ನಮ್ಮ ಕತೆಯನ್ನು ಸಿನಿಮಾ ಮಾಡಿದ್ರೆ ಮೆನಿಫೆಸ್ಟೇಷನ್ ಅಂತ ಹೆಸರಿಡಿ: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸಾ ಮನೋಹರ್ ಸಂದರ್ಶನ
ಸಂದರ್ಶನ-ಪದ್ಮಶ್ರೀ ಭಟ್: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸಾ ಮನೋಹರ್ ಸಂದರ್ಶನದಲ್ಲಿ ತಮ್ಮ ದಾಂಪತ್ಯದ ಬಗ್ಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ. ನಮ್ಮ ಕತೆಯನ್ನು ಸಿನಿಮಾ ಮಾಡಿದ್ರೆ ಮೆನಿಫೆಸ್ಟೇಷನ್ ಅಂತ ಹೆಸರಬೇಕು ಎಂದಿದ್ದಾರೆ.
'ಜೊತೆ ಜೊತೆಯಲಿʼ ಹಾಗೂ ʼಲಕ್ಷ್ಮೀ ನಿವಾಸʼ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಅವರ ಪತಿ ಪ್ರೀತಂ ಅವರು ಫುಟ್‌ಬಾಲ್ ಅಕಾಡೆಮಿ ನಡೆಸುತ್ತಿದ್ದಾರೆ. ಅಂದಹಾಗೆ ಈ ದಂಪತಿ ನೀಡಿದ ಮೊದಲ ಸಂದರ್ಶನದಲ್ಲಿ ತಮ್ಮ ಇಷ್ಟ-ಕಷ್ಟದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ಫೈರ್ ಪ್ರಶ್ನೆಯಲ್ಲಿ ಮಾನಸಾ ಹಾಗೂ ಪ್ರೀತಂ ಅವರು ತಮ್ಮ ಸ್ವಭಾವ, ದೂರು ಮುಂತಾದ ವಿಷಯಗಳ ಬಗ್ಗೆ ‘ಪಂಚಮಿ ಟಾಕ್ಸ್ʼ ಯುಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಇವರಿಬ್ಬರ ಲವ್-ಮ್ಯಾರೇಜ್ ಕಥೆಯನ್ನು ಸಿನಿಮಾ ಮಾಡಿದ್ರೆ ’ಮ್ಯಾನಿಫೆಸ್ಟೇಶನ್ʼ ಎಂದು ಹೆಸರು ಇಡುತ್ತಾರಂತೆ.
ಪ್ರಶ್ನೆ: ಫಸ್ಟ್ ಗಿಫ್ಟ್ ಕೊಟ್ಟಿದ್ದು ಯಾರು?
ಪ್ರೀತಂ- ಮಾನಸಾ ಜನ್ಮದಿನದಂದು ಬ್ಯೂಟಿಫುಲ್ ಕಳಶ ಕೊಟ್ಟಿದ್ದರು. ಇದೇ ಥರ ಜೀವನ ಹಸನಾಗಿರಲಿ ಅಂತ ಹಾರೈಸಿದ್ದೆ.
ಮಾನಸಾ ಮನೋಹರ್: ವಿಶೇಷ ಏನೂ ಇಲ್ಲದೆ ಇದ್ರೂ ಪರ್ಫ್ಯೂಮ್ ಕೊಟ್ಟಿದ್ದೆ.
ಪ್ರಶ್ನೆ: ಹೊರಗಡೆ ಹೋಗಲು ತಯಾರಾಗಲು ಯಾರು ಹೆಚ್ಚು ಸಮಯ ತಗೊಳ್ತಾರೆ?
ಪ್ರೀತಂ: ಮದುವೆ ಗ್ರ್ಯಾಂಡ್ ಆಗಿತ್ತು. ಹೀಗಾಗಿ ಒಂದಷ್ಟು ಟೈಮ್ ತಗೊಂಡಿದ್ದರು. ಇನ್ನು ಮದುವೆಯಲ್ಲಿ ಮಾನಸಾ ಚೆನ್ನಾಗಿ ಕಾಣ್ತಿದ್ರು. ಯಾವಾಗಲೂ ಮಾನಸಾ ಜಾಸ್ತಿ ಟೈಮ್ ತಗೊಳ್ತಾರೆ.
ಪ್ರಶ್ನೆ: ಯಾರು ಜಾಸ್ತಿ ಸೀಕ್ರೇಟ್ ಮೆಂಟೇನ್ ಮಾಡ್ತಾರೆ?
ಪ್ರೀತಂ: ಯಾರೂ ಇಲ್ಲ
ಮಾನಸಾ ಮನೋಹರ್: ಯಾರೂ ಇಲ್ಲ. ಅಂದಿನ ವಿಷಯ ಅಂದೇ ಹೇಳಬೇಕು.
ಪ್ರಶ್ನೆ: ಐಡಿಯಲ್ ಡೇಟ್ ಹೇಳಿ
ಮಾನಸಾ ಮನೋಹರ್: ಟೈಮ್ ಸಿಗ್ತು ಅಂದ್ರೆ ಪ್ರೀತಂ ಅವರು ಇಡೀ ದಿನ ಅಕಾಡೆಮಿಯಲ್ಲಿ ಕಾಲ ಕಳೆಯುತ್ತಾರೆ. ಅವರಿಂದ ನನಗೂ ಫುಟ್‌ಬಾಲ್ ಮೇಲೆ ಆಸಕ್ತಿ ಬಂದಿದೆ. ನಾವು ಇನ್ನೂ ಡೇಟ್‌ಗೆ ಹೋಗಿಲ್ಲ, ಆದಷ್ಟು ಬೇಗ ಹೋಗಬೇಕು.
ಪ್ರಶ್ನೆ: ಇಬ್ಬರ ಒಳ್ಳೆಯ ಗುಣದ ಬಗ್ಗೆ ಹೇಳಿ
ಪ್ರೀತಂ: ಮಾನಸಾ ತುಂಬ ಜವಾಬ್ದಾರಿಯುತ ಹುಡುಗಿ. ಡೆಡಿಕೇಟೆಡ್
ಮಾನಸಾ ಮನೋಹರ್: ಪ್ರಾಣಿ-ಪಕ್ಷಿಗಳ ಮೇಲೆ ತುಂಬ ಕರುಣೆ, ಕಾಳಜಿ ಇದೆ.
ಪ್ರಶ್ನೆ: ವಿಚಿತ್ರ ಭಾವನೆ ಯಾವುದು?
ಪ್ರೀತಂ: ಮಾನಸಾಗೆ ಬಿಸಿ ಬಿಸಿ ಊಟ-ತಿಂಡಿ ಇಷ್ಟ ಆಗಲ್ಲ. ಯಾಕೆ ಹೀಗೆ ಅಂತ ನನಗೆ ಅರ್ಥ ಆಗಿಲ್ಲ.
ಮಾನಸಾ ಮನೋಹರ್: ನನಗೆ ಬಿಸಿ ಅಡುಗೆ ಇಷ್ಟ ಆಗಲ್ಲ, ತಣ್ಣಗಾಗಬೇಕು. ನನ್ನ ಥರದವರು ಪ್ರಪಂಚದಲ್ಲಿ ಇನ್ನೂ ಕೆಲವರು ಇರಬಹುದು.
ಮಾನಸಾ ಮನೋಹರ್: ಪ್ರೀತಂ ನಾರ್ಮಲ್ ಆಗಿದ್ದಾರೆ.
ಪ್ರಶ್ನೆ: ಫೇವರಿಟ್ ಫುಡ್ ಯಾವುದು?
ಮಾನಸಾ ಮನೋಹರ್: ಪ್ರಾಣಿ ಸಂಬಂಧಿತ ಹಾಲು, ಮೊಸರು ಯಾವುದನ್ನೂ ಕೂಡ ಪ್ರೀತಂ ತಿನ್ನೋದಿಲ್ಲ. ಮೊದಲು ಇವರು ನಾನ್‌ವೆಜ್ ತಿನ್ನುತ್ತಿದ್ದರು, ಈಗ ತಿನ್ನೋದಿಲ್ಲ. ಇನ್ನು ನಮ್ಮ ಮದುವೆಯಲ್ಲಿ ಬಾಳೆಕಾಯಿ ಬಿರಿಯಾನಿ ಮಾಡಿಸಿದ್ದರು, ಅದಂತೂ ತುಂಬ ಚೆನ್ನಾಗಿತ್ತು.
ಪ್ರಶ್ನೆ: ಪರಸ್ಪರ ಬದಲಾಯಿಸಿಕೊಳ್ಳಬೇಕಾದ ಗುಣ ಯಾವುದು?
ಮಾನಸಾ ಮನೋಹರ್: ಇದಕ್ಕೆ ಇನ್ನೂ ಉತ್ತರ ಇಲ್ಲ. ನಮ್ಮಿಬ್ಬರಿಗೆ ನಾವು ಕೇಳಿದ್ದಕ್ಕಿಂತ ಜಾಸ್ತಿಯೇ ಸಿಕ್ಕಿದೆ.
ಪ್ರಶ್ನೆ: ನಿಮ್ಮ ಸಂಗಾತಿಯ ಬಗ್ಗೆ ದೂರು ಏನು?
ಪ್ರೀತಂ: ರೆಡಿಯಾಗೋಕೆ ಒಂದು ಗಂಟೆ ಬೇಕು ಅಂತಾರೆ, ಆದರೆ ಎರಡು ಗಂಟೆ ಮಾಡ್ತಾರೆ.
ಪ್ರಶ್ನೆ: ನಿಮ್ಮ ಜೀವನವನ್ನು ಯಾವುದಕ್ಕೆ ಹೋಲಿಸುತ್ತೀರಿ?
ಇಲ್ಲ. ನಮ್ಮ ಜೀವನ ಇಟ್ಕೊಂಡು ಹೊಸ ಸಿನಿಮಾ ಮಾಡಬೇಕು, ಅದಕ್ಕೆ ಮೆನಿಫೆಸ್ಟೇಷನ್ ಅಂತ ಹೆಸರು ಇಡಬೇಕು.
ಪ್ರಶ್ನೆ: ನಿಕ್ ನೇಮ್ ಏನು?
ಮಾನಸಾ ಮನೋಹರ್: ಬುಬ್ಬಾ ಅಂತ ಕರಿತೀನಿ
ಪ್ರೀತಂ: ಮುದ್ದು ಅಂತ ಕರಿತೀನಿ
ಪ್ರಶ್ನೆ: ಮುಂದಿನ ಪ್ಲ್ಯಾನ್ ಏನಿದೆ?
ಪ್ರೀತಂ: ಗುರಿ ಇಟ್ಕೊಂಡು ಕೆಲಸ ಮಾಡಬೇಕು, ಹನಿಮೂನ್ ಹೋಗಬೇಕು. ಬೇಗ ಮಗು ಮಾಡಿಕೊಳ್ಳಬೇಕು. ವರ್ಷದಲ್ಲಿ ಒಂದು ದಿನ ತಿರುಪತಿಗೆ ಹೋಗಬೇಕಿದೆ.
ಸಂದರ್ಶನ-ಪದ್ಮಶ್ರೀ ಭಟ್
ಇದನ್ನೂ ಓದಿ: Annayya Serial: ಪ್ರೀತಿ ವಿಚಾರವಾಗಿ ಮಾವನನ್ನು ಪ್ರಶ್ನೆ ಮಾಡಿದ ಪಾರು; ಉತ್ತರ ಕೊಡಲಾಗದೆ ತತ್ತರಿಸಿದ ಶಿವು