ಮೊಮ್ಮಗಳ ಮುಂದೆ ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದ ಅಜ್ಜಿ ಕತ್ತು ಹಿಸುಕಿದ ಜಯಂತ್‌: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮೊಮ್ಮಗಳ ಮುಂದೆ ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದ ಅಜ್ಜಿ ಕತ್ತು ಹಿಸುಕಿದ ಜಯಂತ್‌: ಲಕ್ಷ್ಮೀ ನಿವಾಸ ಧಾರಾವಾಹಿ

ಮೊಮ್ಮಗಳ ಮುಂದೆ ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದ ಅಜ್ಜಿ ಕತ್ತು ಹಿಸುಕಿದ ಜಯಂತ್‌: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 6ರ ಎಪಿಸೋಡ್‌ನಲ್ಲಿ ಜಯಂತ್‌ ತನ್ನ ಸ್ನೇಹಿತ ಸಚಿನ್‌ನನ್ನು ಹೆದರಿಸಿ ಮನೆಯಿಂದ ಕಳಿಸುತ್ತಾನೆ, ವೆಂಕಿ ಹುಡುಕುತ್ತಿರುವ ಸ್ನೇಹಿತ, ಜಯಂತ್‌ ಎಂಬ ವಿಚಾರ ಅಜ್ಜಿಗೆ ತಿಳಿಯುತ್ತದೆ. ಅಜ್ಜಿಯನ್ನು ಜಯಂತ್‌ ಕತ್ತು ಹಿಸುಕಿ ಸಾಯಿಸುವ ಪ್ರಯತ್ನ ಮಾಡುತ್ತಾನೆ.

 ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 6ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 6ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಬಹಳ ವರ್ಷಗಳ ನಂತರ ತನ್ನನ್ನು ನೋಡಲು ಬಂದ ಸ್ನೇಹಿತ ಸಚಿನ್‌ ಮನೆಯಲ್ಲಿರುವುದು ಜಯಂತ್‌ಗೆ ಇಷ್ಟವಾಗುವುದಿಲ್ಲ. ಅವನನ್ನು ಹೇಗಾದರೂ ಮಾಡಿ ಹೊರಗೆ ಕಳಿಸಲು ಜಯಂತ್‌ ಸಮಯ ನೋಡುತ್ತಿರುತ್ತಾನೆ, ಅಷ್ಟರಲ್ಲಿ ಸಚಿನ್‌ಗೆ ಜಯಂತ್‌ ಎಲ್ಲಾ ವಿಚಾರವನ್ನೂ ಮುಚ್ಚಿಟ್ಟಿರುವ ವಿಚಾರ ತಿಳಿದುಬಿಡುತ್ತದೆ. ನಾನೇ ನಿನ್ನ ವಿಚಾರವನ್ನು ಜಾಹ್ನವಿ ಬಳಿ ಹೇಳುವೆ ಎಂದು ಸಚಿನ್‌ ಹೇಳುತ್ತಾನೆ.

ಜಯಂತ್‌ ಅಸಲಿ ಮುಖ ಅಜ್ಜಿ ಮುಂದೆ ಬಯಲು

ಸಚಿನ್‌ ಒಂದು ವೇಳೆ ಜಾಹ್ನವಿಗೆ ಎಲ್ಲವನ್ನೂ ಹೇಳಿದರೆ ಜಾನು ನನ್ನನ್ನು ಬಿಟ್ಟು ಹೋಗಬಹುದು, ನಾನು ಅವಳನ್ನು ಬಹಳ ಪ್ರೀತಿಸುತ್ತಿದ್ದೇನೆ, ಈ ವಿಚಾರ ಜಾನುಗೆ ಯಾವ ಕಾರಣಕ್ಕೂ ತಿಳಿಯಬಾರದು, ಹಾಗೆ ಗೊತ್ತಾಗಬಾರದು ಎಂದರೆ ಸಚಿನ್‌ ಇಲ್ಲಿಂದ ಹೋಗಬೇಕು, ಅದಕ್ಕಾಗಿ ಏನಾದರೂ ಪ್ಲ್ಯಾನ್‌ ಮಾಡಬೇಕೆಂದು ಜಾಹ್ನವಿಗೆ ನಿದ್ರೆ ಮಾತ್ರೆ ಹಾಕಿದ ಹಾಲು ನೀಡುತ್ತಾನೆ. ಅದನ್ನು ಕುಡಿಯುತ್ತಿದ್ದಂತೆ ಜಾನು ಮಲಗುತ್ತಾಳೆ. ಅಜ್ಜಿಗೆ ಏನೂ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಹಾಲ್‌ನಲ್ಲಿ ಬಿಟ್ಟು ಸಚಿನ್‌ ಬಳಿ ಬರುತ್ತಾನೆ.

ಏಕೆ ಇಷ್ಟೆಲ್ಲಾ ನಾಟಕ ಮಾಡುತ್ತಿರುವೆ, ಎಲ್ಲಾ ವಿಚಾರವನ್ನೂ ಜಾನು ಬಳಿ ಹೇಳಿಕೋ, ನಿನ್ನನ್ನು ನಂಬಿರುವ ಜಾಹ್ನವಿಗೆ ಮೋಸ ಮಾಡಬೇಡ, ವೆಂಕಿ ತಂಗಿಯನ್ನೇ ಮದುವೆ ಆಗಿ, ಅವನು ಯಾರು ಎಂದು ಗೊತ್ತಿಲ್ಲದಂತೆ ನಾಟಕ ಮಾಡುತ್ತಿದ್ದೀಯ ಎಂದು ಸಚಿನ್‌, ತನ್ನ ಗೆಳೆಯನಿಗೆ ಬುದ್ಧಿ ಹೇಳುತ್ತಾನೆ, ಆದರೆ ಜಯಂತ್‌ ಅದನ್ನು ಕೇಳಲು ತಯಾರಿಲ್ಲ. ಸಚಿನ್‌ಗೆ ಹೊಡೆದು, ನೀನು ನಿಜ ಹೇಳಿದರೆ ಸುಮ್ಮನಿರುವುದಿಲ್ಲ ಎಂದು ಹೆದರಿಸುತ್ತಾನೆ. ಒಂದಲ್ಲಾ ಒಂದು ದಿನ ಖಂಡಿತ ಸತ್ಯ ಹೊರಗೆ ಬರುತ್ತದೆ ನೋಡುತ್ತಿರು ಎಂದು ಸಚಿನ್ ಲಗ್ಗೇಜ್‌ ತೆಗೆದುಕೊಂಡು ಅಲ್ಲಿಂದ ಹೊರಡುತ್ತಾನೆ.

ಅಜ್ಜಿ ಕತ್ತು ಹಿಸುಕಿದ ಜಯಂತ್‌

ಒಳಗೆ ಕುಳಿತಿರುವ ಅಜ್ಜಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ, ನೀನು ಒಳ್ಳೆಯವರು ಎಂದು ಎಲ್ಲರೂ ನಂಬಿದ್ದೆವು, ಇಷ್ಟು ದಿನ ನೀನು ಮುಖವಾಡ ಹಾಕಿ ಬದುಕುತ್ತಿದ್ದೀಯ, ನಿನ್ನ ವಿಚಾರವನ್ನು ಮೊಮ್ಮಗಳಿಗೆ ಹೇಳುತ್ತೇನೆ ಎಂದು ಅಜ್ಜಿ ಹೇಳುತ್ತಾರೆ, ಇದರಿಂದ ಜಯಂತ್‌ಗೆ ಭಯವಾಗುತ್ತದೆ, ಅಜ್ಜಿ ಈ ವಿಚಾರವನ್ನು ಜಾನುಗೆ ಹೇಳಿದರೆ ಅವರು ನನ್ನನ್ನು ಬಿಟ್ಟು ಹೋಗುತ್ತಾರೆ ಎಂದು ಭಯಗೊಂಡು ಅಜ್ಜಿಯ ಕತ್ತು ಹಿಸುಕುತ್ತಾನೆ, ಅಜ್ಜಿ ಪ್ರಜ್ಞೆ ತಪ್ಪಿ ಬೀಳುತ್ತಾರೆ, ಮತ್ತೆ ಜಯಂತ್‌ ದಿಂಬಿನಿಂದ ಅಜ್ಜಿ ಉಸಿರುಗಟ್ಟಿಸಲು ಪ್ರಯತ್ನಿಸುತ್ತಾನೆ, ಆದರೆ ಹಿಂಜರಿಯುತ್ತಾನೆ, ತಲೆಗೆ ಪೆಟ್ಟು ಬಿದ್ದು ಹೀಗೆ ಆಗಿದೆ ಎಂದು ಎಲ್ಲರೂ ಅಂದುಕೊಳ್ಳುವಂತೆ ಆಗಲಿ ಎಂದು ಮೆಲ್ಲಗೆ ಹೋಗಿ ಮಲಗುತ್ತಾನೆ.

ಬೆಳಗ್ಗೆ ಜಾಹ್ನವಿ ಅಜ್ಜಿ ಪರಿಸ್ಥಿತಿ ನೋಡಿ ಗಾಬರಿಯಾಗುತ್ತಾಳೆ. ಜಯಂತ್‌ ತನಗೆ ಏನೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಾನೆ. ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸುತ್ತಾನೆ. ವಿಚಾರ ಶ್ರೀನಿವಾಸ್‌, ಭಾವನಾ ಎಲ್ಲರಿಗೂ ತಿಳಿಯುತ್ತದೆ, ಎಲ್ಲರೂ ಆಸ್ಪತ್ರೆಗೆ ಬರುತ್ತಾರೆ. ಅಜ್ಜಿಗೆ ಪ್ರಜ್ಞೆ ಬರುವುದಾ? ಜಯಂತ್‌ ಅಸಲಿ ಮುಖ ಬಯಲಾಗುವುದಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner