುದನ್ನು ನೋಡಿ, ಸಚಿನ್‌ಗೆ ಹೆದರಿಸಿ ಅವನು ಅಲ್ಲಿಂದ ವಾಪಸ್‌ ಹೋಗುವಂತೆ ಬೆದರಿಸುತ್ತಾನೆ. ಜಯಂತ್‌ ಮತ್ತೊಂದು ಮುಖ ನೋಡಿದ ಸಚಿನ್‌ ಹೆದರಿ ಅಲ್ಲಿಂದ ಹೋಗುತ್ತಾನೆ. ಒಂದಲ್ಲಾ ಒಂದು ದಿನ ಸತ್ಯ ಹೊರಗೆ ಬಂದು ಜಾನು ಖಂಡಿತ ನಿನ್ನನ್ನು ಬಿಟ್ಟು ಹೋಗುತ್ತಾಳೆ ನೋಡುತ್ತಿರು ಎಂದು ಸಚಿನ್‌ ಬೇಸರದಿಂದ ಹೇಳಿ ತನ್ನ ಲಗ್ಗೇಜ್‌ ಜೊತೆ ಹೊರಡುತ್ತಾನೆ.

ಭಾವನಾ ದೂರು ಕೊಟ್ಟಿರುವುದು ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ ಬಗ್ಗೆ ಅನ್ನೋ ಸತ್ಯ ಸಿದ್ದೇಗೌಡನಿಗೆ ತಿಳಿಯುತ್ತಾ? ಜಯಂತ್‌, ಸಚಿನ್‌ನನ್ನು ಬೆದರಿಸಿ ಕಳಿಸಿದ್ದು ಅಜ್ಜಿಗೆ ಗೊತ್ತಾಗುತ್ತಾ? ಸೋಮವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner