ಆಕ್ಸಿಡೆಂಟ್ ಮಾಡಿದ್ದು ಸಿದ್ದೇಗೌಡ; ಮರಿಗೌಡನ ಮುಂದೆ ಸತ್ಯ ಬಿಚ್ಚಿಟ್ಟ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಮರಿಗೌಡನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಜವರೇಗೌಡ್ರು ಬಂದಿದ್ದಾರೆ. ಅಲ್ಲಿ, ಮರಿಗೌಡನ ಬಳಿ ಆಕ್ಸಿಡೆಂಟ್ ಮತ್ತು ಕೇಸ್ ವಿಚಾರವಾಗಿ ಮಾತನಾಡಿದ್ದಾರೆ. ಅಕ್ಸಿಡೆಂಟ್ ಮಾಡಿದ್ದು ಸಿದ್ದೇಗೌಡನೇ ಎಂದು ಜವರೇಗೌಡ್ರು ಹೇಳಿದ್ದಾರೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಎಚ್ಚರ ತಪ್ಪಿದ್ದ ಲಕ್ಷ್ಮೀಯನ್ನು ವೈದ್ಯರು ಪರಿಶೀಲಿಸಿ ತೆರಳಿದ್ದಾರೆ. ಹಾಗೆ ಹೋಗುವ ಮೊದಲು, ನೀವು ಲಕ್ಷ್ಮೀಯನ್ನು ಚೆನ್ನಾಗಿ ನೋಡಿಕೊಳ್ಳಿ. ಇಲ್ಲದಿದ್ದರೆ ಅವರಿಗೆ ಬಿಪಿ ಜತೆಗೆ ಹೃದಯ ಸಂಬಂಧಿ ಕಾಯಿಲೆ ಕೂಡ ಬರಬಹುದು, ಅದರಿಂದ ಮುಂದೆ ಅಪಾಯವಿದೆ ಎಂದು ಹೇಳುತ್ತಾರೆ. ಅದನ್ನು ಕೇಳಿ ಶ್ರೀನಿವಾಸ್‌ಗೆ ಚಿಂತೆಯಾಗುತ್ತದೆ. ಅತ್ತ ಲಕ್ಷ್ಮೀ ಬಳಿ ತೆರಳಿದ ಶ್ರೀನಿವಾಸ್, ಆತ್ಮೀಯವಾಗಿ ಮಾತನಾಡುತ್ತಾ, ಬೇಗನೇ ಹುಷಾರಾಗು ಎಂದು ಹೇಳಿದ್ದಾರೆ. ನಾವೆಲ್ಲರೂ ಖುಷಿಯಿಂದ ಇರೋಣ, ಅದಕ್ಕೆ ನೀನು ಬೇಗನೇ ಚೇತರಿಸಿಕೊಳ್ಳಬೇಕು ಎನ್ನುತ್ತಾರೆ.
ಇನ್ನೊಂದೆಡೆ, ಮನೆ ಭಾಗವಾಗಿದ್ದು, ವೀಣಾ ಮತ್ತು ಸಿಂಚನಾ ಇಬ್ಬರೂ ಪ್ರತ್ಯೇಕವಾಗಿ ಅಡುಗೆ ಮಾಡಲು ಮುಂದಾಗುತ್ತಾರೆ. ಸಿಂಚನಾಗೆ ಹೇಗೆ ಬೇಳೆ ಸಾರು ಮಾಡುವುದು ಎಂದು ತಿಳಿದಿಲ್ಲ. ಅದಕ್ಕಾಗಿ ಅವಳು ಮೊಬೈಲ್‌ನಲ್ಲಿ ವಿಡಿಯೊ ನೋಡುತ್ತಾ ಬೇಳೆ ಸಾರು ಮಾಡುವ ಬಗೆಯನ್ನು ನೋಡುತ್ತಾಳೆ. ಆಗ ವೀಣಾ ಬಂದು, ನನ್ನಲ್ಲಿ ಕೇಳಿದರೆ ನಾನೇ ಹೇಳುತ್ತಿದ್ದೆ ಅಥವಾ ನಾನೇ ಮಾಡಿಕೊಡುತ್ತಿದ್ದೆ ಎಂದು ಹೇಳುತ್ತಾಳೆ. ಅವಳ ಮಾತು ಕೇಳಿ ಸಿಂಚನಾಗೆ ಕೋಪ ಬರುತ್ತದೆ. ಯಾಕೆ ನೀವು ನನಗೆ ತೊಂದರೆ ಕೊಡುತ್ತೀರಿ, ನನ್ನಷ್ಟಕೇ ಇರಲು ಬಿಡಿ, ಇಲ್ಲದಿದ್ದರೆ ನಾನು ಬೇರೆ ಮನೆ ಮಾಡಿಕೊಂಡು ಹೋಗುವೆ ಎನ್ನುತ್ತಾಳೆ.
ಮರಿಗೌಡನ ಮುಂದೆ ಸತ್ಯ ಬಿಚ್ಚಿಟ್ಟ ಜವರೇಗೌಡ್ರು
ಮರಿಗೌಡ ಕೇಸ್ ವಿಚಾರವಾಗಿ ಜವರೇಗೌಡ್ರ ಜತೆಗೆ ಪೊಲೀಸ್ ಠಾಣೆಗೆ ತೆರಳುತ್ತಾನೆ. ಆದರೆ, ಅವರು ಆತನನ್ನು ಹೋಟೆಲ್ ಒಂದಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ, ಅಂದು ಏನಾಯಿತು, ಅಕ್ಸಿಡೆಂಟ್ ಹೇಗಾಯಿತು ಮತ್ತು ಸಿದ್ದೇಗೌಡ ಹೇಗೆ ಇದರಲ್ಲಿ ಸಿಲುಕಿಕೊಂಡ ಎಂದು ಮರಿಗೌಡನಲ್ಲಿ ತಿಳಿಸುತ್ತಾರೆ. ಆಗ ಮರಿಗೌಡನಿಗೆ ಹೆಂಡತಿ ಫೋನ್ ಮಾಡುತ್ತಾಳೆ. ಅವಸರದಲ್ಲಿ ಆತ ಕರೆ ಕಟ್ ಮಾಡುವುದನ್ನು ಮರೆತು, ಫೋನ್ ಅನ್ನು ಹಾಗೆಯೇ ಕಿಸೆಯಲ್ಲಿ ಇರಿಸಿಕೊಳ್ಳುತ್ತಾನೆ. ಅತ್ತ ಕಡೆಯಲ್ಲಿ ಮರಿಗೌಡನ ಹೆಂಡತಿ ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುತ್ತಾಳೆ.
ಮರಿಗೌಡನಿಗೆ ಈ ಕೇಸ್ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಬೇಡ, ನೀನು ಸುಮ್ಮನೆ ಇದ್ದುಬಿಡು, ಇಲ್ಲವಾದರೆ ಸಿದ್ದೇಗೌಡನಿಗೆ ತೊಂದರೆ ತಪ್ಪಿದ್ದಲ್ಲ ಎಂದು ಜವರೇಗೌಡ್ರು ಹೇಳುತ್ತಾರೆ. ಆಗ, ಮರಿಗೌಡ ಸರಿ ಎಂದು ಸುಮ್ಮನಾಗುತ್ತಾನೆ. ಕೇಸ್ ವಿಚಾರದಲ್ಲಿ ನಾನು ಎಲ್ಲವನ್ನೂ ಸರಿ ಮಾಡುತ್ತೇನೆ, ಎಸ್‌ಪಿ ಅವರಿಗೆ, ಪೊಲೀಸರಿಗೂ ಸೂಚನೆ ಕೊಟ್ಟಿದ್ದೇನೆ ಎಂದು ಜವರೇಗೌಡ್ರು ಹೇಳುತ್ತಾರೆ. ನಂತರ ಅಲ್ಲಿಂದ ತೆರಳುತ್ತಾರೆ. ಆಗ ಮರಿಗೌಡನಿಗೆ, ನಾನು ಫೋನ್ ಕಾಲ್ ಕಟ್ ಮಾಡಿಲ್ಲ, ಇಷ್ಟರವರೆಗೆ ಕಾಲ್ ಆನ್ ಆಗಿತ್ತು, ಎಲ್ಲವನ್ನೂ ಹೆಂಡತಿ ಕೇಳಿಸಿಕೊಂಡಿದ್ದಾಳೆ ಎಂದು ಶಾಕ್‌ಗೆ ಒಳಗಾಗುತ್ತಾನೆ. ಅಲ್ಲಿಗೆ ಮಂಗಳವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ