ಜಾಹ್ನವಿ ನೋಡಲು ಹಂಬಲಿಸಿದ ಅಜ್ಜಿ, ತವರು ಮನೆಯವರನ್ನು ಕರೆಸದೆ ತಾನೇ ಹೆಂಡತಿ ಸೇವೆ ಮಾಡುತ್ತಿರುವ ಜಯಂತ್; ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 5ರ ಎಪಿಸೋಡ್‌ನಲ್ಲಿ ಹೆಂಡತಿ, ತವರು ಮನೆಯವರನ್ನು ನೆನಪಿಸಿಕೊಳ್ಳಲೇಬಾರದು ಎಂಬ ಉದ್ದೇಶದಿಂದ ಜಯಂತ್ ಅವಳ ಸೇವೆ ಮಾಡುತ್ತಿದ್ದಾನೆ. ಮತ್ತೊಂದೆಡೆ ಆಕೆಯ ಅಜ್ಜಿ, ಮೊಮ್ಮಗಳನ್ನು ನೋಡಲೇಬೇಕೆಂದು ಹಟ ಹಿಡಿದು ಕುಳಿತಿದ್ದಾರೆ.
Lakshmi Nivasa Serial: ಜಾಹ್ನವಿ ತಾಯಿ ಆಗಿದ್ದಾಳೆ. ನಾವು ಅಪ್ಪ-ಅಮ್ಮ ಆಗುತ್ತಿದ್ದೇವೆ ಎಂದು ಜಯಂತ್ ಆರಂಭದಲ್ಲಿ ಖುಷಿ ವ್ಯಕ್ತಪಡಿಸಿದರೂ ನಂತರ ನಮ್ಮಿಬ್ಬರ ಪ್ರೀತಿಗೆ ಈ ಮಗು ಅಡ್ಡಿ ಬರುತ್ತದೆ, ಆದ್ದರಿಂದ ಈ ಮಗು ನಮಗೆ ಬೇಡ ಎಂದು ಜಯಂತ್ ಜಾಹ್ನವಿಗೆ ಹೇಳುತ್ತಾನೆ. ಆದರೆ ಗಂಡನ ಮಾತುಗಳಿಗೆ ಜಾಹ್ನವಿ ಬೇಸರ ವ್ಯಕ್ತಪಡಿಸುತ್ತಾಳೆ. ಹೆಂಡತಿ ಅಳಬಾರದು ಎಂಬ ಕಾರಣಕ್ಕೆ ಜಯಂತ್, ಮಗುವನ್ನು ಉಳಿಸಿಕೊಳ್ಳೋಣ ಎನ್ನುತ್ತಾನೆ, ಇದರಿಂದ ಜಾಹ್ನವಿ ಖುಷಿಯಾಗುತ್ತಾಳೆ.
ಮೊಮ್ಮಗಳನ್ನು ನೋಡಲು ಕಾಯುತ್ತಿರುವ ಜಾಹ್ನವಿ ಅಜ್ಜಿ
ಜಾಹ್ನವಿ ಗರ್ಭಿಣಿ ಆಗಿರುವ ವಿಚಾರ ತವರು ಮನೆಯವರಿಗೆ ತಿಳಿದಿದೆ. ಅಜ್ಜಿಯಂತೂ ಮೊಮ್ಮಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಒಬ್ಬರೇ ಮೊಮ್ಮಗಳ ಮನೆಗೆ ಹೋಗಲು ಸಾಧ್ಯವಿಲ್ಲ, ಒಮ್ಮೆ ಮೊಮ್ಮಗಳನ್ನು ನೋಡಿ ಬರೋಣ ಎಂದು ಲಕ್ಷ್ಮೀ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ಅಳಿಯಂದಿರಿಗೆ ಹೇಳದೆ ಕೇಳದೆ ಹೋಗುವುದು ಸರಿ ಅಲ್ಲ, ಜಾಹ್ನವಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಜಯಂತ್ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿ ಜಾಹ್ನವಿಯನ್ನು ಕಣ್ಣ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದಾರೆ, ಈ ಸಮಯದಲ್ಲಿ ನಾವು ಅಲ್ಲಿ ಹೋಗುವುದು ಸರಿಯಲ್ಲ. ಸ್ವಲ್ಪ ದಿನ ಬಿಟ್ಟು ಹೋಗೋಣ ಎಂದು ಸಮಾಧಾನ ಮಾಡುತ್ತಾಳೆ.
ತವರು ಮನೆಯವರನ್ನು ನೆನಪಿಸಿಕೊಳ್ಳದಂತೆ ಹೆಂಡತಿ ಸೇವೆ ಮಾಡುತ್ತಿರುವ ಜಯಂತ್
ಜಯಂತ್ ಕೂಡಾ ಹೆಂಡತಿಯನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಾನೆ, ಸಮಯಕ್ಕೆ ಸರಿಯಾಗಿ ಔಷಧ, ಹಾಲು , ಹಣ್ಣು ಕೊಡುತ್ತಿದ್ದಾನೆ. ಹೆಂಡತಿ , ಮಲಗಿದ್ದ ಕಡೆಯಿಂದ ಇಳಿಯದಂತೆ ಕೇರ್ ಮಾಡುತ್ತಿದ್ದಾನೆ. ಹೆಂಡತಿ ಚೆನ್ನಾಗಿರಬೇಕು ಅನ್ನೋದು ಒಂದು ಕಾಳಜಿ ಆದರೆ, ಅವಳು ತವರು ಮನೆಯವರನ್ನು ನೆನಪಿಸಿಕೊಳ್ಳಲೇಬಾರದು ಎಂಬ ಸ್ವಾರ್ಥ ಮತ್ತೊಂದು ಕಡೆ. ಆದರೆ ಜಾಹ್ನವಿಗೆ ಮಾತ್ರ ಅಮ್ಮ ಹಾಗೂ ತವರು ಮನೆಯವರು ಬಹಳ ನೆನಪಾಗುತ್ತಿದ್ದಾರೆ. ಅಮ್ಮ ಒಂದೆರಡು ದಿನ ತನ್ನ ಜೊತೆ ಇದ್ದಿದ್ದರೆ ಚೆನ್ನಾಗಿರುತ್ತೆ ಎಂದುಕೊಳ್ಳುತ್ತಾಳೆ. ನಿನ್ನೆ ನಾನು ತಲೆ ತಿರುಗಿ ಬಿದ್ದಾಗ ನೀವು ಮನೆಯಲ್ಲಿ ಇದ್ದಿದ್ದಕ್ಕೆ ಸರಿಯಾಯ್ತು. ಆದರೆ ನೀವು ಹೊರಗೆ ಹೋದಾಗ ಏನಾದರೂ ಆ ರೀತಿ ಆದರೆ ಏನು ಮಾಡುವುದು? ಆದ್ದರಿಂದ ನಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ಜಾಹ್ನವಿ, ಜಯಂತ್ ಬಳಿ ಮನವಿ ಮಾಡುತ್ತಾಳೆ. ಆದರೆ ಜಯಂತ್ ಮಾತ್ರ ಜಾಹ್ನವಿ ಬಳಿ ಇಲ್ಲದನ್ನು ಮಾತನಾಡಿ, ಮಾತು ಮರೆಸುತ್ತಾನೆ.
ಸಿದ್ದುಗೆ ಥ್ಯಾಂಕ್ಸ್ ಹೇಳಿದ ಭಾವನಾ
ಮತ್ತೊಂದೆಡೆ ಸೌಪರ್ಣಿಕಾ ಮನೆಯಿಂದ ಖುಷಿಯನ್ನು ಕರೆ ತಂದಿದ್ದಕ್ಕೆ ಭಾವನಾ, ಸಿದ್ದೇಗೌಡನಿಗೆ ಥ್ಯಾಂಕ್ಸ್ ಹೇಳುತ್ತಾಳೆ. ನಮ್ಮ ನಡುವೆ ಪ್ರೀತಿ ಇರಬೇಕೇ ಹೊರತು ಥ್ಯಾಂಕ್ಸ್ ಅಲ್ಲ ಎಂದು ಸಿದ್ದೇಗೌಡ ನಾಚುತ್ತಾ ಹೇಳುತ್ತಾನೆ. ಜವರೇಗೌಡ ಹೊರಗಿನಿಂದ ಮನೆಗೆ ಬರುತ್ತಾನೆ. ಗಂಡ ಬರುತ್ತಿದ್ದಂತೆ ರೇಣುಕಾ ಮಗಳು, ಗಂಡನ ಮನೆಗೆ ವಾಪಸ್ ಹೋಗಿದ್ದನ್ನು ಹೇಳುತ್ತಾಳೆ. ಅಲ್ಲಿ ಇರಲು ಇಷ್ಟವಿಲ್ಲ ಅಂತ ಇಷ್ಟು ದಿನ ಇಲ್ಲಿ ಇದ್ದಳು, ಈಗ ಅವಳು ಗಂಡನ ಮನೆಗೆ ಹೋಗುವೆ ಎಂದರೆ ಏಕೆ ತಡೆಯಬೇಕು? ಅವಳು ಅಲ್ಲಿ ಖುಷಿಯಾಗಿರುತ್ತಾಳೆ ಎಂದರೆ ಇರಲಿ ಬಿಡು ಎನ್ನುತ್ತಾನೆ. ಜವರೇಗೌಡನ ಮಾತು ಕೇಳಿ ರೇಣುಕಾ ಏನಾದರೂ ಮಾಡಿಕೊಳ್ಳಿ, ನನ್ನ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಬೇಸರಗೊಳ್ಳುತ್ತಾಳೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ವಿಭಾಗ