ಆರತಿ ಮಾಡಿ ಚಿನ್ನುಮರಿ ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಸೈಕೋ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಜಯಂತ್ ಕೊನೆಗೂ ಜಾಹ್ನವಿಯ ಮನವೊಲಿಸಿ ಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾನೆ. ಮತ್ತೊಂದೆಡೆ ಶ್ರೀನಿವಾಸ್ ಅಟೋ ರಿಕ್ಷಾ ಕೈಕೊಟ್ಟಿದೆ. ಹೀಗಾಗಿ ಅದನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾರೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಲಕ್ಷ್ಮೀ ನಿವಾಸದಿಂದ ಕೊನೆಗೂ ಜಾಹ್ನವಿಯನ್ನು ಜಯಂತ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಾಹ್ನವಿ ಅಲ್ಲಿಂದ ಬರುವುದಿಲ್ಲ ಎಂದು ಕೇಳಿಕೊಂಡರೂ, ಜಯಂತ್ ಕೇಳಿಲ್ಲ, ಬದಲಾಗಿ ಅತ್ತೆ ಮಾವನ ಬಳಿ, ಜಾಹ್ನವಿ ಜೊತೆಗಿಲ್ಲದಿದ್ದರೆ, ನನಗೆ ಊಟವೇ ಸೇರುವುದಿಲ್ಲ, ಕೈಕಾಲು ಕೂಡ ಆಡುವುದಿಲ್ಲ, ಅಷ್ಟೊಂದು ಅವಲಂಬಿತನಾಗಿದ್ದಾನೆ ಎಂದು ಹೇಳುತ್ತಾನೆ. ಹೀಗಾಗಿ ಅವನ ಮಾತು ಕೇಳಿದ ಜಾನು ಅಪ್ಪ ಅಮ್ಮ ಅವಳನ್ನು ಜಯಂತ್ ಜತೆ ಹೋಗುವಂತೆ ಸೂಚಿಸುತ್ತಾರೆ, ಕೊನೆಗೆ ವಿಧಿಯಿಲ್ಲದೇ ಜಾಹ್ನವಿ ಜಯಂತ್ ಜತೆ ಮನೆಗೆ ಹೋಗುತ್ತಾಳೆ.
ಇತ್ತ ಮನೆಯಿಂದ ಹೊರಗೆ ಅಟೋದಲ್ಲಿ ದುಡಿಯಲು ಹೊರಟ ಶ್ರೀನಿವಾಸ್, ರಸ್ತೆಯ ಮಧ್ಯದಲ್ಲಿ ಅಟೋ ಒಮ್ಮೆಲೆ ನಿಂತುಬಿಟ್ಟಿದೆ. ಕೊನೆಗೆ ಪರಿಶೀಲಿಸಿದಾಗ, ಇಂಜಿನ್ ಕೈಕೊಟ್ಟಿರುವುದು ನೆನಪಾಗಿದೆ. ಅಟೋದ ಮೂಲಕವೇ ಜೀವನ ಸಾಗಿಸುತ್ತಿದ್ದ ಶ್ರೀನಿವಾಸ್‌ಗೆ, ಈಗ ಜೀವನಾಧಾರವೇ ಕೈಕೊಟ್ಟಿರುವುದು ಒಮ್ಮೆಲೆ ಅವರಿಗೆ ಸಮಸ್ಯೆಯಾಗಿದೆ. ಅಟೋ ರಿಪೇರಿ ಮಾಡಿಸುವುದು ಬಹಳ ಕಷ್ಟ ಮತ್ತು ಅದಕ್ಕೆ ಹೆಚ್ಚಿನ ಖರ್ಚಾಗುತ್ತದೆ ಎಂದು ಮೆಕ್ಯಾನಿಕ್ ಹೇಳಿರುವುದು ಶ್ರೀನಿವಾಸ್‌ಗೆ ದಿಕ್ಕೇ ತೋಚದಂತಾಗಿದೆ.
ಮನೆಗೆ ಬಂದು ಅಜ್ಜಿಯ ಜೊತೆ ಶ್ರೀನಿವಾಸ್ ಮಾತನಾಡುತ್ತಾ ಕುಳಿತಿದ್ದಾರೆ. ಅದೇ ಸಂದರ್ಭದಲ್ಲಿ ಅಜ್ಜಿಯ ಕೈಬೆರಳು ಅಲ್ಲಾಡಿಸಿದಂತಾಗಿದೆ. ಅಜ್ಜಿ ಕೈಬೆರಳು ಅಲ್ಲಾಡುವುದನ್ನು ನೋಡಿದ ಕೂಡಲೇ ಶ್ರೀನಿವಾಸ್, ಮನೆಯವರು ಎಲ್ಲರನ್ನೂ ಕೂಗಿ ಕರೆದಿದ್ದಾರೆ. ಮನೆಯವರು ಬಂದು ನೋಡಿದಾಗಲೂ, ಅಜ್ಜಿ ಪ್ರತಿಕ್ರಿಯೆ ನೀಡುತ್ತಿರುವುದು ಕಂಡುಬಂದಿದೆ. ಕೂಡಲೇ ಶ್ರೀನಿವಾಸ್, ಹರೀಶ್ ಬಳಿ ವೈದ್ಯರನ್ನು ಕರೆಸುವಂತೆ ಹೇಳಿದ್ದಾರೆ. ಹರೀಶ ಅದು ಇದು ಎಂದಾಗ, ವೈದ್ಯರ ಫೀಸ್ ನಾನೇ ಕೊಡುತ್ತೇನೆ, ಮೊದಲು ಅಜ್ಜಿಯನ್ನು ಕರೆಸು ಎಂದು ಹೇಳಿದ್ದಾರೆ. ನಂತರ ವೈದ್ಯರಿಗೆ ಹರೀಶ ಕರೆ ಮಾಡಿದ್ದಾನೆ.
ಆರತಿ ಮಾಡಿ ಮನೆಗೆ ಜಾಹ್ನವಿಯನ್ನು ಬರಮಾಡಿಕೊಂಡ ಜಯಂತ್
ಮತ್ತೊಂದೆಡೆ ಜಯಂತ್, ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ನಂತರ ಮನೆಯೊಳಗೆ ಕರೆದುಕೊಂಡು ಹೋಗದೇ, ಬಾಗಿಲಿನಲ್ಲಿಯೇ ನಿಲ್ಲಿಸಿದ್ದಾನೆ. ಬಳಿಕ, ಮನೆಯೊಳಗಿನಿಂದ ಆರತಿ ತೆಗೆದುಕೊಂಡು ಬಂದು, ಜಾಹ್ನವಿಗೆ ಆರತಿ ಮಾಡಿ ದೃಷ್ಟಿ ತೆಗೆದಿದ್ದಾನೆ. ಜಯಂತ್‌ನ ಈ ವರ್ತನೆ ಜಾಹ್ನವಿಗೆ ವಿಚಿತ್ರ ಅನ್ನಿಸಿದೆ. ನಾನು ಮೊದಲ ಬಾರಿ ಮನೆಗೆ ಬಂದಿಲ್ಲ, ಆದರೂ ಯಾಕೆ ನೀವು ಆರತಿ ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ.
ನಂತರ ನೀವು ನನ್ನನ್ನೆ ಕೇಳದೇ, ಹೇಳದೇ ಎಲ್ಲಿಗೂ ಹೋಗಬಾರದು ಎಂದು ಜಾಹ್ನವಿಗೆ ಜಯಂತ್ ಹೇಳುತ್ತಾನೆ. ಆಗ ಜಾಹ್ನವಿ, ನಾನು ನನ್ನ ತವರು ಮನೆಗೆ ಹೋಗಿದ್ದು, ಅದಕ್ಕೂ ನಾನು ನಿಮ್ಮನ್ನು ಕೇಳಬೇಕಾ ಎಂದು ಜಯಂತ್ ವಿರುದ್ದ ಕೋಪಗೊಳ್ಳುತ್ತಾಳೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಮಾರ್ಚ್ 13ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ