ಮನೆಯಲ್ಲಿ ಎಲ್ಲ ಕಡೆ ಕ್ಯಾಮೆರಾ ಕಂಡ ಜಾಹ್ನವಿ; ಸಿದ್ಧೇಗೌಡನ ಬಳಿ ಪ್ರಮಾಣ ಮಾಡಿಸಿಕೊಂಡ ಮರಿಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಫೆಬ್ರುವರಿ 12ರ ಸಂಚಿಕೆಯಲ್ಲಿ ಮರಿಗೌಡ ಮತ್ತು ಸಿದ್ದೇಗೌಡ ಬಳಿ ಜವರೇಗೌಡ್ರು ಮಾತನಾಡಿದ್ದಾರೆ. ಮರಿಗೌಡ, ಸಿದ್ದೇಗೌಡನ ಬಳಿ ಇನ್ನೆಂದೂ ಅಕ್ಸಿಡೆಂಟ್ ವಿಚಾರ ಪ್ರಸ್ತಾಪಿಸುವುದಿಲ್ಲ ಮತ್ತು ಅಪ್ಪ, ಅಣ್ಣ ಹೇಳಿದಂತೆ ಕೇಳುವೆ ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾರೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಫೆಬ್ರುವರಿ 12ರ ಸಂಚಿಕೆಯಲ್ಲಿ ಸಿದ್ಧೇಗೌಡನ ನಡವಳಿಕೆ ಕಂಡು ಮರಿಗೌಡನಿಗೆ ಕಿರಿಕಿರಿ ಉಂಟಾಗುತ್ತದೆ. ಆತ, ಸಿದ್ದೇಗೌಡನನ್ನು ಬಳಿಗೆ ಕರೆದು, ನಾನು ನಿನ್ನ ಅಣ್ಣ, ನಿನ್ನ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ಅರಿವಾಗುತ್ತದೆ. ಹೀಗಾಗಿ, ನೀನು ಯಾವುದನ್ನೂ ಮುಚ್ಚಿಡಬಾರದು, ನೀನು ಮನೆಯಲ್ಲಿ ಸದಾ ಖುಷಿಖುಷಿಯಾಗಿರಬೇಕು, ಆಗ ಮಾತ್ರ ಭಾವನಾ ಮತ್ತು ನೀನು ಇಬ್ಬರೂ ಖುಷಿಯಾಗಿ ಇರುತ್ತೀರಿ ಎನ್ನುತ್ತಾನೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಸಿದ್ದೇಗೌಡ, ನನಗೆ ಆ ಘಟನೆ ಮರೆಯಲಾಗುತ್ತಿಲ್ಲ ಎಂದು ಹೇಳುತ್ತಾನೆ. ಆದರೆ ಈ ಸಂಗತಿ ಬಹಿರಂಗವಾದರೆ ನಿನಗೆ ತೊಂದರೆ ತಪ್ಪಿದ್ದಲ್ಲ ಎಂದು ಮರಿಗೌಡ ಎಚ್ಚರಿಸುತ್ತಾನೆ, ಅದಕ್ಕಾಗಿ ನೀನು ನಾವು ಹೇಳಿದಂತೆ ಕೇಳಿಕೊಂಡು ಸುಮ್ಮನೆ ಇರಬೇಕು ಎಂದು ಹೇಳುತ್ತಾನೆ. ಕೊನೆಗೆ ಸಿದ್ದೇಗೌಡ ವಿಧಿಯಿಲ್ಲದೇ ಒಪ್ಪಿಗೆ ಸೂಚಿಸುತ್ತಾನೆ. ಜತೆಗೆ ಮರಿಗೌಡನಿಗೆ ಭಾಷೆ ಕೊಡುತ್ತಾನೆ.
ದೇವಸ್ಥಾನಕ್ಕೆ ಹೊರಟ ಸಿದ್ದೇಗೌಡ ಮತ್ತು ಭಾವನಾ
ಮರಿಗೌಡನಿಗೆ ಭಾಷೆ ಕೊಟ್ಟ ಬಳಿಕ, ಸಿದ್ದೇಗೌಡ, ಎಲ್ಲವನ್ನು ಮರೆತು ಇನ್ನು ಮುಂದೆ ಹೊಸ ಜೀವನ ಆರಂಭಿಸುತ್ತೇನೆ ಎಂದು ಹೇಳುತ್ತಾನೆ. ಅದಕ್ಕಾಗಿ, ಭಾವನಾ ಜತೆ ದೇವಸ್ಥಾನಕ್ಕೆ ಹೋಗಿ ಬನ್ನಿ, ಇಬ್ಬರೂ ದೇವರ ದರ್ಶನ ಮಾಡಿಕೊಂಡು, ಖುಷಿಯಾಗಿರಿ ಎಂದು ಮರಿಗೌಡ ಸಿದ್ದೇಗೌಡನಿಗೆ ಸೂಚಿಸುತ್ತಾನೆ. ಆಗ ಸಿದ್ದೇಗೌಡನಿಗೂ ಅದು ಸರಿ ಎನ್ನಿಸುತ್ತದೆ, ಆತ ಭಾವನಾಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ.
ಮನೆ ತುಂಬಾ ಕ್ಯಾಮೆರಾ ಕಂಡು ಹುಡುಕಿದ ಜಾಹ್ನವಿ
ಇತ್ತ ಮನೆಯಲ್ಲಿ ಜಯಂತ್ ಇಲ್ಲದಿರುವ ಸಮಯ ನೋಡಿಕೊಂಡ ಜಾಹ್ನವಿ, ಮನೆಯ ಹಾಲ್‌ನಲ್ಲಿ ಎಲ್ಲ ಕಡೆ ಹುಡುಕುತ್ತಾಳೆ, ಆಗ ಅಲ್ಲಿ ಕೆಲವು ಕಡೆ ರಹಸ್ಯ ಕ್ಯಾಮೆರಾ ಕಂಡು ಅವಳು ದಂಗಾಗುತ್ತಾಳೆ. ಮನೆಯ ಹಾಲ್‌ನ ಶೋ ಪೀಸ್, ಹೂಗುಚ್ಛ, ಅಲಂಕಾರಿಕ ವಸ್ತುಗಳು, ಹೀಗೆ ಎಲ್ಲೆಂದರಲ್ಲಿ ಜಯಂತ್ ರಹಸ್ಯ ಕ್ಯಾಮೆರಾ ಇಟ್ಟಿರುವುದು ಜಾಹ್ನವಿಗೆ ಗೊತ್ತಾಗುತ್ತದೆ. ಇತ್ತ ಮನೆಗೆ ಬರುವ ದಾರಿಯಲ್ಲಿ ಜಯಂತ್, ಚಿನ್ನುಮರಿ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂದು ಕ್ಯಾಮೆರಾ ನೋಡುತ್ತಾನೆ. ಆಗ ಕ್ಯಾಮೆರಾದಲ್ಲಿ ಯಾವುದೇ ದೃಶ್ಯ ಕಾಣಿಸುವುದಿಲ್ಲ. ಯಾಕೆಂದರೆ ಜಾಹ್ನವಿ ಎಲ್ಲ ಕ್ಯಾಮೆರಾ ತೆಗೆದಿರುತ್ತಾಳೆ. ಆದರೂ ಸಂಶಯದಿಂದ ಮನೆಗೆ ಬಂದು ನೋಡಿದಾಗ, ಅಲ್ಲಿ ವಿದ್ಯುತ್ ಕಡಿತಗೊಂಡಿರುತ್ತದೆ. ಅದನ್ನು ವಿಚಾರಿಸಿದ ಜಯಂತ್, ವಿದ್ಯುತ್ ಬೋರ್ಡ್‌ನಲ್ಲಿ ಫ್ಯೂಸ್ ಟ್ರಿಪ್ ಆಗಿತ್ತು ಎಂದು ಅದನ್ನು ಸರಿಪಡಿಸುತ್ತಾನೆ. ಇತ್ತ ಜಾಹ್ನವಿ ನಿಮಗೆ ಕಾಫಿ ಮಾಡಿಕೊಂಡು ಬರುತ್ತೇನೆ ಎಂದು ಹೊರಗಡೆ ಹೋಗುತ್ತಾಳೆ.
ಅಡುಗೆ ಮಾಡಲು ಪ್ರಯತ್ನಿಸಿದ ಸಿಂಚನಾ
ಮನೆಯಲ್ಲಿ ಸಿಂಚನಾ, ಅಡುಗೆ ಮಾಡಲು ಯತ್ನಿಸುತ್ತಿದ್ದಾಳೆ. ವಿಡಿಯೊ ನೋಡಿಕೊಂಡು ಅಡುಗೆ ವಿಧಾನವನ್ನು ನೋಡುತ್ತಿದ್ದಾಳೆ. ಆಗ ವೀಣಾ ಬಂದು ನೋಡಿ, ಅವಳನ್ನು ಗೇಲಿ ಮಾಡುತ್ತಾಳೆ. ಅದಕ್ಕೆ ಸಿಂಚನಾ ಮುಖ ಸಿಂಡರಿಸಿಕೊಂಡು ಹೋಗುತ್ತಾಳೆ. ಇತ್ತ ಲಕ್ಷ್ಮೀ ಆರೋಗ್ಯದಲ್ಲೂ ಸುಧಾರಿಸಿಲ್ಲ. ಅಲ್ಲಿಗೆ ಬುಧವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ