ಹರೀಶನ ಕುತ್ತಿಗೆ ಹಿಡಿದು ಕಪಾಳಕ್ಕೆ ಬಾರಿಸಿದ ವೆಂಕಿ; ಮನೆಬಿಟ್ಟು ಹೋದ ಲಕ್ಷ್ಮೀ ದಂಪತಿ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ಲಕ್ಷ್ಮೀ ನಿವಾಸದಲ್ಲಿ ದೊಡ್ಡ ಅವಾಂತರವೇ ನಡೆದಿದೆ. ಲಕ್ಷ್ಮೀ ದಂಪತಿ ಮನೆ ಬಿಟ್ಟು ಹೋಗಿದ್ದಾರೆ. ವೀಣಾಳಿಂದ ವಿಷಯ ತಿಳಿದುಕೊಂಡ ವೆಂಕಿ, ಮನೆಗೆ ಧಾವಿಸಿ ಬಂದು, ಹರೀಶನ ಕಪಾಳಕ್ಕೆ ಬಾರಿಸಿದ್ದಾನೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ಸಿದ್ದೇಗೌಡ ಮತ್ತು ಭಾವನಾ ದಂಪತಿ ನಡುವೆ ಮತ್ತೆ ಸರಸ ಮೂಡುವ ಲಕ್ಷಣ ಕಾಣಿಸುತ್ತಿದೆ. ಆದರೆ ಮಧ್ಯೆ ಸೌಪರ್ಣಿಕ ಫೋನ್ ಕರೆ ಮಾಡಿ, ಕೇಸ್ ವಿಚಾರ ಪ್ರಸ್ತಾಪಿಸಿದ್ದಾಳೆ, ಅದಕ್ಕೆ ಭಾವನಾ, ಮಾವ ಜವರೇಗೌಡ್ರು ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಕೇಸ್ ಬೇಗ ವಿಚಾರಣೆ ನಡೆಯಬಹುದು ಎಂದು ಹೇಳುತ್ತಾಳೆ. ನಂತರ ಖುಷಿಯ ಜತೆ ಮಾತನಾಡಿ ಎಂದು ಅವಳಿಗೆ ಫೋನ್ ಕೊಡುತ್ತಾಳೆ, ಅಲ್ಲಿಯೇ ಇದ್ದ ಸಿದ್ದೇಗೌಡನಿಗೆ ಇವರ ಮಾತು ಕೇಳಿ ಮತ್ತೆ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಆದರೂ ಆತ ಅದನ್ನು ತೋರಿಸದೆ ಸುಮ್ಮನಾಗುತ್ತಾನೆ. ಇನ್ನೊಂದು ಕಡೆಯಲ್ಲಿ ಮರಿಗೌಡನ ಜತೆ ಹೆಂಡತಿ ನೀಲು, ಒಗಟು ಒಗಟಾಗಿ ಮಾತನಾಡುತ್ತಾಳೆ. ಆಗ ಆತನಿಗೆ ಇವಳಿಗೆ ಎಲ್ಲ ವಿಷಯ ತಿಳಿದಿದೆ ಎಂದು ಹೆದರುತ್ತಾನೆ.
ಮನೆ ಬಿಟ್ಟು ಹೋದ ಲಕ್ಷ್ಮೀ ದಂಪತಿ
ಮತ್ತೊಂದೆಡೆ ಲಕ್ಷ್ಮೀ ನಿವಾಸದಲ್ಲಿ ಬಹಳ ದೊಡ್ಡ ಅವಾಂತರ ನಡೆದಿದೆ. ಲಕ್ಷ್ಮೀ ದಂಪತಿ ಮನೆ ಬಿಟ್ಟು ಹೋಗಿದ್ದಾರೆ. ಹೋಗುವಾಗ ಮನೆಯಲ್ಲಿ ಪತ್ರ ಬರೆದಿಟ್ಟು ಹೋಗಿದ್ದಾರೆ, ಆ ಪತ್ರವು ವೀಣಾಳ ಕಣ್ಣಿಗೆ ಬೀಳುತ್ತದೆ. ವೀಣಾ ಅದನ್ನು ಗಮನಿಸಿ ನೋಡಿ, ಶಾಕ್‌ಗೆ ಒಳಗಾಗುತ್ತಾಳೆ. ನಂತರ ಪತ್ರವನ್ನು ಓದಿದಾಗ, ಲಕ್ಷ್ಮೀ ಮತ್ತು ಶ್ರೀನಿವಾಸ್ ಮನೆ ಬಿಟ್ಟು ಹೋಗಿದ್ದು, ಮಾನಸಿಕ ಶಾಂತಿ ಮತ್ತು ನೆಮ್ಮದಿಗಾಗಿ ಕುಂಭಮೇಳಕ್ಕೆ ಹೋಗುವುದಾಗಿ ಬರೆದಿದ್ದಾರೆ. ಆದರೆ ಈ ವಿಚಾರವನ್ನು ಹರೀಶ್ ಅಥವಾ ಸಂತೋಷ್ ಜತೆ ಹೇಳುವಂತಿಲ್ಲ ಎಂದು ಅವಳು ವೆಂಕಿಗೆ ಕರೆ ಮಾಡಿ ತಿಳಿಸುತ್ತಾಳೆ.
ಹರೀಶ ಮತ್ತು ಸಂತೋಷ್ ಈ ಬಗ್ಗೆ ಗಮನಿಸಿದಾಗ, ಅವರಿಗೇನೂ ಕಡಿಮೆಯಾಗಿಲ್ಲ, ದುಡ್ಡು ಉಳಿಸಲು ಇಬ್ಬರು ನಮ್ಮೆಲ್ಲರನ್ನು ಬಿಟ್ಟು ಅವರೇ ಕುಂಭಮೇಳಕ್ಕೆ ಹೋಗಿದ್ದಾರೆ. ಮರಳಿ ವಾಪಸ್ ಬರುತ್ತಾರೆ, ಅದಕ್ಕೆ ಚಿಂತೆ ಯಾಕೆ ಎಂದು ಕೇವಲವಾಗಿ ಮಾತನಾಡುತ್ತಾರೆ. ಅದು ವೀಣಾಗೆ ಕೋಪ ತರಿಸುತ್ತದೆ.
ಮನೆಗೆ ಧಾವಿಸಿ ಬಂದ ವೆಂಕಿ
ವಿಷಯ ತಿಳಿದ ವೆಂಕಿ, ಹೆಂಡತಿಯನ್ನು ಕರೆದುಕೊಂಡು ಮನೆಗೆ ಧಾವಿಸಿ ಬರುತ್ತಾನೆ. ಬರುವಾಗಲೇ ಅವನಿಗೆ ಮನೆ ಭಾಗ ಮಾಡಿರುವುದು ಕಾಣಿಸುತ್ತದೆ. ಈ ಬಗ್ಗೆ ವೀಣಾ ಬಳಿ ಕೇಳಿ, ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಲಕ್ಷ್ಮೀ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಮತ್ತು ಅವರಿಬ್ಬರೂ ಮನೆ ಬಿಟ್ಟು ಹೋಗಿದ್ದು, ಕುಂಭಮೇಳಕ್ಕೆ ಹೋಗಿರುವ ಸಂಗತಿಯನ್ನು ಕೂಡ ತಿಳಿಸುತ್ತಾಳೆ. ಅದಕ್ಕೆ ಅವನು ಸಂತೋಷ್ ಮತ್ತು ಹರೀಶನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ.
ಹರೀಶನಿಗೆ ಕೆನ್ನೆಗೆ ಬಾರಿಸಿದ ವೆಂಕಿ
ಹರೀಶ್, ಸಂತೋಷ ಮತ್ತು ವೆಂಕಿಯ ಮಧ್ಯೆ ಮಾತು ಬೆಳೆಯುತ್ತಾ ಹೋಗುತ್ತದೆ. ವೆಂಕಿಗೆ ಹರೀಶ, ನೀನು ಮನೆ ಬಿಟ್ಟು ತೆರಳು, ನಿನಗೆ ಇಲ್ಲಿ ಯಾವ ಹಕ್ಕೂ ಇಲ್ಲ ಎಂದಾಗ ತಾಳ್ಮೆ ಕಳೆದುಕೊಂಡ ವೆಂಕಿ, ಹರೀಶನ ಕೆನ್ನೆಗೆ ಬಾರಿಸುತ್ತಾನೆ. ಲಕ್ಷ್ಮೀ ಮತ್ತು ಶ್ರೀನಿವಾಸ್ ಮರಳಿ ಬರುವವರೆಗೂ ತಾನು ಇಲ್ಲಿಂದ ಕದಲುವುದಿಲ್ಲ ಎಂದು ಅಲ್ಲಿಯೇ ಕೂರುತ್ತಾನೆ. ಅಲ್ಲಿಗೆ ಗುರುವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ