ತುಮಕೂರು ಹುಡುಗಿ, ಮಲೆನಾಡು ಹುಡುಗ; ಲಕ್ಷ್ಮೀ ನಿವಾಸ ಸೀರಿಯಲ್ ಚಂದನಾ ಅನಂತಕೃಷ್ಣ- ಪ್ರತ್ಯಕ್ಷ್ ಕಲ್ಯಾಣ
Chandana Ananthakrishna Wedding: ಲಕ್ಷ್ಮೀ ನಿವಾಸ ಧಾರಾವಾಹಿಯ ಜಾಹ್ನವಿ ಅಲಿಯಾಸ್ ಚಂದನಾ ಅನಂತಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉದ್ಯಮಿ ಪ್ರತ್ಯಕ್ಷ್ ಜತೆಗೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಮದುವೆಗೆ, ಗಣ್ಯರು, ಸಿನಿಮಾ ರಂಗದ ಆಪ್ತರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
Chandana Ananthkrishna wedding: ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗಮನ ಸೆಳೆದಿರುವ ಚಂದನಾ ಅನಂತಕೃಷ್ಣ ಇದೀಗ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ನಟಿ ಉದ್ಯಮಿ ಪ್ರತ್ಯಕ್ಷ್ ಅವರ ಕೈ ಹಿಡಿದಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಈ ಜೋಡಿ ಸತಿ ಪತಿಗಳಾಗಿದ್ದಾರೆ. ಕಳೆದ ಮೂರು ದಿನಗಳಿಂದ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಬಳೆ ಶಾಸ್ತ್ರ, ಸಂಗೀತ್ ಶಾಸ್ತ್ರ ಸೇರಿ ಈ ಜೋಡಿಯ ಮದುವೆ ಪೂರ್ವ ಶಾಸ್ತ್ರಗಳೂ ಸಂಭ್ರಮದಿಂದ ನಡೆದಿದ್ದವು. ಈಗ ನ. 28ರ ಗುರುವಾರದಂದು ನಟ, ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ಲಲಿತಾಂಜಲಿ ಉದಯ್ ಅವರ ಪುತ್ರ ಪ್ರತ್ಯಕ್ಷ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ರಾಜಾ ರಾಣಿ ಸೀರಿಯಲ್‌ನಿಂದ ಶುರುವಾದ ಚಂದನಾ ಅನಂತಕೃಷ್ಣ ಅವರ ಜರ್ನಿ, ಅದಾದ ಬಳಿಕ ಹೂಮಳೆ, ಬಿಗ್ ಬಾಸ್, ಜೀ ಕನ್ನಡದ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿದ್ದರು. ಆ ಶೋ ಅರ್ಧಕ್ಕೆ ಮೊಟಕುಗೊಳಿಸಿ, ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದಲ್ಲಿಯೂ ಮಿಂಚುತ್ತಿದ್ದಾರೆ. ವೀಕ್ಷಕರ ಪ್ರೀತಿಯ ಜಾನುವಾಗಿ ಗಮನ ಸೆಳೆಯುತ್ತಿದ್ದಾರೆ.
ಆಪ್ತರಿಂದ ಶುಭ ಹಾರೈಕೆ
ಚಂದನಾ ಅವರ ಈ ಮದುವೆಗೆ ಲಕ್ಷ್ಮೀ ನಿವಾಸ ಸೀರಿಯಲ್ ಬಳಗ ಮಾತ್ರವಲ್ಲದೆ, ಈ ಹಿಂದಿನ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದವರು, ಬಿಗ್ ಬಾಸ್ ಆಪ್ತರು, ಒಟ್ಟಾರೆ ಬಣ್ಣದ ಲೋಕದ ಆಪ್ತ ಗೆಳೆಯರ ಬಳಗ ಈ ಮದುವೆಗೆ ಆಗಮಿಸಿ, ನವ ಜೋಡಿಗೆ ಹರಸಿ ಹಾರೈಸಿದೆ. ಅಂದಹಾಗೆ, ಇದು ಮನೆಯವರೇ ನಿಶ್ಚಯಿಸಿರುವ ಅರೇಂಜ್ಡ್ ಮದುವೆ, ಹಾಗಾಗಿ ಎರಡೂ ಕುಟುಂಬದ ಸಮ್ಮುಖದಲ್ಲಿ, ಆಶೀರ್ವಾದದೊಂದಿಗೆ ಪ್ರತ್ಯಕ್ಷ್ ಮತ್ತು ಚಂದನಾ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ಉದ್ಯಮಿ ಕೈ ಹಿಡಿದ ಚಂದನಾ
ಚಂದನಾ ಮೂಲತ ತುಮಕೂರಿನವರು. ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನಲ್ಲಿಯೇ ಮುಗಿಸಿ, ಆಳ್ವಾಸ್‌ನಲ್ಲಿ ಪದವಿ ಪಡೆದರು. ಅದಾದ ಬಳಿಕ ನಟನೆಯತ್ತ ಹೊರಳಿದರು. ಇತ್ತ ಪ್ರತ್ಯಕ್ಷ್, ಕನ್ನಡದ ಖ್ಯಾತ ನಟ ಉದಯ್ ಹುತ್ತಿನಗದ್ದೆ ಅವರ ಸುಪುತ್ರ. ಕನ್ನಡದಲ್ಲಿ ಶುಭ ಮಿಲನ, ಜಯಭೇರಿ, ಉದ್ಭವ, ಅಗ್ನಿಪರ್ವ ಸೇರಿ ಹಲವು ಸಿನಿಮಾಗಳಲ್ಲಿ ಉದಯ್ ನಟಿಸಿದ್ದಾರೆ. ಆದರೆ, ಅಪ್ಪನಂತೆ ಮಗ ಪ್ರತ್ಯಕ್ಷ್ ಸಿನಿಮಾರಂಗಕ್ಕೆ ಬರಲಿಲ್ಲ. ಮೂಲತಃ ಚಿಕ್ಕಮಗಳೂರಿನವರಾದ ಪ್ರತ್ಯಕ್ಷ್, ಕಾಫಿ ಎಸ್ಟೇಟ್ ಹೊಂದಿದ್ದಾರೆ. ಆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ನಗುವ ನಯನ ಹಾಡಿಗೆ ರೆಟ್ರೋ ರಂಗು
ಮದುವೆಯ ಜತೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿಯೂ ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಮಿಂಚಿದ್ದಾರೆ. ಲಾಲ್‌ಬಾಗ್, ಮಲ್ಲೇಶ್ವರಂ ಸೇರಿ ಹಲವೆಡೆ ಪಲ್ಲವಿ ಅನುಪಲ್ಲವಿ ಸಿನಿಮಾದ ನಗುವ ನಯನ ಮಧುರ ಮೌನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.ಬ