Lakshmi Nivasa Serial: ಟಾಪ್ ಟಿಆರ್‌ಪಿ ಪಡೆವ ಲಕ್ಷ್ಮೀ ನಿವಾಸ ಧಾರಾವಾಹಿಯಿಂದಲೇ ಹೊರಬಂದ್ರಾ ಖ್ಯಾತ ನಟ?
ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಯ ಐವರು ಮಕ್ಕಳಲ್ಲಿ ಮಂಗಳಾ ಸಹ ಒಬ್ಬಳು. ಮದುವೆಯಾಗಿ ಗಂಡನ ಮನೆ ಸೇರಿದರೂ, ಹೆತ್ತವರ ಬಳಿ ಬಂದು ಹಣ ಕೇಳುವಂಥ ಪಾತ್ರವದು. ಆ ಮಂಗಳಾ ಪಾತ್ರ ಗಂಡನಾಗಿ ನಟಿಸುತ್ತಿದ್ದ ವಿಶ್ವಾಸ್ ಭಾರದ್ವಾಜ್ ಸೀರಿಯಲ್‌ನಿಂದ ಹಿಂದೆ ಸರಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Lakshmi Nivasa Serial: ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಒಂದು ಗಂಟೆಯ ಮಹಾ ಮನರಂಜನೆ ನೀಡುವ ಬಹುತಾರಾಗಣದ, ಬಹು ಕಥೆಗಳುಳ್ಳ ಧಾರಾವಾಹಿ. ಹಲವು ಪದರಗಳಲ್ಲಿ ತೆರೆದುಕೊಂಡಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ, ಮಿಡಲ್ ಕ್ಲಾಸ್ ಮನಸ್ಥಿತಿಗಳ ಆರೇಳು ಕಥೆಗಳಿವೆ. ನಿತ್ಯ ವೀಕ್ಷಕರಿಗೆ ಬಗೆಬಗೆ ಟ್ವಿಸ್ಟ್ ನೀಡುತ್ತ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸುತ್ತ ಸಾಗುತ್ತಿದೆ ಈ ಸೀರಿಯಲ್. ಇದೀಗ ಟಿಆರ್‌ಪಿಯಲ್ಲಿಯೂ ಟಾಪ್‌ನಲ್ಲಿಯೇ ಸ್ಥಾನ ಪಡೆವ ಇದೇ ಧಾರಾವಾಹಿಯ ಪ್ರಮುಖ ಪಾತ್ರಧಾರಿಯೊಬ್ಬರು ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಸೀರಿಯಲ್ ಬಿಟ್ರಾ ವಿಶ್ವಾಸ್ ಭಾರದ್ವಾಜ್?
ಹೀಗೆ ಸಾಗುತ್ತಿರುವ ಸೀರಿಯಲ್‌ನಲ್ಲಿ ಇನ್ನೊಂದು ಪ್ರಮುಖ ಪಾತ್ರ ಕಾಣದೇ ಕಳೆದ ಕೆಲ ತಿಂಗಳುಗಳೇ ಕಳೆದಿವೆ. ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಯ ಐವರು ಮಕ್ಕಳಲ್ಲಿ ಮಂಗಳಾ ಸಹ ಒಬ್ಬಳು. ಮದುವೆಯಾಗಿ ಗಂಡನ ಮನೆ ಸೇರಿದರೂ, ಹೆತ್ತವರ ಬಳಿ ಬಂದು ಹಣ ಕೇಳುವಂಥ ಪಾತ್ರವದು. ಆ ಮಂಗಳಾ ಪಾತ್ರಕ್ಕೆ ಗಂಡನಾಗಿ ನಟಿಸಿದ್ದು ಕಿರುತೆರೆ ನಟ ವಿಶ್ವಾಸ್ ಭಾರದ್ವಾಜ್. ಕಾದಂಬರಿ ಸೀರಿಯಲ್‌ನಲ್ಲಿ ವಿನಯ್ ಪಾತ್ರದಲ್ಲಿ ನಟಿಸಿದ್ದ ವಿಶ್ವಾಸ್, ಈಗ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಆಚೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಇದೇ ಮೊದಲಲ್ಲ..
ಸೀರಿಯಲ್‌ಗಳಲ್ಲಿ ಪಾತ್ರಗಳು ಬದಲಾಗುವುದು ತೀರಾ ಸಹಜ. ಇತ್ತೀಚೆಗಷ್ಟೇ ಅಮೃತಧಾರೆ ಸೀರಿಯಲ್‌ನಲ್ಲಿನ ಮಹಿಮಾ ಮತ್ತು ಜೀವನ್ ಪಾತ್ರಗಳು ಬದಲಾಗಿದ್ದವು. ಮಹಿಮಾ ಪಾತ್ರದಲ್ಲಿ ಸಾರಾ ಅಣ್ಣಯ್ಯ, ಜೀವನ್ ಪಾತ್ರದಲ್ಲಿ ಶಶಿ ಹೆಗ್ಡೆ ನಟಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಅವರಿಬ್ಬರ ಬದಲು, ಬೇರೆ ಕಲಾವಿದರ ಆಗಮನವಾಗಿತ್ತು. ಈಗ ಅದೇ ರೀತಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈ ಹಿಂದೆ ಎರಡ್ಮೂರು ಪಾತ್ರಗಳು ಬದಲಾಗಿವೆ.
ಸೀರಿಯಲ್‌ನಲ್ಲಿ ಸದ್ಯ ಏನಾಗ್ತಿದೆ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹಣಕಾಸಿನ ವಿಚಾರವಾಗಿ ಅಣ್ಣತಮ್ಮಂದಿರ ನಡುವೆ ಕಲಹ ಏರ್ಪಟ್ಟಿದೆ. ಜಗಳ ವಿಕೋಪಕ್ಕೆ ಹೋಗಿ ಬಾಡಿಗೆ ಮನೆಯನ್ನೇ ಹರೀಶ್ ಮತ್ತು ಸಂತೋಷ್ ಇಬ್ಭಾಗ ಮಾಡಿದ್ದಾರೆ. ಮನೆಯ ಮಧ್ಯೆ ಲೈನ್ ಎಳೆದು, ಇದು ನಿನ್ನದು, ಇದು ನನ್ನದು ಎಂದು ಕಿತ್ತಾಡಿಕೊಂಡಿದ್ದಾರೆ. ಮಕ್ಕಳ ಈ ಜಗಳದಿಂದ ಬೇಸತ್ತು ಲಕ್ಷ್ಮೀ ಮತ್ತು ಶ್ರೀನಿವಾಸ್ ಇಬ್ಬರೂ ಕುಂಭ ಮೇಳಕ್ಕೆ ಹೋಗಿದ್ದಾರೆ. ಆ ದೇವರ ದರ್ಶನದಿಂದಾದರೂ ಮಕ್ಕಳು ಸರಿಯಾಗಲಿ ಅನ್ನೋ ವಿಚಾರ ಅವರದ್ದು. ಆದರೆ, ಇಲ್ಲಿ ಆಗುತ್ತಿರುವುದೇ ಬೇರೆ.
ಮನೆ ಇಬ್ಭಾಗ ಆಗಿರುವ ವಿಚಾರ ವೆಂಕಿಗೂ ಗೊತ್ತಾಗಿದೆ. ನೇರವಾಗಿ ಹರೀಶನ ಕೆನ್ನೆಗೆ ಬಾರಿಸಿದ್ದಾನೆ. ಹೊಟ್ಟೆ ಹಸಿಯಿತೆಂದು ಊಟ ಮಾಡುತ್ತಿದ್ದ ವೆಂಕಿಯ ತಟ್ಟೆಯನ್ನು ಕಸಿದುಕೊಂಡಿದ್ದಾನೆ, ಸಂತೋಷ್. ಇನ್ನೊಂದು ಬದಿಯಲ್ಲಿ ಜಯಂತ್ ಮತ್ತು ಜಾಹ್ನವಿ ನಡುವೆ ಪ್ರೇಮಿಗಳ ದಿನದ ಸಂಭ್ರಮ ಶುರುವಾಗಿದೆ. ಮನೆಯಲ್ಲಿ ಎಲ್ಲೆಂದರಲ್ಲಿ ಸಿಸಿಟಿವಿ ಇಟ್ಟಿದ್ದ ಪತಿ ಮೇಲೆ ಜಾನು ಮುನಿಸಿಕೊಂಡಿದ್ದಾಳೆ. ಆಕೆಯನ್ನು ಸಮಾಧಾನ ಪಡಿಸಲು ಜಾನುಗೆ ಸರ್ಪ್ರೈಸ್ ನೀಡಿದ್ದಾನೆ. ಹೂಗಳಿಂದಲೇ ಹೃದಯದ ಚಿತ್ರ ಬಿಡಿಸಿ, ಗುಲಾಬಿ ಹೂವಿನ ಗುಚ್ಛ ನೀಡಿ, ನನ್ನ ಬಾಳಿನ ದೇವತೆಗೆ ಪ್ರೇಮಿಗಳ ದಿನದ ಶುಭಾಶಯ ಎಂದಿದ್ದಾನೆ ಜಯಂತ್.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ಮಂಗಳಾ - ಮಹಾಲಕ್ಷ್ಮೀ
