ಜವರೇಗೌಡ ಇಲ್ಲದ ಸಮಯದಲ್ಲಿ ಭಾವನಾಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸಿದ ರೇಣುಕಾ; ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 4ರ ಎಪಿಸೋಡ್‌ನಲ್ಲಿ ಜವರೇಗೌಡ ಇಲ್ಲದ ಸಮಯದಲ್ಲಿ ರೇಣುಕಾ, ಸೊಸೆ ಭಾವನಾಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಾಳೆ. ಜವರೇಗೌಡ ಕರೆ ಮಾಡಿ ನಾನು ಬರುವರೆಗೂ ಸುಮ್ಮನಿರು ಎಂದು ಮನವಿ ಮಾಡುತ್ತಾನೆ.
Lakshmi Nivasa Serial: ಭಾವನಾ ಅಮ್ಮನ ಮನೆಗೆ ಬಂದ ಸೌಪರ್ಣಿಕಾ, ಖುಷಿಯನ್ನು ತನ್ನೊಂದಿಗೆ ಕರೆದೊಯ್ಯುತ್ತಾಳೆ. ಆದರೆ ಖುಷಿ ಸೌಪರ್ಣಿಕಾ ಜೊತೆ ಇರಲು ಇಷ್ಟಪಡುವುದಿಲ್ಲ. ವಿಚಾರ ತಿಳಿದ ಭಾವನಾಗೆ ಖುಷಿಯನ್ನು ನೋಡಬೇಕೆನಿಸುತ್ತದೆ. ಸಿದ್ದು ಕೂಡಾ ಭಾವನಾ ಜೊತೆ ಸೌಪರ್ಣಿಕಾ ಮನೆಗೆ ಬರುತ್ತಾನೆ. ಖುಷಿಯನ್ನು ತಮ್ಮೊಂದಿಗೆ ಕಳಿಸಿಕೊಂಡುವಂತೆ ಹೇಳುತ್ತಾನೆ. ಸಿದ್ದು ಜೊತೆ ಈಗ ಜಗಳ ಮಾಡುವುದು ಸರಿ ಅಲ್ಲ ಎನಿಸಿದ ಸೌಪರ್ಣಿಕಾ, ಖುಷಿಯನ್ನು ಮತ್ತೆ ಭಾವನಾ ಜೊತೆ ಕಳಿಸಲು ಒಪ್ಪುತ್ತಾಳೆ.
ಖುಷಿಯನ್ನು ಸೌಪರ್ಣಿಕಾ ಮನೆಯಿಂದ ವಾಪಸ್ ಕರೆ ತಂದ ಸಿದ್ದು
ಖುಷಿ ಮತ್ತೆ ಮನೆಗೆ ವಾಪಸ್ ಆಗಿದ್ದಕ್ಕೆ ಲಕ್ಷ್ಮೀ ಸಂತೋಷ ವ್ಯಕ್ತಪಡಿಸುತ್ತಾಳೆ. ತವರು ಮನೆಯಲ್ಲಿ 2 ದಿನ ಇರಬೇಕೆಂದು ಭಾವನಾ ಹಂಬಲಿಸುತ್ತಾಳೆ. ನೀನು ಇಲ್ಲಿ ಇದ್ದು ಹೋದರೆ ಖುಷಿಯನ್ನು ಸಮಾಧಾನ ಮಾಡುವುದು ಕಷ್ಟವಾಗುತ್ತದೆ. ಅಷ್ಟಕ್ಕೂ ನೀನು ಇಲ್ಲಿ ಇರುವುದು, ಬಿಡುವುದು ನಿನ್ನ ಗಂಡನ ಅನುಮತಿ ಮೇಲೆ ಬಿಟ್ಟಿದ್ದು ಎಂದು ಲಕ್ಷ್ಮೀ , ಮಗಳಿಗೆ ಬುದ್ಧಿ ಹೇಳುತ್ತಾಳೆ. ಸಿದ್ದುಗೆ ಭಾವನಾ ಇಲ್ಲಿ ಇರುವುದು ಇಷ್ಟವಿಲ್ಲವೆಂದು ತಿಳಿದು, ನೀನು ಈಗ ತಾನೇ ಆ ಮನೆಗೆ ಹೋಗಿದ್ದೀಯ, ಸ್ವಲ್ಪ ದಿನಗಳ ಕಾಲ ಅಲ್ಲಿ ಅಡ್ಜೆಸ್ಟ್ ಆಗು, ನಂತರ ಇಲ್ಲಿ ಬಂದು ಉಳಿದುಕೊಳ್ಳಬಹುದು ಎಂದು ಶೀನಿವಾಸ್, ಮಗಳಿಗೆ ತಿಳಿ ಹೇಳುತ್ತಾಳೆ. ಭಾವನಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಗಂಡನ ಮನೆಗೆ ವಾಪಸ್ ಆಗುತ್ತಾಳೆ.
ಸಿದ್ದು, ಭಾವನಾಳನ್ನು ನೋಡುತ್ತಿದ್ದಂತೆ ರೇಣುಕಾ ಕೋಪಗೊಳ್ಳುತ್ತಾಳೆ. ಇಂದು ಎರಡರಲ್ಲಿ ಒಂದು ನಿರ್ಧಾರವಾಗಬೇಕು, ಇವಳು ಬಂದಾಗಿನಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲ. ನನ್ನ ಮಗಳು ಗಂಡನ ಜೊತೆ ಜಗಳ ಮಾಡಿಕೊಂಡು ಬಂದಿದ್ದಾಳೆ. ಇವಳಿಂದ ಯಾರಿಗೂ ನೆಮ್ಮದಿ ಇಲ್ಲ, ಇವತ್ತೇ ಇವಳು ಮನೆಯಿಂದ ಹೊರ ಹೋಗಬೇಕು , ಇಲ್ಲವಾದರೆ ಸಿದ್ದು ಕೂಡಾ ಮನೆ ಬಿಟ್ಟು ಹೋಗಬೇಕು ಎನ್ನುತ್ತಾಳೆ. ಅಮ್ಮನ ವರ್ತನೆ ಕಂಡ ಸಿದ್ದುಗೆ ಬೇಸರವಾಗುತ್ತದೆ. ಎಲ್ಲದಕ್ಕೂ ಇವರನ್ನು ಬೈಯ್ಯಬೇಡಿ, ಸಿಂಚನಾ, ಗಂಡನ ಮನೆಗೆ ಹೋಗಿದ್ದಾಳೆ. ಅವಳಿಗೆ ಗಂಡನ ಬೆಲೆ ಏನೆಂದು ಅರ್ಥವಾಗಿದೆ, ಇನ್ನುಮುಂದೆ ಅವಳು ಗಂಡನ ಮನೆಯಲ್ಲೇ ಇರುತ್ತಾಳೆ ಎನ್ನುತ್ತಾನೆ. ಆದರೂ ರೇಣುಕಾ ಮಾತ್ರ ಭಾವನಾಗೆ ಇಲ್ಲಿ ಇರುವುದು ಇಷ್ಟವಾಗುವುದಿಲ್ಲ.
ಭಾವನಾಳನ್ನು ಮನೆಯಿಂದ ಹೊರ ಕಳಿಸಲು ರೇಣುಕಾ ಪ್ಲ್ಯಾನ್
ತಾಯಿ ವರ್ತನೆಗೆ ಮರೀಗೌಡ ಕೂಡಾ ವಿರೋಧ ವ್ಯಕ್ತಪಡಿಸುತ್ತಾನೆ. ಅಪ್ಪನೇ ಭಾವನಾಳನ್ನು ಮನೆಯಲ್ಲಿ ಇರಲು ಹೇಳಿದ್ದಾರೆ. ಅವರು ಇಲ್ಲದ ಸಮಯದಲ್ಲಿ ಏನೂ ನಿರ್ಧಾರ ತೆಗೆದುಕೊಳ್ಳುವುದು ಬೇಡ, ಅವರೊಂದಿಗೆ ಮಾತನಾಡುತ್ತೇನೆ ಎಂದು ಜವರೇಗೌಡನಿಗೆ ಕರೆ ಮಾಡುತ್ತಾನೆ. ನಾನು ಇಲ್ಲದ ಸಮಯದಲ್ಲಿ ನೀನು ಮನಸ್ಸಿಗೆ ಬಂದ ನಿರ್ಧಾರ ತೆಗೆದುಕೊಳ್ಳುವುದು ಬೇಡ, ನಾನು ಇಲ್ಲಿ ಯಾವುದೇ ವಿಚಾರಕ್ಕೆ ಬಹಳ ಟೆನ್ಷನ್ ಆಗಿದ್ದೇನೆ. ದಯವಿಟ್ಟು ಸುಮ್ಮನಿರು ಎಂದು ಜವರೇಗೌಡ, ಹೆಂಡತಿ ರೇಣುಕಾ ಬಳಿ ಮನವಿ ಮಾಡುತ್ತಾನೆ. ಗಂಡನ ಮಾತು ಕೇಳಿ ರೇಣುಕಾ ಸುಮ್ಮನಾಗುತ್ತಾಳೆ. ಸಿದ್ದು , ಭಾವನಾ ರೂಮ್ ಒಳಗೆ ಹೋಗುತ್ತಾರೆ.
ಜವರೇಗೌಡ ಮಾತನ್ನು ರೇಣುಕಾ ಒಪ್ಪಿಕೊಳ್ಳುತ್ತಾಳಾ? ಅಥವಾ ಅಮ್ಮನ ಮಾತಿಗೆ ಬೇಸರಗೊಂಡು ಸಿದ್ದು, ಹೆಂಡತಿಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗುತ್ತಾನಾ? ಕಾದು ನೋಡಬೇಕು.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ವಿಭಾಗ