ಜಾನು ನೆನಪಿನಲ್ಲಿ ಹುಚ್ಚನಂತೆ ಆಡುತ್ತಿದ್ದಾನೆ ಜಯಂತ; ರಾತ್ರಿಯಿಡೀ ಚಿನ್ನುಮರಿ ಬರುತ್ತಾಳೆ ಎಂದು ಕಾದು ಕುಳಿತ ಸೈಕೋ: ಲಕ್ಷ್ಮೀ ನಿವಾಸ
ಕನ್ನಡ ಸುದ್ದಿ  /  ಮನರಂಜನೆ  /  ಜಾನು ನೆನಪಿನಲ್ಲಿ ಹುಚ್ಚನಂತೆ ಆಡುತ್ತಿದ್ದಾನೆ ಜಯಂತ; ರಾತ್ರಿಯಿಡೀ ಚಿನ್ನುಮರಿ ಬರುತ್ತಾಳೆ ಎಂದು ಕಾದು ಕುಳಿತ ಸೈಕೋ: ಲಕ್ಷ್ಮೀ ನಿವಾಸ

ಜಾನು ನೆನಪಿನಲ್ಲಿ ಹುಚ್ಚನಂತೆ ಆಡುತ್ತಿದ್ದಾನೆ ಜಯಂತ; ರಾತ್ರಿಯಿಡೀ ಚಿನ್ನುಮರಿ ಬರುತ್ತಾಳೆ ಎಂದು ಕಾದು ಕುಳಿತ ಸೈಕೋ: ಲಕ್ಷ್ಮೀ ನಿವಾಸ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 11ರ ಸಂಚಿಕೆಯಲ್ಲಿ ಜಯಂತನಿಗೆ ಚಿನ್ನುಮರಿ ಇನ್ನಿಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವನು ಮನೆಯಲ್ಲಿ ಎಲ್ಲ ಕಡೆ ಹುಡುಕಾಡುತ್ತಿದ್ದಾನೆ. ಆದರೂ ಅವನಿಗೆ ಚಿನ್ನಮರಿ ನೆನಪು ಹೋಗುತ್ತಿಲ್ಲ.

ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿ (ZEE Kannada facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 11ರ ಸಂಚಿಕೆಯಲ್ಲಿ ಜಾಹ್ನವಿ ಇಲ್ಲದ ಮನೆ, ಬದುಕನ್ನು ಊಹಿಸಿಕೊಳ್ಳಲು ಕೂಡ ಜಯಂತನಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವನು ಮನೆಯ ತುಂಬಾ ಚಿನ್ನುಮರಿ, ಚಿನ್ನು ಮರೀ ಎಂದು ಕೂಗುತ್ತಾ ಅಲೆದಾಡುತ್ತಿದ್ದಾನೆ. ಮನೆಯಲ್ಲಿ ಜಾಹ್ನವಿ ಫೋಟೊಗೆ ಶಾರದಮ್ಮ ಇರಿಸಿದ ಹೂವು, ಅಗರಬತ್ತಿಯನ್ನು ಕೂಡ ಜಯಂತ ಹೊರಗೆ ಎಸೆದಿದ್ದಾನೆ. ನನ್ನ ಚಿನ್ನುಮರಿ ಸತ್ತಿಲ್ಲ, ಅವಳು ಇನ್ನೂ ಬದುಕಿದ್ದಾಳೆ. ಹೀಗಿರುವಾಗ ನೀವು ಅವಳನ್ನು ಹೀಗೆ ಪೂಜೆ ಮಾಡುವುದು, ಕಾರ್ಯ ಮಾಡುವುದು ಸರಿಯಲ್ಲ, ಅದನ್ನು ನಾನು ಇಷ್ಟಪಡುವುದಿಲ್ಲ, ನನ್ನ ಚಿನ್ನುಮರಿ ಮತ್ತೆ ವಾಪಸ್ ಬರುತ್ತಾಳೆ ಎಂದು ಹೇಳುತ್ತಾನೆ. ಹೀಗಾಗಿ ಶಾರದಮ್ಮ ಸುಮ್ಮನಾಗುತ್ತಾರೆ.

ಮತ್ತೊಂದೆಡೆ ಚೆಲ್ವಿ ದೂರಿನ ಕುರಿತು ಈಗ ಜವರೇಗೌಡ್ರ ಮನೆಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಎಲ್ಲ ಮುಗಿದು, ಪರಿಸ್ಥಿತಿ ಶಾಂತವಾಗಿದೆ ಎನ್ನುವಾಗ, ಆಕ್ಸಿಡೆಂಟ್ ಕೇಸ್‌ನಲ್ಲಿ ಜವರೇಗೌಡ್ರ ಮಗ ಸಿದ್ದೇಗೌಡನ ಬದಲಿಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವುದು ವೆಂಕಿ ಎನ್ನುವುದು ಗೊತ್ತಾಗಿದೆ. ಮರಿಗೌಡನ ಮಾತು ಕೇಳಿ ನಾನು ಕೆಟ್ಟೆ ಎಂದು ಜವರೇಗೌಡ್ರು ಪರಿತಪಿಸುತ್ತಿದ್ದಾರೆ, ಮತ್ತೊಂದೆಡೆ ಪ್ರಕಾಶ ಕೂಡ ವೆಂಕಿ, ಜವರೇಗೌಡ್ರರ ಬೀಗರ ಕಡೆಯ ಸಂಬಂಧಿ ಎನ್ನುವುದು ತಿಳಿದು ಬೆಚ್ಚಿಬಿದ್ದಿದ್ದಾನೆ. ಅವನಿಗೆ ಈಗ ಪರಿಸ್ಥಿತಿಯನ್ನು ಹೇಗೆ ಸರಿಪಡಿಸುವುದು ಎನ್ನುವುದೇ ದೊಡ್ಡ ತಲೆನೋವಾಗಿವೆ.

ಇತ್ತ ಜಾಹ್ನವಿ, ನರಸಿಂಹನ ಜತೆ ಹೋಗಿದ್ದರೂ, ಅವಳಿನ್ನೂ ಮನೆಯೊಳಗೆ ಕಾಲಿಟ್ಟಿಲ್ಲ. ಬದಲಾಗಿ ಹೊರಗಡೆ ಗೆಸ್ಟ್ ರೂಮ್‌ನಲ್ಲಿ ಇದ್ದಾಳೆ. ಅವಳಿಗೆ ಅಲ್ಲಿಯೇ ಊಟ, ತಿಂಡಿ ಕೊಡುತ್ತಿದ್ದಾರೆ. ಅವಳನ್ನು ಮನೆಯವರಿಗೆ ಪರಿಚಯಿಸಬೇಕು, ನನ್ನ ಜೀವ ಉಳಿಸಿದ ಅವಳನ್ನು ಮನೆಯವರು ನೋಡಬೇಕು ಎನ್ನುವುದು ನರಸಿಂಹನ ಒತ್ತಾಸೆಯಾಗಿದೆ.

ಜಯಂತ ಮತ್ತೆ ಮೊದಲಿನಂತೆ ಸೈಕೋ ತರ ಆಡುತ್ತಿರುವುದನ್ನು ನೋಡಿ ಶಾರದಮ್ಮಗೆ ತಲೆ ಕೆಟ್ಟು ಹೋಗಿದೆ. ಇಂತವನ ಜತೆ ಸಂಸಾರ ಮಾಡುವ ಬದಲು ಜಾನು ಹೋಗಿದ್ದೇ ಒಳ್ಳೆಯದಾಯಿತು ಎಂದು ಅವರು ಅಂದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಜಯಂತ, ಜಾಹ್ನವಿ ತವರುಮನೆಯಲ್ಲಿ ಅವಳಿಗೆ ಬಡಿಸಿದ ಎಡೆಯನ್ನು ಜಾನು ಯಾವುದಾದರೂ ರೂಪದಲ್ಲಿ ಬಂದು ಸೇವಿಸುತ್ತಾಳೆ. ಅವಳಿಗೆ ಇಷ್ಟವಾದರೆ ಖಂಡಿತಾ ಅವಳು ಇಲ್ಲಿಗೆ ಬರುತ್ತಾಳೆ ಎಂದು ಹೇಳಿರುವುದನ್ನು ನಂಬಿದ್ದಾನೆ. ಅದಕ್ಕಾಗಿ ಕಾದು ಕುಳಿತಿದ್ದಾನೆ.

ಜಾನು ಬರುತ್ತಾಳೆ, ಮತ್ತೆ ಇಲ್ಲಿಯೇ ನನ್ನ ಜೊತೆ ಇರುತ್ತಾಳೆ ಎಂದು ಜಯಂತ ಊಟ, ತಿಂಡಿ ಮತ್ತು ನಿದ್ರೆ ಬಿಟ್ಟು ಕಾಯುತ್ತಿದ್ದಾನೆ. ಅವನ ಸ್ಥಿತಿ ನೋಡಿ ಜಾನು ಮನೆಯವರಿಗೆ ಕೂಡ ತಲೆಬಿಸಿ ಆರಂಭವಾಗಿದೆ. ಅವರು ಕೇಳಿಕೊಂಡರೂ, ಜಯಂತ ಅಲ್ಲಿ ಬಂದು ಉಳಿಯಲು ಮುಂದಾಗುತ್ತಿಲ್ಲ, ಮನೆಯಲ್ಲಿ ಕೂಡ ಶಾರದಮ್ಮ ಜತೆ ಜಯಂತ ಜಗತಳವಾಡುತ್ತಿದ್ದಾನೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಏಪ್ರಿಲ್ 11ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner